ಭಾರತದಿಂದ ಬಹು-ಹಂತದ ಮಲೇರಿಯಾ ಲಸಿಕೆ ‘ಆಡ್‌ಫಾಲ್ಸಿವ್ಯಾಕ್ಸ್’ ಅಭಿವೃದ್ಧಿ
ನವದೆಹಲಿ: 'ಆಡ್‌ಫಾಲ್ಸಿವ್ಯಾಕ್ಸ್' ಎಂಬ ಹೊಸ ಸ್ಥಳೀಯ ಲಸಿಕೆ ಅಭ್ಯರ್ಥಿಯನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತವು ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ.
ಈ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ತನ್ನ ಸಂಸ್ಥೆಗಳಾದ ಆರ್‌ಎಂಆರ್‌ಸಿ ಭುವನೇಶ್ವರ ಮತ್ತು ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆ (ಎನ್‌ಐಎಂಆರ್) ಮೂಲಕ ಜೈವಿಕ ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ರೋಗನಿರೋಧಕ ಸಂಸ್ಥೆ (ಡಿಬಿಟಿ-ಎನ್‌ಐಐ) ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುತ್ತಿದೆ.
ಆಡ್‌ಫಾಲ್ಸಿವ್ಯಾಕ್ಸ್ ಒಂದು ವಿಶಿಷ್ಟವಾದ ಮಲೇರಿಯಾ ಲಸಿಕೆಯಾಗಿದ್ದು, ಇದು ಅತ್ಯಂತ ಮಾರಕ ರೂಪದ ಮಲೇರಿಯಾಕ್ಕೆ ಕಾರಣವಾದ ಪರಾವಲಂಬಿ ಪ್ಲಾಸ್ಮೋಡಿಯಂ ಫಾಲ್ಸಿಪ್ಯಾರಮ್‌ನ ಎರಡು ಪ್ರಮುಖ ಹಂತಗಳನ್ನು ಗುರಿಯಾಗಿರಿಸಿಕೊಳ್ಳುತ್ತದೆ.
ಅಸ್ತಿತ್ವದಲ್ಲಿರುವ ಹೆಚ್ಚಿನ ಲಸಿಕೆಗಳು ಪರಾವಲಂಬಿಯ ಜೀವನ ಚಕ್ರದ ಒಂದು ಹಂತದ ಮೇಲೆ ಮಾತ್ರ ಕೇಂದ್ರೀಕರಿಸುತ್ತವೆ, ಆದರೆ ಆಡ್‌ಫಾಲ್ಸಿವ್ಯಾಕ್ಸ್ ಅನ್ನು ಮಾನವ ಸೋಂಕಿನ ಹಂತ ಮತ್ತು ಸೊಳ್ಳೆಗಳ ಮೂಲಕ ಹರಡುವ ಹಂತ ಎರಡನ್ನೂ ಗುರಿಯಾಗಿಸಿಕೊಂಡು ಬಲವಾದ ಮತ್ತು ದ...









