
ಕರ್ನಾಟಕಕ್ಕೂ ಗುಡ್ ನ್ಯೂಸ್; ₹18,509 ಕೋಟಿ ವೆಚ್ಚದ 3 ರೈಲ್ವೆ ಯೋಜನೆಗಳಿಗೆ ಕೇಂದ್ರ ಒಪ್ಪಿಗೆ
ನವದೆಹಲಿ: ದೆಹಲಿ, ಹರಿಯಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ 12 ಜಿಲ್ಲೆಗಳನ್ನು ಒಳಗೊಂಡ ಮೂರು ಬಹು-ಟ್ರ್ಯಾಕಿಂಗ್ ರೈಲ್ವೆ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ನೀಡಿದೆ. ಯೋಜನೆಗಳ ಒಟ್ಟು ವೆಚ್ಚ ₹18,509 ಕೋಟಿ ಎಂದು ಅಧಿಕೃತ ಮಾಹಿತಿ ತಿಳಿಸಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಸಾರಾ–ಮನ್ಮಾಡ್, ದೆಹಲಿ–ಅಂಬಾಲಾ ಹಾಗೂ ಬಳ್ಳಾರಿ–ಹೊಸಪೇಟೆ ಮಾರ್ಗಗಳಲ್ಲಿ 3ನೇ ಮತ್ತು 4ನೇ ಹಳಿ ನಿರ್ಮಾಣ ಯೋಜನೆಗಳು ಇದರಲ್ಲಿ ಸೇರಿವೆ.ಈ ಯೋಜನೆಗಳೊಂದಿಗೆ ಭಾರತೀಯ ರೈಲ್ವೆಯ ಜಾಲವು ಸುಮಾರು 389 ಕಿ.ಮೀ. ವಿಸ್ತರಿಸಲಿದ್ದು, ಸುಮಾರು 97 ಲಕ್ಷ ಜನಸಂಖ್ಯೆ ಹೊಂದಿರುವ 3,902 ಹಳ್ಳಿಗಳಿಗೆ ಸಂಪರ್ಕ ಸುಧಾರಣೆ ದೊರೆಯಲಿದೆ. ಹೆಚ್ಚುವರಿ ಮಾರ್ಗ ಸಾಮರ್ಥ್ಯದಿಂದ ಸಂಚಾರ ದಟ್ಟಣೆ ತಗ್ಗಿ, ಕಾರ್ಯಾಚರಣಾ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆ ಹೆಚ್ಚಲಿದೆ ಎಂದು ಸರ್ಕಾರ ತಿಳಿಸಿದೆ.ಯೋಜನೆಗಳು ಪಿಎಂ-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ರೂಪಿಸಲ್ಪಟ್ಟಿದ್ದು...









