
‘ಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ವ್ಯರ್ಥ ಪ್ರಯತ್ನ ಬಿಡಿ’: ಬಿಜೆಪಿಗೆ ದಿನೇಶ್ ಕಿವಿಮಾತು
ಬೆಂಗಳೂರು: ಜನತೆಯ ಎದುರು ಸುಳ್ಳಿನ ಸರಮಾಲೆಗಳೆನ್ನೇ ಹಣೆದು, ಬಿಬಿಎಂಪಿ ಆಸ್ತಿಗಳನ್ನೇ ಅಡವಿಟ್ಟು ಆಡಳಿತ ನಡೆಸಿದ್ದು ನಿಮ್ಮ ಜಾಯಮಾನ. 2008- 2013ರ ನಿಮ್ಮ ಅವಧಿಯಲ್ಲಿ ಅದೆಷ್ಟು ಆಸ್ತಿಗಳನ್ನು ಅಡವಿಟ್ಟಿದ್ರಿ ಎನ್ನೋದನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಆ ಆಸ್ತಿಗಳನ್ನು ಸಾಲಮುಕ್ತಗೊಳಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಆಸ್ಪತ್ರೆಗಳ ಅವ್ಯವಸ್ಥೆ ಕುರಿತ ಬಿಜೆಪಿ ಟೀಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ಯುಪಿಎ ಸರ್ಕಾರ ಇದ್ದಾಗ 2014ರಲ್ಲಿ ಭಾರತದ ಸರ್ಕಾರದ ಸಾಲ ₹55 ಲಕ್ಷ ಕೋಟಿ ಇತ್ತು. ನಿಮ್ಮ ಆಡಳಿತದ ಹತ್ತು ವರ್ಷದ ಅದು ಬರೋಬ್ಬರಿ ₹200 ಲಕ್ಷ ಕೋಟಿಗೂ ಅಧಿಕವಾಗಿದೆ. ನಿಮ್ಮದೇ ಕೇಂದ್ರ ಸರ್ಕಾರ ಮಾಡಿರುವ ಈ ಬೆಟ್ಟದಷ್ಟು ಸಾಲ ಎಲ್ಲೆಲ್ಲಿ ವಿನಿಯೋಗವಾಗಿದೆ ಎನ್ನುವ ಲೆಕ್ಕ ಕೊಡ್ತೀರಾ? ಎಂದು ಪ್ರಶ್ನಿಸಿದ್ದಾರೆ.ಜನರಿಗೆ ನಾವು ನೀಡಿದ ಭರವಸೆಯಂತೆ ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡು ಬಂದಿದೆ. ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡಿದ್ದು ಸ್ವಾವಲಂಬಿ ಬದುಕು ಕಲ್ಪಿಸಿಕೊಟ್ಟಿದ್ದೇವೆ. ...









