ಕಲಬುರಗಿ, ಬೀದರ್ ನಿಂದ ಸಹಿತ ಪ್ರಾದೇಶಿಕ ವಿಮಾನ ಸಂಪರ್ಕ ಬಲಪಡಿಸಲು ಉಡಾನ್ ಯೋಜನೆ ಮುಂದುವರಿಸಲು ಆಗ್ರಹ
ಬೆಳಗಾವಿ: ಪ್ರಾದೇಶಿಕ ವಿಮಾನ ಸಂಪರ್ಕವನ್ನು ಬಲಪಡಿಸಲು ಉಡಾನ್ ಸೇವೆ 10ವರ್ಷಗಳಿಗೆ ಮುಂದುವರೆಸುವ ಅಗತ್ಯವಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದ ಭೂ ಸ್ವಾಧೀನ ಹಾಗೂ ಇಲ್ಲಿನ ಕಟ್ಟಡಗಳ ವೆಚ್ಚವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಭರಿಸಿದೆ.ಉಡಾನ್ ಯೋಜನೆ ಈ ಮಾರ್ಗದಲ್ಲಿ ಕೇವಲ 3 ವರ್ಷಗಳ ಕಾಲ ಮಾತ್ರ ಜಾರಿಯಲ್ಲಿದ್ದು, ನಂತರ ಸ್ಥಗಿತಗೊಂಡಿವೆ. ಈ ಮಾರ್ಗದಲ್ಲಿ ಪ್ರಸ್ತುತ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಯ ವಿಮಾನ ಸೇವೆಯನ್ನು ಮುಂದುವರಿಸುವ ಉದ್ದೇಶದಿಂದ, ಉಡಾನ್ ಯೋಜನೆಯಡಿ ಅರ್ಹ ನಿರ್ವಾಹಕರಿಂದ ಹೊಸದಾಗಿ ಬಿಡ್ಗಳನ್ನು ಆಹ್ವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ನಾಗರಿಕ ವಿಮಾನ ಮಾರ್ಗಗಳಿಗೆ ನೀಡಲಾಗುತ್ತಿರುವ ಹಣಕಾಸು ನೆರವು ಪ್ರಸ್ತುತ ಕೇವಲ 3 ವರ್ಷಗಳಿಗೆ ಮಾತ್ರ ಸೀಮಿತವಾಗಿದೆ. ಈ ಅವಧಿ ಮುಗಿದ ಬಳಿಕ ಹಲವು ಪ್ರದೇಶಗಳಲ್ಲಿ ವಿಮಾನ ಸೇವೆಗಳು ಸ್ಥಗಿತಗೊಳ್ಳುತ್ತಿದೆ. ಪ್ರಯಾಣಿಕರ ಸಂಖ್ಯೆ ಹಾಗೂ ಮಾರ್ಗದ ಸ್ಥಿರತೆ ಸಾಧಿಸಲು ಮೂರು ವರ್ಷಗಳ ಅವಧಿ ...








