Friday, January 30

Focus

ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

ರಾಜಮೌಳಿಯ ‘ವಾರಣಾಸಿ’ ಚಿತ್ರದಲ್ಲಿ ರುದ್ರನಾಗಿ ಮಹೇಶ್ ಬಾಬು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಹೈದರಾಬಾದ್: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ, ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಬೃಹತ್ ಚಿತ್ರಕ್ಕೆ ‘ವಾರಣಾಸಿ’ ಎಂಬ ಶೀರ್ಷಿಕೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಚಿತ್ರದಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಕೇಂದ್ರ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬುದನ್ನೂ ಈ ಸಂದರ್ಭದಲ್ಲಿ ಬಹಿರಂಗಪಡಿಸಲಾಯಿತು. ಚಿತ್ರದ ಅದ್ಭುತ ಶೀರ್ಷಿಕೆ ಟೀಸರನ್ನು ಬಿಡುಗಡೆ ಮಾಡಿ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳಿಗೆ ವಿಶೇಷ ಉಡುಗೊರಿಯನ್ನು ನೀಡಲಾಯಿತು. ಕಾಲವೂ ಪ್ರದೇಶಗಳೂ ಬದಲಾಗುವ ಕಥಾಸರಣಿಯೊಂದಿಗಿನ ಈ ಕ್ಲಿಪ್‌ಗೆ ಭಕ್ತಿಪರ ಸ್ಟೈಲ್ ಶೈಲಿ ಒಡನಾಟ ನೀಡಿದೆ. https://youtu.be/jDGETw3YAHc?si=hGv-bqVVEOWe8uId ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ರಾಜಮೌಳಿ, “ಸಾಮಾನ್ಯವಾಗಿ ನಾನು ಪತ್ರಿಕಾಗೋಷ್ಠಿಗಳಲ್ಲಿ ಕಥೆ ಹಂಚಿಕೊಳ್ಳುತ್ತೇನೆ. ಆದರೆ ಈ ಚಿತ್ರದ ಪ್ರಮಾಣ, ವ್ಯಾಪ್ತಿಯನ್ನು ಪದಗಳಿಂದ ವಿವರಿಸಲು ಸಾಧ್ಯವಿಲ್ಲವೆಂದು ಮನಸ್ಸಿಗೆ ಬಂತು. ಅದಕ್ಕಾಗಿ ಘೋಷಣೆ ವೀಡಿಯೋಗೆ ಮುಂದಾದೆವು. ಒಂದು ಮಾತನ್ನೂ ಆಡದೆ, ಚಿತ್ರದ ಸ್ಕೇಲ್ ಅನ್ನು ತೋರಿಸಲು ಬಯಸಿದೆವು,” ಎ...
ಬಿಹಾರದಲ್ಲಿ ಜೆಡಿಯು–ಬಿಜೆಪಿ ಗೆಲುವಿನ ಜೋಡಿ ಮತ್ತೆ ಅಧಿಕಾರಕ್ಕೆ

ಬಿಹಾರದಲ್ಲಿ ಜೆಡಿಯು–ಬಿಜೆಪಿ ಗೆಲುವಿನ ಜೋಡಿ ಮತ್ತೆ ಅಧಿಕಾರಕ್ಕೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಪಾಟ್ನಾ: ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮತ್ತೆ ಜನಮನ್ನಣೆ ದೊರೆತಿದೆ. ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಸ್ಪಷ್ಟ ಬಹುಮತದ ಜಯಭೇರಿ ಬಾರಿಸಿದ್ದು, ರಾಜ್ಯದಾದ್ಯಂತ ವಿಜಯೋತ್ಸವದ ಸಂಭ್ರಮ ಹರಡಿದೆ. ಈ ಬಾರಿ ಬಿಹಾರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಭರವಸೆ ಬೆಳೆಸಿಕೊಂಡಿದ್ದ ಕಾಂಗ್ರೆಸ್‌ ನೇತೃತ್ವದ ಮಹಾಘಟಬಂಧನದ ಕನಸು ಭಗ್ನಗೊಂಡಿದೆ. ಜನತೆ ಮತದಾನದಿಂದಲೇ ತಮ್ಮ ತೀರ್ಪು ಪ್ರಕಟಿಸಿದ್ದು, NDA ದಿಕ್ಕಿನತ್ತ ಸ್ಪಷ್ಟ ಆದೇಶ ನೀಡಿದೆ. 243 ಸ್ಥಾನಗಳಿರುವ ವಿಧಾನಸಭೆಯಲ್ಲಿ NDA ಭಾರೀ ಮುನ್ನಡೆ ಸಾಧಿಸಿ 202 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. JDU 85 ಸ್ಥಾನಗಳನ್ನು ಗೆದ್ದರೆ, ಪ್ರಮುಖ ಮಿತ್ರಪಕ್ಷವಾದ ಭಾರತೀಯ ಜನತಾ ಪಕ್ಷ 89 ಸ್ಥಾನಗಳನ್ನು ಪಡೆದುಕೊಂಡಿದೆ. ಉಳಿದ ಮಿತ್ರಪಕ್ಷಗಳು 28 ಸ್ಥಾನಗಳನ್ನು ಗೆದ್ದು NDAಯ ಬಲವನ್ನು 200ರ ಗಡಿಯಾಚೆಗೆ ಕೊಂಡೊಯ್ದಿವೆ. ಇನ್ನೊಂದೆಡೆ, ಮಹಾಘಟಬಂಧನಕ್ಕೆ ಗಂಭೀರ ಹಿನ್ನಡೆ ಎದುರಾಗಿದೆ. ರಾಷ್ಟ್ರಿಯ ಜನತಾ ದಳ (RJD) 25 ಸ್ಥಾನಗಳಿಗೆ ತೃಪ್ತಿಪಟ್ಟ...

ಬಿಹಾರದಲ್ಲಿ ಬಿಜೆಪಿ ಪರವಾದ ಸ್ಟಾರ್ ಪ್ರಚಾರಕರಾದರೇ ರಾಹುಲ್?

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಗುವಾಹಟಿ: ಬಿಹಾರ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ವೋಟ್ ಚೋರಿ’ ಹೇಳಿಕೆಯೇ ಪಕ್ಷಕ್ಕೆ ತಿರುಗುಬಾಣವಾಗಿದೆಯೇ? ಎಂದು ಪ್ರಶ್ನೆಗಳು ಎದ್ದಿವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಹೇಳಿಕೆಯನ್ನು ಗುರಿಯಾಗಿ ಕಟುವಾಗಿ ಟೀಕಿಸಿದ್ದು, ರಾಹುಲ್ ಗಾಂಧಿ ಮಾಡಿದ ಆರೋಪ ಜನರ ಮನಸ್ಸಿನಲ್ಲಿ ಪ್ರತಿಕೂಲ ಪರಿಣಾಮ ಬೀರಿದಂತೆಯೇ, ಅದು ಬಿಜೆಪಿಗೆ ಹೆಚ್ಚುವರಿ ಜನಾದೇಶ ತಂದುಕೊಟ್ಟಿದೆ ಎಂದರು. ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಶರ್ಮಾ, “ರಾಹುಲ್ ಗಾಂಧಿಯವರ ‘ವೋಟ್ ಚೋರಿ’ ಹೇಳಿಕೆಯನ್ನು ಜನರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಬದಲಿಗೆ, ಈ ಹೇಳಿಕೆ ಕಾಂಗ್ರೆಸ್‌ ವಿರುದ್ಧ ಜನಪ್ರತಿಕ್ರಿಯೆ ಹುಟ್ಟುಹಾಕಿತು. ಆಕ್ರೋಶ ಮತವಾಗಿ ಹೊರಹೊಮ್ಮಿ ಬಿಹಾರದಲ್ಲಿ ಕಾಂಗ್ರೆಸ್ ಸಂಪೂರ್ಣ ಕುಸಿತ ಅನುಭವಿಸಿತು. ಜನರು ಕಾಂಗ್ರೆಸ್ ಅನ್ನು ರಾಜ್ಯದ ರಾಜಕೀಯ ಸಮೀಕರಣದಿಂದಲೇ ಹೊರಗೆ ತಳ್ಳಿದ್ದಾರೆ. NDAಗೆ ಭಾರೀ ಜನಾದೇಶವೇ ಅದಕ್ಕೆ ಸಾಕ್ಷಿ,” ಎಂದು ವಾಗ್ದಾಳಿ ನಡೆಸಿದರು. ಬಿಹಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀ...
ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; 6 ಪೊಲೀಸರು ಸಾವು

ದೆಹಲಿ ವಿಧ್ವಂಸದ ಬೆನ್ನಲ್ಲೇ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸ್ಫೋಟ; 6 ಪೊಲೀಸರು ಸಾವು

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಶ್ರೀನಗರ: ದೆಹಲಿ ಸ್ಫೋಟದ ಬೆನ್ನಲ್ಲೇ ಕಣಿವೆ ರಾಜ್ಯ ಮತ್ತೆ ಆತಂಕಕ್ಕೆ ಒಳಗಾಗಿದೆ. ಜಮ್ಮು–ಕಾಶ್ಮೀರದ ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಆರು ಮಂದಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದು, 27 ಮಂದಿ ಗಾಯಗೊಂಡಿದ್ದಾರೆ. ಉಗ್ರರಿಂದ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳು ಆಕಸ್ಮಿಕವಾಗಿ ಸ್ಫೋಟಗೊಂಡ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ತನಿಖೆ ಮುಂದುವರೆಸಿವೆ. ಹರಿಯಾಣದ ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕ ವಸ್ತುಗಳ ಮಾದರಿಯನ್ನು ನೌಗಾಮ್ ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಸುಮಾರು 360 ಕಿಲೋಗ್ರಾಂ ತೂಕದ ಸ್ಫೋಟಕಗಳಲ್ಲಿ ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿದ್ದ ಇದೇ ಠಾಣೆಯಲ್ಲಿ ಇಡಲಾಗಿತ್ತು. ಸಂಗ್ರಹಣೆಯ ಸಮಯದಲ್ಲೇ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ 6 ಪೊಲೀಸರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡವರಿಗೆ ಸಮೀಪದ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ....
ಬಿಹಾರದಲ್ಲಿನ ಹೀನಾಯ ಸೋಲಿನ ಬಗ್ಗೆ ಮಹಾಘಟಬಂಧನ್ ಆತ್ಮವಲೋಕನ

ಬಿಹಾರದಲ್ಲಿನ ಹೀನಾಯ ಸೋಲಿನ ಬಗ್ಗೆ ಮಹಾಘಟಬಂಧನ್ ಆತ್ಮವಲೋಕನ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ 40 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳನ್ನು ಪಡೆದು ಹೀನಾಯ ಸೋಲುಂಡಿದೆ. ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಮಹಾಘಟಬಂಧನ್ ಕನಸು ಭಗ್ನವಾಗಿದ್ದು, ಈ ಬಗ್ಗೆ ಇದೀಗ ಮೈತ್ರಿಪಕ್ಷಗಳು ಆತ್ಮವಳಿಕಣಕ್ಕೆ ಮುಂದಾಗಿವೆ. ಫಲಿತಾಂಶ ಬಹಿರಂಗವಾಗುತ್ತಿದ್ದಂತೆಯೇ, ಬಿಹಾರದ ಉಸ್ತುವಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತದಾರರ ಅಭಿಪ್ರಾಯಗಳು, ಬೂತ್ ಮಟ್ಟದ ವ್ಯತ್ಯಾಸಗಳು ಮತ್ತು ಇವಿಎಂ ಚಲನೆಯ ದಾಖಲೆಗಳ "ವಿಧಿವಿಜ್ಞಾನ ಲೆಕ್ಕಪರಿಶೋಧನೆ"ಗೆ ಸೂಚನೆ ನೀಡಿದ್ದಾರೆ. ಇನ್ನೊಂದೆಡೆ, ಇಂಡಿಯಾ ಬ್ಲಾಕ್‌ನೊಳಗೆ ಚಿಂತನ-ಮಂಥನ ಸಾಗಿದೆ. ಆರ್‌ಜೆಡಿಯ ತೇಜಸ್ವಿ ಯಾದವ್ ಅವರ ಪಕ್ಷ 75 ರಿಂದ 31 ಸ್ಥಾನಗಳಿಗೆ ಕುಸಿದಿದೆ. ರಾಹುಲ್ ಗಾಂಧಿಯವರ "ನೈತಿಕ ಸ್ಪಷ್ಟತೆ"ಯನ್ನು ಶ್ಲಾಘಿಸಿರುವ ತೇಜಸ್ವಿ ಯಾದವ್, ಆದರೆ ಸಾಂಸ್ಥಿಕ ವಿಧ್ವಂಸಕತೆಯ ಮೇಲೆ ಮಾತ್ರ ಗಮನಹರಿಸುವ ಬದಲು "ಸಾಂಸ್ಥಿಕ ಕುಸಿತ"ದ ಮೇಲೆ ಕೇಂದ್ರೀಕರಿಸಬೇಕೆಂದು ಸಲಹೆ ಮುಂದಿಟ್ಟಿದ್ದಾರೆ. ಸಿಪಿಐ(ಎಂಎಲ್) ಲಿಬರೇಶನ್‌ನ ದೀಪಂಕರ್ ಭಟ್ಟಾಚಾರ್ಯ ಅವರು "ಅನ...

ಬಿಹಾರ ಫಲಿತಾಂಶ ‘ಆಶ್ಚರ್ಯಕರ’ ಎಂದ ರಾಹುಲ್ ಗಾಂಧಿ; ಸಂವಿಧಾನಕ್ಕಾಗಿ ತೀವ್ರ ಹೋರಾಟದ ಘೋಷಣೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಬಿಹಾರದ ಸೋಲಿನ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಎನ್‌ಡಿಎಯ 200 ಕ್ಕೂ ಹೆಚ್ಚು ಸ್ಥಾನಗಳ ಸಾಧನೆಯನ್ನು "ನಿಜವಾಗಿಯೂ ಆಶ್ಚರ್ಯಕರ" ಎಂದು ಹೇಳಿದ್ದಾರೆ. ಚುನಾವಣೆ "ಆರಂಭದಿಂದಲೂ ನ್ಯಾಯಯುತವಾಗಿರಲಿಲ್ಲ" ಎಂದು ಅವರು ಆರೋಪಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ, ರಾಹುಲ್ ಗಾಂಧಿ, "ಬಿಹಾರದಲ್ಲಿನ ಈ ಫಲಿತಾಂಶ ನಿಜವಾಗಿಯೂ ಆಶ್ಚರ್ಯಕರವಾಗಿದೆ. ಆರಂಭದಿಂದಲೂ ನ್ಯಾಯಯುತವಲ್ಲದ ಚುನಾವಣೆಯಲ್ಲಿ ನಾವು ಗೆಲ್ಲಲು ವಿಫಲರಾಗಿದ್ದೇವೆ. ಈ ಹೋರಾಟ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವುದು. ಕಾಂಗ್ರೆಸ್ ಪಕ್ಷ ಮತ್ತು ಭಾರತ ಮೈತ್ರಿಕೂಟ ಈ ಫಲಿತಾಂಶವನ್ನು ಆಳವಾಗಿ ಪರಿಶೀಲಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸುತ್ತದೆ" ಎಂದು ಬರೆದುಕೊಂಡಿದ್ದಾರೆ. ಮಹಾಘಟಬಂಧನ್ 40 ಸ್ಥಾನಗಳಿಗಿಂತ ಕಡಿಮೆ ಸೋತ ನಂತರ, ಸ್ಪರ್ಧಿಸಿದ್ದ 61 ಸ್ಥಾನಗಳಲ್ಲಿ ಕಾಂಗ್ರೆಸ್ 5-6 ಸ್ಥಾನಗಳಿಗೆ ಇಳಿದ ನಂತರ ಈ ಹೇಳಿಕೆ ಬಂದಿದೆ. ರಾಹುಲ್ ...
ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವೃಕ್ಷಮಾತೆ ಖ್ಯಾತಿಯ ಸಾಲುಮರ ತಿಮ್ಮಕ್ಕ ವಿಧಿವಶರಾಗಿದ್ದಾರೆ. ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಅವರು ತಮ್ಮ 114ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ಸಮೀಪ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್​​ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಮಕ್ಕಳಿಲ್ಲದ ಅವರು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದ್ದರು. ಹಾಗಾಗಿ ಅವರು ಸಾಲು ಮರದ ತಿಮ್ಮಕ್ಕೆ ಎಂದೇ ಪ್ರಸಿದ್ಧರಾದಾರು. ಅವರ ಈ ಸಾಧನೆಯನ್ನು ಗೌರವಿಸಿ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ನೀಡಿತ್ತು. ಸಂತಾಪ: ಗಿಡಮರಗಳ ಲಾಲನೆ-ಪಾಲನೆ ಪರಿಸರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಸಾವಿರಾರು ಪರಿಸರ ಪ್ರೇಮಿಗಳಿಗೆ ಆದರ್ಶವಾಗಿರುವ ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ (114 ವರ್ಷ) ಅವರು ಇಹಲೋಕ ತ್ಯಜಿಸಿದರು ಎನ್ನುವ ಸುದ್ದಿ ತಿಳಿದು ಮನಸ್ಸು ಭಾರವಾಗಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ಸಂ...

ನಸೀರುದ್ದೀನ್ ಶಾ ಅವರಿಗೂ ಸಾಟಿಯಿಲ್ಲದ ಪ್ರತಿಭೆ: ನಟಿ ಸೋನಮ್ ಖಾನ್ ಮೆಚ್ಚುಗೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಮುಂಬೈ: ಹಿರಿಯ ನಟ ನಸೀರುದ್ದೀನ್ ಶಾ ಅವರ ಪ್ರತಿಭೆಯನ್ನು ನಟಿ ಸೋನಮ್ ಖಾನ್ ಅವರು ಮೆಚ್ಚಿಕೊಂಡಿದ್ದಾರೆ. “ಅವರು ಇನ್ನೂ ಸಾಟಿಯಿಲ್ಲದ ಪ್ರತಿಭೆ,” ಎಂದು ಅವರು ಹೇಳಿದ್ದಾರೆ. 1989 ರಲ್ಲಿ ಬಿಡುಗಡೆಯಾದ ತ್ರಿದೇವ್ ಚಿತ್ರದ ಜನಪ್ರಿಯ ಹಾಡಾದ *‘ಓಯೆ ಓಯೆ’*ಯ ದುಃಖಭರಿತ ಆವೃತ್ತಿಯ ಒಂದು ಭಾಗವನ್ನು ಸೋನಮ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತ್ರಿದೇವ್ (1989), ಚೋರ್ ಪೇ ಮೋರ್ (1990), ಹಾಗೂ ವಿಶ್ವಾತ್ಮ (1992) ಚಿತ್ರಗಳಲ್ಲಿ ನಸೀರುದ್ದೀನ್ ಶಾ ಅವರ ಜೊತೆಗೆ ಅಭಿನಯಿಸಿದ ಅನುಭವವನ್ನು ನೆನಪಿಸಿಕೊಂಡ ಸೋನಮ್, “ಅವರು ನಾನು ಕೆಲಸ ಮಾಡುವ ಅವಕಾಶ ಪಡೆದ ಅತ್ಯಂತ ವಿನಮ್ರ ಮತ್ತು ಪ್ರತಿಭಾವಂತ ನಟರಲ್ಲಿ ಒಬ್ಬರು,” ಎಂದು ಬರೆದಿದ್ದಾರೆ. “#OyeOye... @naseeruddin49 ಸಾಬ್ ಅವರ ಬಹುಮುಖ ಪ್ರತಿಭೆಯೊಂದಿಗೆ 3 ಚಿತ್ರಗಳಲ್ಲಿ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತು – #Tridev #ChorPeMor #VishwatmaMovie1992. ಅವರು ನಾನು ಕೆಲಸ ಮಾಡಿದ ಅತ್ಯಂತ ವಿನಮ್ರ ನಟರಲ್ಲಿ ಒಬ್ಬರು. ಇನ್ನೂ ಸಾಟಿಯಿಲ್ಲದ ಪ್ರತಿಭೆ” ಎಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲ...
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 8 ಮಂದಿ ಸಾವು, 20 ಕ್ಕೂ ಹೆಚ್ಚು ಮಂದಿ ಗಾಯ

ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 8 ಮಂದಿ ಸಾವು, 20 ಕ್ಕೂ ಹೆಚ್ಚು ಮಂದಿ ಗಾಯ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಪುಣೆ: ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡು ಕಂಟೇನರ್ ಟ್ರಕ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ವೇಗವಾಗಿ ಬಂದ ಮತ್ತೊಂದು ಕಂಟೇನರ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬೆಂಕಿಯಿಂದ ಎರಡು ಟ್ರಕ್‌ಗಳು ಮತ್ತು ಒಂದು ಕಾರು ಸಂಪೂರ್ಣ ಸುಟ್ಟುಹೋಗಿವೆ. ಅಪಘಾತದ ತೀವ್ರತೆಯಿಂದ ಕೆಲವು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡು ಕಂಟೇನರ್‌ಗಳ ನಡುವೆ ಸಿಲುಕಿಕೊಂಡಿದ್ದ ಕಾರನ್ನು ಹೊರತೆಗೆದ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಇನ್ನೂ ಗುರುತಿಸಲಾಗಿಲ್ಲ. ಪೊಲೀಸ್ ಮೂಲಗಳ ಪ್ರಕಾರ, ಸತಾರಾದಿಂದ ಮುಂಬೈ ಕಡೆಗೆ ಸಾಗುತ್...
ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

ಮುಧೋಳದಲ್ಲಿ ಕಬ್ಬು ಬೆಳೆಗಾರರ ಆಕ್ರೋಶ; 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ

Focus, ಪ್ರಮುಖ ಸುದ್ದಿ, ರಾಜ್ಯ
ಬಾಗಲಕೋಟೆ: ಬೆಳಗಾವಿಯ ಕಬ್ಬು ಹೋರಾಟ ಶಮನಗೊಳ್ಳುತ್ತಿದ್ದಂತೆ, ಅದರ ಜ್ವಾಲೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲೂ ಹೊತ್ತಿಕೊಂಡಿದೆ. ಪ್ರತಿ ಟನ್ ಕಬ್ಬಿಗೆ ₹3,500 ನೀಡುವಂತೆ ಆಗ್ರಹಿಸುತ್ತಿರುವ ರೈತರು ಶುಕ್ರವಾರ ತಮ್ಮ ಹೋರಾಟವನ್ನು ತೀವ್ರಗೊಳಿಸಿದರು. ಮುಧೋಳ ತಾಲೂಕಿನ ಸೈದಾಪುರ ಗ್ರಾಮದ ಸಮೀರವಾಡಿ ಬಳಿಯ ಗೋದಾವರಿ ಸಕ್ಕರೆ ಕಾರ್ಖಾನೆ ಎದುರು ಸಾಲಾಗಿ ನಿಲ್ಲಿಸಿದ್ದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌-ಟ್ರಾಲಿಗಳಿಗೆ ಬೆಂಕಿಹಚ್ಚಿ ರೈತರು ಆಕ್ರೋಶ ಹೊರಹಾಕಿದರು. ಸರ್ಕಾರ ನಿಗದಿಪಡಿಸಿದ್ದ ₹3,300ರ ಬೆಲೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ರೈತರು ಕಳೆದ ವಾರದಿಂದಲೇ ಪ್ರತಿಭಟನೆ ನಡೆಸುತ್ತಿದ್ದರು. ಗುರುವಾರ ಮುಧೋಳ ಪಟ್ಟಣ ಬಂದ್ ಮಾಡಲಾಗಿತ್ತು. ಕಾರ್ಖಾನೆ ಮಾಲೀಕರು ಸಂಧಾನಕ್ಕೆ ಮುಂದಾಗದ ಹಿನ್ನೆಲೆಯಲ್ಲಿ ರೈತರು ಸಿಟ್ಟುಗೊಂಡು, ಗೋದಾವರಿ ಕಾರ್ಖಾನೆ ಕಡೆಗೆ ಮೆರವಣಿಗೆ ನಡೆಸಿದರು. ಈ ವೇಳೆ ಕಾರ್ಖಾನೆಗೆ ಕಬ್ಬು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ತಡೆದು ಬೆಂಕಿ ಹಚ್ಚಿದರುಎನ್ನಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ, ರೈತರು ಮತ್ತು ಕಾ...