
‘ಜನಸಾಮಾನ್ಯರಿಗೆ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು’: KSLU ಕುಲಪತಿ ಪ್ರೊ. ಡಾ. ಸಿ. ಬಸವರಾಜು
ಹುಬ್ಬಳ್ಳಿ: ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು—ಶಿಕ್ಷಕರು, ಶಿಕ್ಷಕೇತರರು, ನ್ಯಾಯವಾದಿಗಳು ಹಾಗೂ ವಿದ್ಯಾರ್ಥಿಗಳು—ಜನಸಾಮಾನ್ಯರಲ್ಲಿ ಅವರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಅರಿವು ಮೂಡಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (KSLU) ಕುಲಪತಿ ಪ್ರೊ. ಡಾ. ಸಿ. ಬಸವರಾಜು ಹೇಳಿದ್ದಾರೆ. ಜನರು ಕಾನೂನು ನೆರವನ್ನು ಪಡೆಯಲು ಸೂಕ್ತ ಕೇಂದ್ರಗಳಿಗೆ ಸಂಪರ್ಕಿಸುವ ಕೊಂಡಿಗಳಾಗಿ ಕೆಲಸ ಮಾಡಬೇಕೆಂದೂ ಅವರು ಸೂಚಿಸಿದ್ದಾರೆ.ಕಾನೂನು ವಿಶ್ವವಿದ್ಯಾಲಯದಲ್ಲಿ “ನವ ಯುಗದಲ್ಲಿ ಸ್ವಾತಂತ್ರ್ಯ” ವಿಷಯದಡಿ ನ್ಯಾಯಾಧೀಶ ಆರ್.ಜಿ. ದೇಸಾಯಿ ಅವರ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಸಸಿಗೆ ನೀರುಣಿಸುವುದು ಹಾಗೂ ದೇಸಾಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಕುಲಪತಿ ಪ್ರೊ. ಡಾ. ಸಿ. ಬಸವರಾಜು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳನ್ನು ಉಲ್ಲೇಖಿಸಿ, ಸಮಾನತೆ ಇಲ್ಲದ ಸ್ವಾತಂತ್ರ್ಯಕ್ಕೆ ಮೌಲ್ಯವಿಲ್ಲ ಎಂದರು. ಸಂವಿಧಾನದ ಅನುಚ್ಛೇದ 21ರಡಿ ಎಲ್ಲರಿಗೂ ಹಕ್ಕುಗಳಿದ್ದರ...








