Tuesday, January 27

Focus

ಬಳ್ಳಾರಿ ಗಲಾಟೆ: ಗುಂಡು ಹಾರಿಸಿದ ಮೂಲವನ್ನು ಪತ್ತೆಹಚ್ಚಲು ಫಾರೆನ್ಸಿಕ್ ಪರೀಕ್ಷೆ

ಬಳ್ಳಾರಿ ಗಲಾಟೆ: ಗುಂಡು ಹಾರಿಸಿದ ಮೂಲವನ್ನು ಪತ್ತೆಹಚ್ಚಲು ಫಾರೆನ್ಸಿಕ್ ಪರೀಕ್ಷೆ

Focus, ಪ್ರಮುಖ ಸುದ್ದಿ, ರಾಜ್ಯ
ಬಳ್ಳಾರಿ: ಬ್ಯಾನರ್ ಅಳವಡಿಕೆ ವಿಚಾರವಾಗಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ನಡೆದ ಗಲಾಟೆ ವೇಳೆ ಗುಂಡು ತಗುಲಿ ಮೃತಪಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವಿನ ಪ್ರಕರಣದಲ್ಲಿ ಸ್ಫೋಟಕ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿಯವರ ಗನ್‌ಮ್ಯಾನ್ ಹಾರಿಸಿದ ಗುಂಡು ತಗುಲಿಯೇ ಯುವಕ ರಾಜಶೇಖರ್ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರಕರಣದ ತನಿಖೆಯ ಭಾಗವಾಗಿ ಬ್ರೂಸ್‌ಪೇಟೆ ಪೊಲೀಸರು ಐದು ಬಂದೂಕುಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಗುಂಡು ಹಾರಿಸಿದ ಮೂಲವನ್ನು ಪತ್ತೆಹಚ್ಚಲು ಫಾರೆನ್ಸಿಕ್ ಪರೀಕ್ಷೆಗೂ ಕ್ರಮ ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿ ಎರಡೂ ಗುಂಪುಗಳ ವಿರುದ್ಧ ಪೊಲೀಸರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದು, ಇದುವರೆಗೆ 50ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ....
ನಟ ಯಶ್ ತಾಯಿ ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ತೆರವು

ನಟ ಯಶ್ ತಾಯಿ ಮನೆ ಮುಂದೆ ಜೆಸಿಬಿ ಘರ್ಜನೆ, ಕಾಂಪೌಂಡ್ ತೆರವು

Focus, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ಸುದ್ದಿಯಲ್ಲಿರುವ ನಡುವೆಯೇ, ಅವರ ತಾಯಿ ಪುಷ್ಪಾ ವಿರುದ್ಧ ಭೂ ವಿವಾದಕ್ಕೆ ಸಂಬಂಧಿಸಿದ ಬೆಳವಣಿಗೆ ಸುದ್ದಿಯ ಕೇಂದ್ರಬಿಂದುವಾಗಿದೆ. ಹಾಸನದ ವಿದ್ಯಾನಗರದಲ್ಲಿ ಭಾನುವಾರ ಬೆಳಗಿನ ಜಾವ ಜೆಸಿಬಿ ಬಳಸಿ ಕಾಂಪೌಂಡ್ ತೆರವುಗೊಳಿಸಲಾಗಿದೆ. ವಿದ್ಯಾನಗರದಲ್ಲಿರುವ ಲಕ್ಷ್ಮಮ್ಮ ಎಂಬುವರಿಗೆ ಸೇರಿದ್ದ ಜಾಗಕ್ಕೆ ಯಶ್ ಅವರ ತಾಯಿ ಪುಷ್ಪಾ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಕ್ಷ್ಮಮ್ಮ ಅವರ ಸಂಬಂಧಿ ದೇವರಾಜ್ ಈ ವಿಚಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ನ್ಯಾಯಾಲಯವು ದೇವರಾಜ್ ಪರವಾಗಿ ಆದೇಶ ನೀಡಿದೆ ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಟ Yash ತಾಯಿ ವಿರುದ್ಧ ಭೂಒತ್ತುವರಿ ಆರೋಪ.. ಯಶ್ ತಾಯಿ ವಿರುದ್ಧ ಜಿಪಿಎ ಹೋಲ್ಡರ್ ದೇವರಾಜು ಕಿಡಿ | #TV9D #TV9Kannada #Yashmother #Yash #Yashmotherpushpa #Hassan #Mysuru #Rockingstaryash #Landencroachment #H...
ತ್ರಿಶೂರ್ ರೈಲು ನಿಲ್ದಾಣ ಬಳಿ ಭಾರೀ ಅಗ್ನಿ ಅವಘಡ: 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ

ತ್ರಿಶೂರ್ ರೈಲು ನಿಲ್ದಾಣ ಬಳಿ ಭಾರೀ ಅಗ್ನಿ ಅವಘಡ: 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ತ್ರಿಶೂರ್: ತಮಿಳುನಾಡಿನ ತ್ರಿಶೂರ್ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನಿಲ್ದಾಣದ ಸಮೀಪದ ನಿಗದಿತ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ 200ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ. ಪ್ಲಾಟ್‌ಫಾರ್ಮ್ ಬಳಿಯಿರುವ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಸ್ಥಳದಲ್ಲಿ ಬೆಳಗ್ಗೆ ಸುಮಾರು 6.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪ್ರತಿದಿನ ನೂರಾರು ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್‌ಗಳು ನಿಲ್ಲಿಸುವ ಈ ಪ್ರದೇಶದಲ್ಲಿ ಬೆಂಕಿ ವೇಗವಾಗಿ ವ್ಯಾಪಿಸಿ ಭಾರೀ ಹಾನಿ ಉಂಟಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿದ್ದ ವಾಹನಗಳಲ್ಲಿ ಇಂಧನ ಇರುವುದರಿಂದ ಬೆಂಕಿ ತ್ವರಿತವಾಗಿ ಹರಡಿದ್ದು, ಕೆಲವೇ ನಿಮಿಷಗಳಲ್ಲಿ ದೊಡ್ಡ ಪ್ರಮಾಣದ ವಾಹನಗಳು ಹೊತ್ತಿ ಉರಿದಿವೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಹಲವಾರು ದಳಗಳನ್ನು ನಿಯೋಜಿಸಿ ಸುಮಾರು ಅರ್ಧ ಗಂಟೆಗಳ ಶ್ರಮದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. #Kerala: A major fire broke out at the two...
ಒಡಿಶಾ ಕಲ್ಲು ಗಣಿಯಲ್ಲಿ ಭೂ ಕುಸಿತ: ಹಲವು ಕಾರ್ಮಿಕರ ಸಾವಿನ ಶಂಕೆ

ಒಡಿಶಾ ಕಲ್ಲು ಗಣಿಯಲ್ಲಿ ಭೂ ಕುಸಿತ: ಹಲವು ಕಾರ್ಮಿಕರ ಸಾವಿನ ಶಂಕೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಭುವನೇಶ್ವರ: ಒಡಿಶಾದ ಧೆಂಕಾನಾಲ್ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ವೇಳೆ ಭಾರಿ ಭೂ ಕುಸಿತ ಸಂಭವಿಸಿ ಹಲವು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಧೆಂಕಾನಾಲ್ ಜಿಲ್ಲೆಯ ಮೊಟಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಸಮೀಪ ಶನಿವಾರ ಕಾರ್ಮಿಕರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ, ದೊಡ್ಡ ಪ್ರಮಾಣದ ಬಂಡೆಗಳು ಏಕಾಏಕಿ ಕುಸಿದು ಬಿದ್ದಿವೆ. ಘಟನೆ ಸಮಯದಲ್ಲಿ ಗಣಿಯಲ್ಲಿ ಹಲವರು ಕಾರ್ಯನಿರತರಾಗಿದ್ದರು ಎಂದು ಮೂಲಗಳು ತಿಳಿಸಿವೆ. ಭೂ ಕುಸಿತದ ಮಾಹಿತಿ ದೊರಕಿದ ತಕ್ಷಣ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯ ಮುಂದುವರಿದಿದೆ. ಘಟನೆಯ ಸಂಪೂರ್ಣ ವಿವರಗಳು ಮತ್ತು ಸಾವಿನ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಇನ್ನಷ್ಟೇ ದೃಢಪಡಿಸಬೇಕಿದೆ....
ಕರ್ನಾಟಕದ ಮುಖ್ಯಮಂತ್ರಿ ಎಂಬಂತೆ ಕೆ. ಸಿ. ವೇಣುಗೋಪಾಲ್‌ ದರ್ಪ

ಕರ್ನಾಟಕದ ಮುಖ್ಯಮಂತ್ರಿ ಎಂಬಂತೆ ಕೆ. ಸಿ. ವೇಣುಗೋಪಾಲ್‌ ದರ್ಪ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಗೊಂದಲಗಳು ತಾರಕಕ್ಕೇರಿದೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ಇನ್ನೂ ಜೀವಂತವಾಗಿದೆ. ಇದರ ನಡುವೆ ಕೇರಳದ ನಾಯಕರ ಆಣತಿಗೆ ಕಾಂಗ್ರೆಸ್ ಸರ್ಕಾರವೇ ಗಡಗಡ ನಡುಗುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ. ಕೇರಳ ಕಾಂಗ್ರೆಸ್‌ ನಾಯಕ ಕೆ. ಸಿ. ವೇಣುಗೋಪಾಲ್‌ ಅವರೇ ಕರ್ನಾಟಕದ ಮುಖ್ಯಮಂತ್ರಿ ಎಂಬಂತೆ ದರ್ಪ ತೋರಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇಷ್ಟೆಲ್ಲಾ ವಿವಾದಗಳಿರುವಾಗ, ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಗೊಂದಲದಲ್ಲಿರುವಾಗ ಬಜೆಟ್‌ ತಯಾರಿ ನಡೆಸುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿ ಯಾರೆಂಬುದು ಮೊದಲು ನಿರ್ಧರಿತವಾಗಲಿ ಎಂದು ಸಾಮಾಜಿಕ ಮಾಧ್ಯಮ X ನಲ್ಲಿ ಬರೆದುಕೊಂಡಿರುವ ಬಿಜೆಪಿ, ಕರ್ನಾಟಕದ ಜನತೆಗೆ ನಿಮ್ಮ ಕಾಟಾಚಾರದ, ದಾಖಲೆ ನಿರ್ಮಿಸಲು ಎಂದು ಮಂಡಿಸುವ ಬಜೆಟ್‌ನ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿ ಕುರ್ಚಿ ಗೊಂದಲಗಳು ತಾರಕಕ್ಕೇರಿದೆ, ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಕಿತ್ತಾಟ ಇನ್ನೂ ಜೀವಂತವಾಗಿದೆ. ಇದರ ನಡುವೆ ಕೇರಳದ ನಾ...

ಮತ್ತೆ ರಣಕಹಳೆ; ಆಶಾ ಕಾರ್ಯಕರ್ತೆಯರಿಂದ ಶನಿವಾರ ಪ್ರತಿಭಟನೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಾಕಿ ವೇತನ ಬಿಡುಗಡೆ ಮಾಡಬೇಕು ಹಾಗೂ ರೂ.10,000 ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಈ ಹೋರಾಟ ನಡೆಯಲಿದೆ ಎಂದು ಆಶಾ ಸಂಘಟನೆ ನಾಯಕಿ ಟಿ.ಸಿ.ರಮಾ ತಿಳಿಸಿದ್ದಾರೆ. ಆಶಾ, ಕಾರ್ಯಕರ್ತೆಯರಿಗೆ ನಾಲ್ಕೈದು ತಿಂಗಳಿಂದ ಬಾಕಿ ಇರುವ ವೇತನ ಮತ್ತು ಮಾನ್ಯ ಮುಖ್ಯಮಂತ್ರಿಗಳು 2025 ಜನವರಿಯಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ ರೂ.10,000 ಏಪ್ರಿಲ್ 2025 ರಿಂದ ಅನ್ವಯವಾಗುತ್ತದೆ ಎಂದು ಭರವಸೆ ನೀಡಿದ್ದರು. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಈಎರಡು ಪ್ರಮುಖ ಬೇಡಿಕೆಯೊಂದಿಗೆ ಬೆಂಗಳೂರು ಜಿಲ್ಲಾಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಟಿ.ಸಿ.ರಮಾ ತಿಳಿಸಿದ್ದಾರೆ....
ಬಳ್ಳಾರಿ ಗುಂಡಿನ ದಾಳಿ ‘ಪೂರ್ವಯೋಜಿತ’: ಜನಾರ್ದನ ರೆಡ್ಡಿ ಗುರಿಯಾಗಿಸಿ ದಾಳಿ ಆರೋಪ

ಬಳ್ಳಾರಿ ಗುಂಡಿನ ದಾಳಿ ‘ಪೂರ್ವಯೋಜಿತ’: ಜನಾರ್ದನ ರೆಡ್ಡಿ ಗುರಿಯಾಗಿಸಿ ದಾಳಿ ಆರೋಪ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬಳ್ಳಾರಿ: ನಗರದ ಬ್ಯಾನರ್ ಗಲಾಟೆ ಹಾಗೂ ಗುಂಡಿನ ದಾಳಿ ಪ್ರಕರಣ ರಾಜಕೀಯವಾಗಿ ತೀವ್ರ ತಿರುವು ಪಡೆದುಕೊಂಡಿದ್ದು, ಮಾಜಿ ಸಚಿವರಾದ ಬಿ. ಶ್ರೀರಾಮುಲು ಹಾಗೂ ಗಣಿಗಾರಿಕಾ ಉದ್ಯಮಿ ಜನಾರ್ದನ ರೆಡ್ಡಿ ಅವರು, ಈ ದಾಳಿ ಜನಾರ್ದನ ರೆಡ್ಡಿಯವರನ್ನೇ ಗುರಿಯಾಗಿಸಿಕೊಂಡು ನಡೆಸಿದ ‘ಪೂರ್ವಯೋಜಿತ ದಾಳಿ’ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ಆಕಸ್ಮಿಕ ಘಟನೆ ಅಲ್ಲ. ಜನಾರ್ದನ ರೆಡ್ಡಿಯವರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಸಂಪೂರ್ಣವಾಗಿ ಸುಟ್ಟುಹಾಕುವ ಉದ್ದೇಶದೊಂದಿಗೆ ದಾಳಿ ನಡೆಸಲಾಗಿದೆ,” ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ವಿರುದ್ಧವೂ ಅವರು ಆರೋಪ ಹೊರಿಸಿದರು. “ಕಾಂಗ್ರೆಸ್ ಕಾರ್ಯಕರ್ತರು ಕೇವಲ ಬ್ಯಾನರ್ ಕಟ್ಟಲು ಬಂದಿರಲಿಲ್ಲ. ಜನಾರ್ದನ ರೆಡ್ಡಿಯವರ ಮೇಲೆ ಗುಂಡು ಹಾರಿಸುವ ಹಾಗೂ ಮನೆಗೆ ಬೆಂಕಿ ಹಚ್ಚುವ ಉದ್ದೇಶದಿಂದಲೇ ಬಂದಿದ್ದರು. ಗುಂಡು ಗಾಳಿಗೆ ಹಾರಿಸಲ್ಪಟ್ಟಿಲ್ಲ, ಅದು ನೇರವಾಗಿ ಜನಾರ್ದನ ರೆಡ್ಡಿಯವರನ್ನೇ ಗುರಿಯಾಗಿಸಿಕೊಂಡಿತ್ತು. ದುರ್ಬಾಗ್ಯವಶಾತ್, ಅಮಾಯಕ ಯುವಕ ರಾಜಶೇಖರ್ ಪ್ರಾಣ ಕಳೆದುಕೊಂಡ...
ಬಳ್ಳಾರಿ ಘಟನೆ: ಗುಂಪುಘರ್ಷಣೆ ತನಿಖೆಗೆ ಸೂಚನೆ – ಸಿಎಂ ಸಿದ್ದರಾಮಯ್ಯ

ಬಳ್ಳಾರಿ ಘಟನೆ: ಗುಂಪುಘರ್ಷಣೆ ತನಿಖೆಗೆ ಸೂಚನೆ – ಸಿಎಂ ಸಿದ್ದರಾಮಯ್ಯ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪುಘರ್ಷಣೆ ಹಾಗೂ ಗೋಲಿಬಾರ್ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಎಂಬ ಯುವಕ ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ಘಟನೆಯಲ್ಲಿ ಬಳಸಲಾದ ಗನ್ ಯಾರಿಗೆ ಸೇರಿದ್ದು, ಹೇಗೆ ಬಳಸಲಾಗಿದೆ ಎಂಬ ಎಲ್ಲ ಅಂಶಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಸತೀಶ್ ರೆಡ್ಡಿಯವರು ಗಾಳಿಯಲ್ಲಿ ಗುಂಡು ಹಾರಿಸಲು ಯತ್ನಿಸಿದ ವೇಳೆ ಅದು ತಪ್ಪಾಗಿ ರಾಜಶೇಖರ್‌ಗೆ ತಗುಲಿರುವ ಸಾಧ್ಯತೆಯೂ ಇದೆ. ಈ ಎಲ್ಲ ಅಂಶಗಳನ್ನು ತನಿಖೆಯ ಮೂಲಕ ಸ್ಪಷ್ಟಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ತಪ್ಪಿತಸ್ಥರು ಯಾರು ಎನ್ನುವು...

ಮುಂದಿನ ವರ್ಷ ಆಗಸ್ಟ್‌ 15ಕ್ಕೆ ದೇಶಕ್ಕೆ ಆಗಮಿಸಲಿದೆ ಮೊದಲ ಬುಲೆಟ್ ರೈಲು: ಅಶ್ವಿನಿ ವೈಷ್ಣವ್

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: 2027ರ ಆಗಸ್ಟ್‌ 15ರಂದು ಭಾರತಕ್ಕೆ ಮೊದಲ ಬುಲೆಟ್ ರೈಲು ಲಭ್ಯವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಗುರುವಾರ ಮಾತನಾಡಿದ ಅವರು, “ಮುಂದಿನ ವರ್ಷ ಬುಲೆಟ್ ರೈಲು ಹಳಿಗಳ ಮೇಲೆ ಓಡಲು ಆರಂಭವಾಗಲಿದೆ. 2027ರ ಸ್ವಾತಂತ್ರ್ಯ ದಿನದಂದು ದೇಶದ ಮೊದಲ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ನಾಗರಿಕರಿಗೆ ದೊರೆಯಲಿದೆ” ಎಂದು ಹೇಳಿದರು. ವಂದೇ ಭಾರತ್ ಎಕ್ಸ್‌ಪ್ರೆಸ್ ಚೇರ್ ಕಾರ್ ರೈಲುಗಳು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಜನರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿವೆ ಎಂದು ವೈಷ್ಣವ್ ಹೇಳಿದರು. “ವಂದೇ ಭಾರತ್ ರೈಲುಗಳನ್ನು ಓಡಿಸಲು ಈಗ ದೇಶದಾದ್ಯಂತ ಬೇಡಿಕೆ ಬರುತ್ತಿದೆ. ಬಹುತೇಕ ಎಲ್ಲಾ ಸಂಸದರೂ ತಮ್ಮ ಕ್ಷೇತ್ರಕ್ಕೆ ವಂದೇ ಭಾರತ್ ರೈಲು ಬಯಸುತ್ತಿದ್ದಾರೆ. ಇದೇ ಮಾನದಂಡ, ಸೌಕರ್ಯ ಮತ್ತು ಸುರಕ್ಷತೆಯೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲುಗಳ ಮೂಲಕ ರಾತ್ರಿ ಪ್ರಯಾಣಕ್ಕೂ ಶೀಘ್ರದಲ್ಲೇ ಚಾಲನೆ ಸಿಗಲಿದೆ” ಎಂದರು. ಭಾರತದ ಮೊದಲ ಹೈ–ಸ್ಪೀಡ್ ಬುಲೆಟ್ ರೈಲು ಯೋಜನೆ ಮುಂಬೈ–ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಮಾರ್ಗವನ್...
ಕೋಗಿಲು ವಿವಾದ:  ಸರ್ಕಾರ ನಿಜವಾದ ಸಮಸ್ಯೆಯಿಂದ ಗಮನ ಬೇರೆಡೆ ತಿರುಗಿಸುತ್ತಿದೆ: ಬಿಜೆಪಿ ಶಾಸಕ

ಕೋಗಿಲು ವಿವಾದ: ಸರ್ಕಾರ ನಿಜವಾದ ಸಮಸ್ಯೆಯಿಂದ ಗಮನ ಬೇರೆಡೆ ತಿರುಗಿಸುತ್ತಿದೆ: ಬಿಜೆಪಿ ಶಾಸಕ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬೆಂಗಳೂರಿನಲ್ಲಿ ಅತಿಕ್ರಮಣಗೊಂಡ ಸರ್ಕಾರಿ ಭೂಮಿ ತೆರವು ಹಾಗೂ ಅತಿಕ್ರಮಣದಾರರ ಪುನರ್ವಸತಿ ವಿಚಾರ ರಾಜಕೀಯ ತೀವ್ರತೆ ಪಡೆದುಕೊಂಡಿರುವ ನಡುವೆ, ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ್ ಅವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅತಿಕ್ರಮಣ ಮಾಡಿದವರೆಲ್ಲರೂ ಬಾಂಗ್ಲಾದೇಶೀಯರು. ತಾಂತ್ರಿಕವಾಗಿ ಯಾರೂ ಮನೆ ಹಂಚಿಕೆಗೆ ಅರ್ಹರಲ್ಲ. ಈ ವಿಚಾರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಬೇಕು. ಇಲಾಖಾ ವರದಿಗಳಲ್ಲಿಯೇ ಇದಕ್ಕೆ ಸಾಕ್ಷ್ಯವಿದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಬಾಂಗ್ಲಾದೇಶೀಯರು ಅಕ್ರಮವಾಗಿ ನೆಲೆಸಿದ್ದಾರೆ” ಎಂದು ಹೇಳಿದರು. ಅಕ್ರಮ ವಲಸೆಯೇ ಮೂಲ ಸಮಸ್ಯೆಯಾಗಿದ್ದು, ಬಡವರಿಗೆ ಮನೆ ನೀಡುವ ನೆಪದಲ್ಲಿ ಸರ್ಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಅವರು ಆರೋಪಿಸಿದರು. “ಚರ್ಚೆ ಅಕ್ರಮ ವಲಸಿಗರ ಕುರಿತು ನಡೆಯಬೇಕಿತ್ತು. ಆದರೆ ಅದನ್ನು ಮರೆಮಾಚಿ ವಸತಿ ವಿಷಯವನ್ನೇ ಮುಂದಿಟ್ಟುಕೊಳ್ಳಲಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸ...