ಕಾಂಗ್ರೆಸ್ ಬಿಕ್ಕಟ್ಟು ನಡುವೆ ಗೃಹ ಸಚಿವ ಪರಮೇಶ್ವರ್’ಗೆ ಲಕ್?
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಯಕತ್ವದ ಚರ್ಚೆಯ ನಡುವೆಯೇ, ರಾಜ್ಯ ಗೃಹ ಸಚಿವ ಹಾಗೂ ಹಿರಿಯ ದಲಿತ ನಾಯಕ ಜಿ. ಪರಮೇಶ್ವರ ಅವರು ಈ ವರ್ಷ ‘ಬಡ್ತಿ’ ಸಿಗುವ ವಿಶ್ವಾಸದಲ್ಲಿದ್ದಾರೆ. ಆದರೆ ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್‌ಗೇ ಸೇರಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನಾಯಕತ್ವ ಬದಲಾವಣೆಯ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಸಿದ್ದರಾಮಯ್ಯ ಪಾಳಯವು ಪರಮೇಶ್ವರ ಅವರನ್ನು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂದಿಟ್ಟು ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ರಾಜಕೀಯ ಮಹತ್ವ ಪಡೆದುಕೊಂಡಿದೆ.
ತಮ್ಮ ರಾಜಕೀಯ ಜೀವನದಲ್ಲಿ ಮುಂದಿನ ಹಂತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಹೈಕಮಾಂಡ್ ನಿರ್ಧರಿಸಿದರೆ 2026ರಲ್ಲಿ ಅದು ಸಾಧ್ಯವಾಗಬಹುದು ಎಂದು ಹೇಳಿದರು. “ನಾನು ಸದಾ ಆಶಾವಾದಿಯಾಗಿ ಬದುಕಿದ್ದೇನೆ. ಇದು ಹೊಸ ವಿಚಾರವಲ್ಲ,” ಎಂದರು.
ಮಹತ್ವಾಕಾಂಕ್ಷೆ ಕುರಿತು ಮಾತನಾಡಿದ ಅವರು, “ಒಬ್ಬ ಮನುಷ್ಯನಲ್ಲಿ ಮಹತ್ವಾಕಾಂಕ್ಷೆ ಇರಬೇಕು. ರಾಜಕೀಯಕ್ಕೆ ಬಂದಾ...








