
ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ
ನವದೆಹಲಿ: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳನ್ನು ದಾಟಿದ ಮೊದಲ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ.
2014ರಲ್ಲಿ ಇನ್‌ಸ್ಟಾಗ್ರಾಮ್‌ಗೆ ಸೇರಿದ ಮೋದಿ, ಕಳೆದ ದಶಕದಲ್ಲಿ ತಮ್ಮ ಖಾತೆಯನ್ನು ಜಾಗತಿಕ ನಾಯಕರಲ್ಲಿ ಅತಿ ಹೆಚ್ಚು ಅನುಸರಿಸಲ್ಪಡುವ ವೇದಿಕೆಯಾಗಿಸಿ ಬೆಳೆಸಿದ್ದಾರೆ. ಭಾರತ ಮತ್ತು ವಿದೇಶಗಳಲ್ಲಿ ಯುವಜನತೆ ಸೇರಿದಂತೆ ವ್ಯಾಪಕ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸುವ ತಂತ್ರದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 43.2 ಮಿಲಿಯನ್ ಫಾಲೋವರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ (15 ಮಿಲಿಯನ್), ಬ್ರೆಜಿಲ್ ಅಧ್ಯಕ್ಷ ಲುಲಾ (14.4 ಮಿಲಿಯನ್), ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ (11.6 ಮಿಲಿಯನ್) ಮತ್ತು ಅರ್ಜೆಂಟೀನಾದ ಜೇವಿಯರ್ ಮಿಲೀ (6.4 ಮಿಲಿಯನ್) ಮುಂದಿನ ಸ್ಥಾನಗಳಲ್ಲಿ ಇದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮೋದಿ 106 ಮಿಲಿಯನ್‌ಕ್ಕೂ ಅಧಿಕ ಅ...








