
ಕೇಂದ್ರ ಬಜೆಟ್ ನಲ್ಲಿ ಅನಿವಾಸಿ ಭಾರತೀಯರು, ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ; ಅಮೆರಿಕದ ನೀ ತಿ ತಜ್ಞರ ವಿಶ್ಲೇಷಣೆ
ವಾಷಿಂಗ್ಟನ್: ಕೇಂದ್ರ ಬಜೆಟ್ ಮೂಲಕ ಭಾರತವು ಜಾಗತಿಕ ಬಂಡವಾಳ, ಪ್ರತಿಭೆ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯನ್ನು ಆಕರ್ಷಿಸುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದು, ಈ ಪ್ರಯತ್ನದಲ್ಲಿ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಕೇಂದ್ರ ಸ್ಥಾನ ನೀಡಲಾಗಿದೆ ಎಂದು ಅಮೆರಿಕ ಮೂಲದ ನೀತಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಜಾಗತಿಕ ಆರ್ಥಿಕ ಹಾಗೂ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆಯೂ ಬಜೆಟ್ ಭಾರತವು ದೀರ್ಘಕಾಲೀನ ಕಾರ್ಯತಂತ್ರದ ವಿಶ್ವಾಸದೊಂದಿಗೆ ಮುನ್ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಫೌಂಡೇಶನ್ ಫಾರ್ ಇಂಡಿಯಾ ಅಂಡ್ ಇಂಡಿಯನ್ ಡಯಾಸ್ಪೊರಾ ಸ್ಟಡೀಸ್ ಸಂಸ್ಥೆಯ ನೀತಿ ಹಾಗೂ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಖಂಡೇರಾವ್ ಕಾಂಡ್ ಹೇಳಿದ್ದಾರೆ.ಅನಿವಾಸಿ ಭಾರತೀಯರ ಹೂಡಿಕೆಗೆ ಸಂಬಂಧಿಸಿದಂತೆ, ವೈಯಕ್ತಿಕ ಮತ್ತು ಒಟ್ಟು ಹೂಡಿಕೆ ಮಿತಿಗಳನ್ನು ಹೆಚ್ಚಿಸಿರುವುದರಿಂದ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಎನ್‌ಆರ್‌ಐಗಳ ಭಾಗವಹಿಸುವಿಕೆ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಕ್ರಮವು ನೇರ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುವುದರ ಜೊತೆಗೆ ಹೂಡಿಕೆಗೆ ಹೆಚ್ಚು ಆಕರ್ಷ...









