
ಯುದ್ಧದ ವಿಚಾರದಲ್ಲಿ ಭಾರತದ್ದು ‘ಮೌನವಲ್ಲ, ಜವಾಬ್ದಾರಿಯುತ ರಾಜನೀತಿ’: ಮೋದಿ ಪರವಾಗಿ ತರೂರ್ ಬ್ಯಾಟಿಂಗ್?
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ನಡುವೆ ಭಾರತದ “ಮೌನ”ದ ಬಗ್ಗೆ ನಡೆಯುತ್ತಿರುವ ಟೀಕೆಗಳಿಗೆ ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor) ಸ್ಪಷ್ಟನೆ ನೀಡಿದ್ದು, ಇದನ್ನು “ಜವಾಬ್ದಾರಿಯುತ ರಾಜನೀತಿ” ಎಂದು ಸಮರ್ಥಿಸಿದ್ದಾರೆ.ದಿ ಇಂಡಿಯನ್ ಎಕ್ಸ್‌ಪ್ರೆಸ್ (The Indian Express)ನಲ್ಲಿ ಪ್ರಕಟವಾದ ಲೇಖನದಲ್ಲಿ ತರೂರ್, ಭಾರತದ ವಿದೇಶಾಂಗ ನೀತಿ ತತ್ವ ಮತ್ತು ವಾಸ್ತವಿಕತೆಯ ನಡುವೆ ಸಮತೋಲನ ಸಾಧಿಸಬೇಕಾಗಿದೆ ಎಂದು ಹೇಳಿದ್ದಾರೆ. ಇರಾನ್ ವಿರುದ್ಧ ಅಮೆರಿಕಾ (United States)–ಇಸ್ರೇಲ್ (Israel) ಯುದ್ಧದ ಕುರಿತು ಸರ್ಕಾರ ಮೌನ ವಹಿಸಿರುವುದನ್ನು ನೈತಿಕ ವೈಫಲ್ಯ ಎಂದು ಟೀಕಿಸುವವರ ವಿರುದ್ಧ ಅವರು ಪ್ರತಿಕ್ರಿಯಿಸಿದ್ದಾರೆ.ಇದಕ್ಕೂ ಮುನ್ನ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ (Sonia Gandhi) ಸರ್ಕಾರದ ಮೌನವನ್ನು ಟೀಕಿಸಿ, “ಇದು ತಟಸ್ಥವಲ್ಲ, ಜವಾಬ್ದಾರಿಯಿಂದ ದೂರ ಉಳಿಯುವಿಕೆ” ಎಂದು ಹೇಳಿದ್ದರು.ಆದರೆ ತರೂರ್, “ಯುದ್ಧ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಬಹುದು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ದೇಶದ ಹಿತಾಸಕ್ತಿಗಳು, ಪ್ರಾದೇಶಿ...








