
‘ಮುಡಾ’ ವಿಷಯದಲ್ಲಿ, ಸಿದ್ದರಾಮಯ್ಯ ತಪ್ಪಿತಸ್ಥರು, ಪ್ರಮುಖ ವಿಷಯಗಳನ್ನು ಮುಚ್ಚಿತ್ತು ಕ್ಲೀನ್ ಚಿಟ್ ನೀಡಲಾಗಿದೆ: ಬಿಜೆಪಿ ಆರೋಪ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಏಕಸದಸ್ಯ ಆಯೋಗವು ಕ್ಲೀನ್ ಚಿಟ್ ನೀಡಿದ ಬೆಳವಣಿಗೆಯನ್ನು ಬಿಜೆಪಿ ಆಕ್ಷೇಪಿಸಿದೆ. ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಹೊರಹಾಕಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಕ್ಷಣೆ ಒದಗಿಸಲು ಆಯೋಗದ ವರದಿಯನ್ನು ತಿರುಚಲಾಗಿದೆ. ವಾಸ್ತವದಲ್ಲಿ ಅವರು ಶೇ. 100ರಷ್ಟು ತಪ್ಪಿತಸ್ಥರು” ಎಂದು ಆರೋಪಿಸಿದರು.
“60 ಕೋಟಿ ರೂ. ಪಾವತಿಸಿದರೆ ನಿವೇಶನಗಳನ್ನು ಹಿಂತಿರುಗಿಸಲಾಗುತ್ತದೆ ಎಂದು ಸಿಎಂ ಸ್ವತಃ ಹೇಳಿದ್ದರು. ನಂತರ ಅವರು ಮಾತು ತಪ್ಪಿದರು. ಕ್ಲೀನ್ ಚಿಟ್‌ನಲ್ಲಿ ಹಲವು ಅಂಶಗಳನ್ನು ಮುಚ್ಚಿಡಲಾಗಿದೆ. ಇದು ಭ್ರಷ್ಟಾಚಾರದ ಉದಾಹರಣೆ” ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆಯ ನಿರ್ಧಾರವನ್ನು ಟೀಕಿಸಿದ ಅವರು, “ಇವಿಎಂ ಬಿಟ್ಟು ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವುದು ರಾಜ್ಯವನ್ನು ಹಿಂದ...