ಸೋನಿಯಾ, ರಾಹುಲ್ ಒತ್ತಡಕ್ಕೆ ಮಣಿದು RSS ನಿಷೇಧಕ್ಕೆ ಖರ್ಗೆ ಆಗ್ರಹ; AICC ಅಧ್ಯಕ್ಷ ಖರ್ಗೆಗೆ ಶೋಭಾ ತರಾಟೆ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಿಷೇಧಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, “ಈ ಹೇಳಿಕೆ ಖರ್ಗೆ ಅವರದೇ ಅಲ್ಲ, ಅದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಒತ್ತಡದ ಫಲ” ಎಂದು ಟೀಕಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಖರ್ಗೆ ಅವರನ್ನು ಗೌರವಿಸುತ್ತೇನೆ. ಅವರು ರಾಷ್ಟ್ರ ಮಟ್ಟದ ಹಿರಿಯ ರಾಜಕಾರಣಿ. ಆದರೆ ಅವರ ಪಕ್ಷದಲ್ಲಿ ಒಂದು ಕುಟುಂಬದ ಪ್ರಭಾವದಿಂದ ಅವರು ಸ್ವತಂತ್ರವಾಗಿ ಯೋಚಿಸಲು ಸಾಧ್ಯವಾಗುತ್ತಿಲ್ಲ. ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಆರ್‌ಎಸ್‌ಎಸ್ ವಿರುದ್ಧ ಒಂದೇ ಸಲವೂ ಮಾತನಾಡಿಲ್ಲ” ಎಂದು ಹೇಳಿದರು.
“ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಯವರಿಂದಲೂ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಹಾಗಿದ್ದಾಗ ನಿಮ್ಮಿಂದ ಅದು ಸಾಧ್ಯವೇ? ಏನು ಪ್ರಶ್ನಿಸಿದ ಶೋಭಾ, ಈ ರೀತಿಯ ಮಾತುಗಳು ಕೇವಲ ರಾಹುಲ್ ಮತ್ತು ಸೋನಿಯಾ ಗಾಂಧಿಯವರ ಸಂತೃಪ್ತಿಗಾಗಿ ಹೊರಬರುತ್ತಿವೆ ಎ...









