Saturday, December 6

ರಾಜ್ಯ

ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್.ಉಮೇಶ್ ವಿಧಿವಶ

ಕನ್ನಡ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಎಂ.ಎಸ್.ಉಮೇಶ್ ವಿಧಿವಶ

Focus, ಪ್ರಮುಖ ಸುದ್ದಿ, ರಾಜ್ಯ, ಸಿನಿಮಾ
ಬೆಂಗಳೂರು: ಹಿರಿಯ ಚಲನಚಿತ್ರ ನಟ ಎಂ.ಎಸ್.ಉಮೇಶ್ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ಸಮಯದಿಂದ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರಿನಲ್ಲಿ 1945ರ ಏಪ್ರಿಲ್ 22ರಂದು ಜನಿಸಿದ್ದ ಉಮೇಶ್ ರಂಗಭೂಮಿ ಮತ್ತು ಚಲನಚಿತ್ರ ನಟರಾಗಿದ್ದರು. ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಉಮೇಶ್ ವಿಧಿವಶರಾಗಿದ್ದು, ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ....
ಬೆಳಗಾವಿ ಅಧಿವೇಶನ: ಈ ಬಾರಿ 20 ದಿನ ಸದನ ನಡೆಸಲು ಬಿಜೆಪಿ ಆಗ್ರಹ 

ಬೆಳಗಾವಿ ಅಧಿವೇಶನ: ಈ ಬಾರಿ 20 ದಿನ ಸದನ ನಡೆಸಲು ಬಿಜೆಪಿ ಆಗ್ರಹ 

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಈ ಬಾರಿಯ ಅಧಿವೇಶನವನ್ನು 8 ದಿನಗಳ ಬದಲು 20 ದಿನಗಳ ಕಾಲ ನಡೆಸಬೇಕು ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. ಅಧಿವೇಶನ ಸಂಬಂಧ ನಡೆದ ಬಿಜೆಪಿ-ಜೆಡಿಎಸ್‌ ಸಮನ್ವಯ ಸಮಿತಿ ಸಭೆ ಬಳಿಕ, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿ ಕೆಲಸ ಮಾಡುತ್ತಿದ್ದೇವೆ. ಮುಡಾ ಹಗರಣ, ವಾಲ್ಮೀಕಿ ನಿಗಮದ ಹಗರಣ, ಕಾಲ್ತುಳಿತ ಪ್ರಕರಣ ಸೇರಿದಂತೆ ಹಲವಾರು ಹೋರಾಟಗಳಲ್ಲಿ ಒಂದಾಗಿ ಕೆಲಸ ಮಾಡಿದ್ದೇವೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಎರಡೂ ಪಕ್ಷಗಳು ಕಿವಿ ಹಿಂಡುವ ಕೆಲಸ ಮಾಡಿವೆ. ಈಗ ಬೆಳಗಾವಿ ಅಧಿವೇಶನದಲ್ಲಿ ಯಾವೆಲ್ಲ ವಿಷಯಗಳನ್ನು ಪ್ರಸ್ತಾಪಿಸಬೇಕೆಂದು ಚರ್ಚಿಸಲಾಗಿದೆ. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದರು. ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಕೇವಲ ಬೆಂ...
ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

ನಾಯಕತ್ವ ಗೊಂದಲಕ್ಕೆ ತೆರೆ ಎಳೆಯಲು ಬ್ರೇಕ್ ಫಾಸ್ಟ್? ಹೈಕಮಾಂಡ್ ಸೂತ್ರಕ್ಕೆ ಜೈ ಎಂದ ಸಿಎಂ-ಡಿಸಿಎಂ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಬಿಕ್ಕಟ್ಟು ಶಮನ ಕಾಣುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಶನಿವಾರ ಬೆಳಿಗ್ಗೆ ಒಟ್ಟಾಗಿ ಉಪಹಾರ ಸೇವಿಸಿ ಗಮನಸೆಳೆದರು. ಉಪಹಾರ ಮೂಲಕ ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ತೋರಿಸಲು ಹೈಕಮಾಡ್ ನಾಯಕರು ಹೇಳಿಕೊಟ್ಟ ಸೂತ್ರವನ್ನು ಸಿಎಂ ಡಿಸಿಎಂ ಪಾಲಿಸಿದ್ದಾರೆ. ಆದರೆ ಈ ಬೆಳವಣಿಗೆ ನಾಟಕೀಯ ರೀತಿಯಲ್ಲೇ ಇತ್ತೆ ವಿನಃ ಒಗ್ಗಟ್ಟು ಪ್ರದರ್ಶನದಂತೆ ಇರಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಉಪಹಾರ ಬಳಿಕ ನಿರೀಕ್ಷೆಯಂತೆಯೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಒಂದಷ್ಟು ಮಾಹಿತಿ ಹಂಚಿಕೊಂಡರು. ನಮ್ಮೊಳಗೆ ಭಿನ್ನಾಭಿಪ್ರಾಯವೇ ಇಲ್ಲ, ಒಗ್ಗಾಟಾಗಿವೆ ಇದ್ದೇವೆ. ಸದ್ಯದ ಗೊಂದಲಗಳಿಗೆ ಪ್ರತಿಪಕ್ಷ ಹಾಗೂ ಮಾಧ್ಯಮಗಳು ಕಾರಣ ಎಂದರು. #WATCH | Karnataka Chief Minister Siddaramaiah and Deputy CM DK Shivakumar hold a joint press conference in Bengaluru after the breakfast meeting pic.t...
ಮಂಗಳೂರಿಗೆ ಭೇಟಿನೀಡಿದ ಪ್ರಧಾನಿಗೆ ಸಿದ್ಧರಾಮಯ್ಯ ಪತ್ರ ಒಪ್ಪಿಸಿದ ದಿನೇಶ್ ಗುಂಡೂರಾವ್

ಮಂಗಳೂರಿಗೆ ಭೇಟಿನೀಡಿದ ಪ್ರಧಾನಿಗೆ ಸಿದ್ಧರಾಮಯ್ಯ ಪತ್ರ ಒಪ್ಪಿಸಿದ ದಿನೇಶ್ ಗುಂಡೂರಾವ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಂಗಳೂರು: ಪ್ರಧಾನಿ ನರೇಂದ್ರ ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ ವೇಳೆ, ಸಿಎಂ ಸಿದ್ದರಾಮಯ್ಯ ಅವರ ಮಾರುದ್ದದ ಪತ್ರವನ್ನು ಸಚಿವ ದಿನೇಶ್ ಗುಂಡೂರಾವ್ ನೀಡಿದ್ದಾರೆ. ಪ್ರಧಾನಮಂತ್ರಿ ಮೋದಿಯವರು ಮಂಗಳೂರಿಗೆ ಆಗಮಿಸಿದ ವೇಳೆ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ದಿನೇಶ್ ಗುಂಡೂರಾವ್. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬರೆದಿರುವ ಪತ್ರವನ್ನು ನೀಡಿ, ಅದರಲ್ಲಿರುವಂತೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆಯಿಲ್ಲದೆ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವ ಬಗ್ಗೆ ಗಮನಸೆಳೆದಿದ್ದಾರೆ. ಬೆಂಬಲ ಬೆಲೆಯಂತೆ ಬೆಳೆ ಖರೀದಿ ವ್ಯವಸ್ಥೆ ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕೆಂದು ಮನವಿ ಮಾಡಿರುವ ಪತ್ರ ಇದಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್,  ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡಿಕೊಡಲಾಯಿತು. ಈ ಪತ್ರದಲ್ಲಿ‌ರುವಂತೆ ನಮ್ಮ ರಾಜ್ಯದ ರೈತರ ಸಂಕಷ್ಟವನ್ನು ಕೂಲಂಕುಷವಾಗಿ ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ವಿವರಿಸಿದ್ದೇನೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿ ಮೆಕ್ಕೆಜೋಳ ಮತ್ತು ಹೆಸರು ಕಾಳು...
ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿ

ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಪ್ರಸ್ತುತ ವರ್ಷದ ಮಾನ್ಸೂನ್ ಅವಧಿಯಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಬ್ಸಿಡಿಗಾಗಿ ರೂ.1033.60 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು ಅದಕ್ಕೆ ಗುರುವಾರ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಮುಂಗಾರು ಮಳೆಯಿಂದಾಗಿ ಬೆಳೆ ಹಾನಿಗೆ ಒಳಗಾದ ರಾಜ್ಯದ ರೈತರ ಖಾತೆಗಳಿಗೆ 'ಇನ್ ಪುಟ್ ಸಬ್ಸಿಡಿ' ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ, ಬೆಳೆ ಹಾನಿ ಸಂಭವಿಸಿದ 14.24 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.1033.60 ಕೋಟಿ ಹೆಚ್ಚುವರಿ ಪರಿಹಾರ ಒದಗಿಸಲಾಗುತ್ತಿದೆ ಎಂದರು. 'ನಾವು ರೈತರ ಪರವಾಗಿದ್ದು, ಬೆಳೆ ಹಾನಿಗೊಳಗಾದ ರೈತರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಇನ್‌ಪುಟ್ ಸಬ್ಸಿಡಿಗಳ ದರಗಳನ್ನು ಹೆಚ್ಚಿಸಿದೆ. ಗರಿಷ್ಟ 2 ಹೆಕ್ಟೇರಿಗೆ ಸೀಮಿತವಾಗಿ, ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ. 8500 ರಿಂದ ರೂ. 17 ಸಾವಿರ, ನೀರಾವರಿ ಬೆಳೆಗಳಿಗೆ ಹೆಕ್ಟೇರ್ ಒಂದಕ್ಕೆ ರೂ.17 ಸಾವಿರದಿಂದ ರೂ.25,500 ಹಾಗೂ ಬಹು ವಾರ್ಷಿಕ ಬೆಳೆಗಳಿಗೆ ಹೆಕ್ಟ...
‘ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲ ಎಂದ ಬಿಜೆಪಿ

‘ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲ ಎಂದ ಬಿಜೆಪಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ "ಕಷ್ಟಕರ" ಕರ್ನಾಟಕವಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ದೂರಿದೆ. ದೋರನಹಳ್ಳಿಯಿಂದ 14 ಕಿಲೋ ಮೀಟರ್‌ ದೂರವಿರುವ ಶಹಾಪುರಕ್ಕೆ ಪ್ರತಿದಿನ 20 ರಿಂದ 30 ಹದಿಹರೆಯದ ಶಾಲಾ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಗಮನಸೆಳೆದಿದೆ. ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ "ಕಷ್ಟಕರ" ಕರ್ನಾಟಕವಾಗಿದೆ. ದೋರನಹಳ್ಳಿಯಿಂದ 14 ಕಿಲೋ ಮೀಟರ್‌ ದೂರವಿರುವ ಶಹಾಪುರಕ್ಕೆ ಪ್ರತಿದಿನ 20 ರಿಂದ 30 ಹದಿಹರೆಯದ ಶಾಲಾ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್… pic.twitter.com/RwlFwO33aa — BJP Karnataka (@BJP4Karnataka) November 27, 2025 ಈ ಕುರಿತಂತೆ ಸಾಮಾಜಿಕ ಮಾಧ್ಯಮ 'X'ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, 'ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲದೆ ಶಕ್ತಿ ಯೋಜನೆ ಜಾಗತಿಕ ದಾಖಲೆ ಹೇಗೆ ಮ...

‘ಬೆಂಗಳೂರು ಅಂತಾರಾಷ್ಟ್ರೀಯ ಉದ್ಯೋಗ ಮೇಳಕ್ಕೆ ಕಂಪನಿಗಳಿಗೆ ಆಹ್ವಾನ’

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ದುಬೈ: ಕರ್ನಾಟಕದಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಉದ್ಯೋಗ ಮೇಳದಲ್ಲಿ ಭಾಗವಹಿಸಲು ದುಬೈ ಸೇರಿದಂತೆ ಯುಎಇಯ ಹಲವಾರು ಕಂಪನಿಗಳು ಆಸಕ್ತಿ ತೋರಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ. ಜನವರಿ-ಫೆಬ್ರವರಿ 2026 ರಲ್ಲಿ ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಉದ್ಯೋಗ ಮೇಳ ನಡೆಯಲಿವೆ. ಇದಕ್ಕೆ ಪೂರ್ವಭಾವಿಯಾಗಿ ಸಚಿವರಾದ ಶರಣಪ್ರಕಾಶ್‌ ಪಾಟೀಲ್‌ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ಗುರುವಾರ ದುಬೈನಲ್ಲಿ ರೋಡ್ ಶೋ ನಡೆಯಿತು. ಸಾರಿಗೆ, ಮಾನವ ಸಂಪನ್ಮೂಲ ತಂತ್ರಜ್ಞಾನ, ಸಾಫ್ಟ್ ಸೇವೆಗಳು, ಮಾಧ್ಯಮ ತಂತ್ರಜ್ಞಾನ, ಗೇಮಿಂಗ್, ರಿಯಲ್ ಎಸ್ಟೇಟ್, ಇಂಧನ ಮತ್ತು ಸಂಬಂಧಿತ ಆರೋಗ್ಯ ವಿಜ್ಞಾನಗಳಂತಹ ಕ್ಷೇತ್ರಗಳ ಕಂಪನಿಗಳು ಆಸಕ್ತಿಯನ್ನು ತೋರಿಸಿದವು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಶಿಕ್ಷಣ ಮತ್ತು ಕೌಶಲ್ಯತೆ ವಿಷಯದಲ್ಲಿ ಕರ್ನಾಟಕ ವಿಶೇಷ ಸಾಮರ್ಥ್ಯ ಹೊಂದಿದೆ. ರಾಜ್ಯದ ಯುವಕರನ್ನು ನೇಮಿಸಿಕೊಳ್ಳಲು ಕಂಪನಿಗಳು ಮುಂದಾಗಬೇ...
ಜಗಳೂರಿನ ಸರ್ಕಾರಿ ಕಚೇರಿ ಬಳಿ ಮರಗಳ ತೆರವು: ಪರಿಸರ ಕಾಳಜಿ ಮರೆತ ಅಧಿಕಾರಿಗಳ ವಿರುದ್ಧ ಜನಾಕ್ರೋಶ

ಜಗಳೂರಿನ ಸರ್ಕಾರಿ ಕಚೇರಿ ಬಳಿ ಮರಗಳ ತೆರವು: ಪರಿಸರ ಕಾಳಜಿ ಮರೆತ ಅಧಿಕಾರಿಗಳ ವಿರುದ್ಧ ಜನಾಕ್ರೋಶ

Focus, ಪ್ರಮುಖ ಸುದ್ದಿ, ರಾಜ್ಯ
(ವರದಿ: ರವಿಕುಮಾರ್) ದಾವಣಗೆರೆ: ಜಗಳೂರು ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿರುವ ಸಮೃದ್ದವಾಗಿ ಬೆಳೆದು ನಿಂತಿದ್ದ ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಜನರಿಗೆ ವಾರವಾಗಿದ್ದ ಮರಗಳನ್ನು ಅನಾವಶ್ಯಕವಾಗಿ ತೆರವುಗೊಳಿಸಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಪರಿಸರ ಹೋರಾಟಗಾರ ಬಸವರಾಜ್ ದೂರಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಪಶು ಆಸ್ಪತ್ರೆಯ ಆವರಣದಲ್ಲಿ ಸುಮಾರು ಹತ್ತಕ್ಕೂ ಅಧಿಕ ಮರಗಳಿದ್ದು ಇವುಗಳಿಂದ ಉತ್ತಮ ಗಾಳಿ ಮತ್ತು ನೆರಳು ದೊರೆಯುತ್ತಿತ್ತು. ಆಸ್ಪತ್ರೆಗೆ ಚಿಕಿತ್ಸೆಗೆ ಬರುವಂತಹ ರೈತರು ಮತ್ತು ರಾಸುಗಳು ಬಿಸಿಲಿನ ಜಳವನ್ನು ತಾಳಲಾರದೆ ನೆರಳಿನಲ್ಲಿ ಕುಳಿತುಕೊಂಡು ವಿಶ್ರಾಂತಿ ಪಡೆಯುತ್ತಿದ್ದರು ಎಂದವರು ಗಮನಸೆಳೆದಿದ್ದಾರೆ. ಪಕ್ಕದಲ್ಲಿ ಪೊಲೀಸ್ ಠಾಣೆ ಇದ್ದು ಅಲ್ಲಿಗೆ ಭೇಟಿನೀಡುವ ಸಾರ್ವಜನಿಕರು ಬಿಸಿಲಿನ ತಾಪವನ್ನು ತಾಳಲಾರದೆ ಆಸ್ಪತ್ರೆಯ ಆವರಣದಲ್ಲಿರುವ ಮರಗಳತ್ತ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಕಟ್ಟಡ ನಿರ್ಮಾಣದ ನೆಪವಡ್ಡಿ ಬೇವು ,ಬತ್ತಿ ಸೇರಿದಂತೆ ನಾಲ್ಕೈದು ಮ...
ಈ ಪೀಠಿಕೆಯೇ ದೇಶದ ‘ಸುರಕ್ಷಾ ಮಂತ್ರ’; ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ’ಸಂವಿಧಾನ ಫಲಕ’ ಅನಾವರಣ

ಈ ಪೀಠಿಕೆಯೇ ದೇಶದ ‘ಸುರಕ್ಷಾ ಮಂತ್ರ’; ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ’ಸಂವಿಧಾನ ಫಲಕ’ ಅನಾವರಣ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಮಂಗಳೂರು: ದೇಶಾದ್ಯಂತ ಬುಧವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮಗಳು ದೇಶಭಕ್ತಿಯ ಪ್ರತೀಕ ಎಂಬಂತೆ ನೆರವೇರಿದವು. ಅದರಲ್ಲೂ ಮಂಗಳೂರಿನಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಂವಿಧಾನ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು. ದೇಶದ ಸಾಮಾಜಿಕ ವ್ಯವಸ್ಥೆಗೆ ಆಧಾರವಾಗಿರುವ, ಸುರಕ್ಷಾ ಮಂತ್ರವೆನಿಸಿರುವ 'ಸಂವಿಧಾನ' ಕುರಿತಂತೆ ಒಂದು ದಿಂದಾದ ಶ್ರದ್ದೆ-ಭಕ್ತಿಯಲ್ಲ, ಪ್ರತೀ ದಿನವೂ ಸಂವಿಧಾನದ ಆಶಯಗಳನ್ನು ನೆನೆಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿರುವ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ (ಇಂದಿರಾ ಜನ್ಮ ಶತಾಬ್ದಿ ಭವನ) ಭವನದಲ್ಲಿ 'ಸಂವಿಧಾನ ಫಲಕ'ವನ್ನು ಅನಾವರಣ ಮಾಡಲಾಗಿದೆ. ಖ್ಯಾತ ವಕೀಲರೂ ಆದ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿರುವ ಮನೋರಾಜ್ ರಾಜೀವ್ ಅವರ ಪರಿಕಲ್ಪನೆಯಲ್ಲಿ ಈ ಸಂವಿಧಾನ ಫಲಕವನ್ನು ಸ್ಥಾಪಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂವಿಧಾನದ ಪೀಠಿಕೆ ಹಾಗೂ ಮಧ್ಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರುವ ಈ ಫಲಕ ಎಲ್ಲರ ಗಮನಕೇಂದ್ರೀಕರಿಸುತ್ತಿದೆ. ಸಂವಿಧಾನ ದಿನಾಚರಣೆಯ ಭಾಗವಾಗಿ 'ಸಂವಿಧಾನ ಓದು...
“ನಾನು ಏನೇ ಮಾಡಿದರೂ, ಮಾತನಾಡಿದರೂ ಮಾಧ್ಯಮಗಳಲ್ಲಿ ಬೇರೆ ರೀತಿ ಚರ್ಚೆ”; ಡಿಕೆಶಿ ಬೇಸರ

“ನಾನು ಏನೇ ಮಾಡಿದರೂ, ಮಾತನಾಡಿದರೂ ಮಾಧ್ಯಮಗಳಲ್ಲಿ ಬೇರೆ ರೀತಿ ಚರ್ಚೆ”; ಡಿಕೆಶಿ ಬೇಸರ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: “ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನಾಯಕರನ್ನು ನೆನಪಿಸಿದಂತಿದೆ. "ನ್ಯಾಯಾಧೀಶರಾಗಲಿ, ರಾಷ್ಟ್ರಪತಿಗಳಾಗಲಿ, ನಾನಾಗಲೀ, ಯಾರೇ ಆಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು” ಎಂಬ ಅವರ ಮಾತು ಪ್ರಸಕ್ತ ಸನ್ನಿವೇಶದಲ್ಲಿ ಅನೇಕಾನೇಕ ವಿಶ್ಲೇಷಣೆಗೆ ಎಡೆಮಾಡಿಕೊಟ್ಟಿದೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಶಿವಕುಮಾರ್ ಮಾತನಾಡಿದರು. ನಾನು ಏನೇ ಮಾಡಿದರೂ, ಮಾತನಾಡಿದರೂ ಮಾಧ್ಯಮಗಳು ಬೇರೆ ರೀತಿ ಚರ್ಚೆ ಮಾಡುತ್ತವೆ ಎಂದ ಡಿಕೆಶಿ, “ನಾನು ಬೇರೆ ವಿಚಾರವಾಗಿ ಮಾತನಾಡಲು ಹೋಗುವುದಿಲ್ಲ. ನಾನು ಏನೇ ಹೇಳಿದರೂ ಅದನ್ನು ಬೇರೆ ರೀತಿ ತಿರುಗಿಸಿ ಅರ್ಧ ಗಂಟೆ ಚರ್ಚೆ ಮಾಡುತ್ತಾರೆ. ನಾನು ಇಂದಿರಾ ಗಾಂಧಿ ಅವರ ಕಾರ್ಯಕ್ರಮದ ವೇಳೆ ಅವರ ಹೇಳಿಕೆಯೊಂದನ್ನು ಉಲ್ಲೇಖಿಸಿದೆ. ಅದರ ಮೇಲೆ ಅರ್ಧ ಗಂಟೆ ಚರ್ಚೆ ಮಾಡಿದರು. ನಂತರ ವಿಶ್ವ ಮೀನುಗಾರಿಕೆ ...