ಈ ಪೀಠಿಕೆಯೇ ದೇಶದ ‘ಸುರಕ್ಷಾ ಮಂತ್ರ’; ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ’ಸಂವಿಧಾನ ಫಲಕ’ ಅನಾವರಣ
ಮಂಗಳೂರು: ದೇಶಾದ್ಯಂತ ಬುಧವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮಗಳು ದೇಶಭಕ್ತಿಯ ಪ್ರತೀಕ ಎಂಬಂತೆ ನೆರವೇರಿದವು. ಅದರಲ್ಲೂ ಮಂಗಳೂರಿನಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಂವಿಧಾನ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು.
ದೇಶದ ಸಾಮಾಜಿಕ ವ್ಯವಸ್ಥೆಗೆ ಆಧಾರವಾಗಿರುವ, ಸುರಕ್ಷಾ ಮಂತ್ರವೆನಿಸಿರುವ 'ಸಂವಿಧಾನ' ಕುರಿತಂತೆ ಒಂದು ದಿಂದಾದ ಶ್ರದ್ದೆ-ಭಕ್ತಿಯಲ್ಲ, ಪ್ರತೀ ದಿನವೂ ಸಂವಿಧಾನದ ಆಶಯಗಳನ್ನು ನೆನೆಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿರುವ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ (ಇಂದಿರಾ ಜನ್ಮ ಶತಾಬ್ದಿ ಭವನ) ಭವನದಲ್ಲಿ 'ಸಂವಿಧಾನ ಫಲಕ'ವನ್ನು ಅನಾವರಣ ಮಾಡಲಾಗಿದೆ.
ಖ್ಯಾತ ವಕೀಲರೂ ಆದ, ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿರುವ ಮನೋರಾಜ್ ರಾಜೀವ್ ಅವರ ಪರಿಕಲ್ಪನೆಯಲ್ಲಿ ಈ ಸಂವಿಧಾನ ಫಲಕವನ್ನು ಸ್ಥಾಪಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಂವಿಧಾನದ ಪೀಠಿಕೆ ಹಾಗೂ ಮಧ್ಯದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇರುವ ಈ ಫಲಕ ಎಲ್ಲರ ಗಮನಕೇಂದ್ರೀಕರಿಸುತ್ತಿದೆ.
ಸಂವಿಧಾನ ದಿನಾಚರಣೆಯ ಭಾಗವಾಗಿ 'ಸಂವಿಧಾನ ಓದು...








