ಲವ್ ಜಿಹಾದಿಗೆ ಮತ್ತೊಂದು ಬಲಿ? ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಬೆಂಗಳೂರು: ರಾಜ್ಯದಲ್ಲಿ ಲವ್ ಜಿಹಾದಿ ಪ್ರಕರಣಗಳು ಮುಂದುವರಿದಿದ್ದು, ಉತ್ತರಕನ್ನಡ ಜಿಲ್ಲೆ ಯಲ್ಲಾಪುರದಲ್ಲಿ ರಂಜಿತಾ ಎಂಬ ಯುವತಿಯ ಹತ್ಯೆಯಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ, 'ಮತಾಂಧರ ನಟ್ಟು - ಬೋಲ್ಟ್ ಸರಿ ಮಾಡಲು ಸಾಧ್ಯವಿಲ್ಲದಿದ್ದರೆ ರಾಜೀನಾಮೆ ನೀಡಿ' ಎಂದು ಆಕ್ರೋಶ ಹೊರಹಾಕಿದೆ.
ರಾಜ್ಯದಲ್ಲಿ ಮತಾಂಧ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಹಿಂದು ಯುವತಿಯರ ಸರಣಿ ಹತ್ಯೆಗಳು ನಡೆಯುತ್ತಿವೆ. ನೇಹಾ ಹಿರೇಮಠ್ ಹತ್ಯೆಯ ನೆನಪು ಮರೆಯಾಗುವ ಮುನ್ನವೇ ಯಲ್ಲಾಪುರದಲ್ಲಿ ಲವ್ ಜಿಹಾದ್ ಕಾರಣದಿಂದ ರಂಜಿತಾಳನ್ನು ಮತಾಂಧ ರಫೀಕ್ ಹತ್ಯೆಗೈದಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯದಲ್ಲಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಿರಂತರವಾಗಿ ಹಿಂದುಗಳ ಹತ್ಯೆ, ಭಯೋತ್ಪಾದನಾ ಚಟುವಟಿಕೆ, ಲವ್ ಜಿಹಾದ್ ಪ್ರಕರಣಗಳು ದಿನನಿತ್ಯ ವರದಿಯಾಗುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಜೆಪಿ ತನ್ನ X ಖಾತೆಯಲ್ಲಿ ಆರೋಪ ಮಾಡಿದೆ.
'ಮತಾಂಧರನ್ನು ಮುಟ್ಟಬೇಡಿ ಎಂದು ಪೊಲೀಸರಿಗೆ ಸರ್ಕಾರದಿಂದ ಫತ್ವಾ ಏನಾದರೂ ಹೊರಡಿ...








