
4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ‘ಗಣೇಶನ ಆಕೃತಿ’ ರಚನೆ
ಕೊಪ್ಪಳ: ಗಂಗಾವತಿ ತಾಲೂಕಿನ ಶ್ರೀರಾಮನಗರದ ನಮ್ಮ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಗಣೇಶೋತ್ಸವದ ಅಂಗವಾಗಿ “4000 ವಿದ್ಯಾರ್ಥಿಗಳು 5000 ದೀಪಗಳಿಂದ ಬೃಹತ್ ಗಾತ್ರದ ಗಣೇಶನ ಆಕೃತಿಯನ್ನು ರಚಿಸಿ ದೀಪಗಳನ್ನು ಬೆಳಗಿಸಿ ಗಣೇಶನಿಗೆ ವೈಶಿಷ್ಟ್ಯಪೂರ್ಣವಾದ ಅಹ್ವಾನವನ್ನು ನೀಡಲಾಯಿತು.
5,000 ದೀಪಗಳು, 4,000 ವಿದ್ಯಾರ್ಥಿಗಳಿಂದ ಬೃಹತ್ ಗಣೇಶ ಆಕೃತಿ ರಚನೆ!!
ಗಂಗಾವತಿ ತಾಲೂಕಿನ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಮಕ್ಕಳು ವಿನಾಯಕನ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸುವ ಮೂಲಕ ಗಮನ ಸೆಳೆದಿದ್ದಾರೆ.#Ballari #Koppala pic.twitter.com/big3vBbG7l
— Ballari Tweetz (@TweetzBallari) August 25, 2025
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತ್ಯಂತ ಸಂಭ್ರಮ ಸಂತೋಷದಿAದ ಪಾಲ್ಗೊಂಡು ವಿನಾಯಕನಿಗೆ ಜೈಕಾರವನ್ನು ಹಾಕಿ ದೀಪಗಳಿಂದ ಗಣೇಶನ ಆಕೃತಿಯನ್ನು ಮೂಡಿಸಿದರು.
ಶಾಲೆಯ ಪೂರ್ವ ಪ್ರಾಥಮಿಕದಿಂದ ಎಂಟನೆಯ ತರಗತಿಯ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಮಾಡಿಸಲಾಯಿತು. ವಿದ್ಯಾರ್ಥಿಗಳಲ...