ದೇಶದ 45 ಕಡೆ 61,000ಕ್ಕೂ ಹೆಚ್ಚು ಮಂದಿಗೆ ವರ್ಚುವಲ್ ಮೂಲಕ ನೇಮಕಾತಿ ಪತ್ರ ವಿತರಿಸಿದ ಮೋದಿ
ನವದೆಹಲಿ: ಯುವಜನರನ್ನು ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳೊಂದಿಗೆ ಸಂಪರ್ಕಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶನಿವಾರ 18ನೇ ರೋಜ್‌ಗಾರ್ ಮೇಳದಲ್ಲಿ ವಿವಿಧ ಕೇಂದ್ರ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಆಯ್ಕೆಯಾದ 61,000ಕ್ಕೂ ಹೆಚ್ಚು ಯುವಕರಿಗೆ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದರು.
ದೇಶದಾದ್ಯಂತ 45 ಸ್ಥಳಗಳಲ್ಲಿ ನಡೆದ ಕಾರ್ಯಕ್ರಮವನ್ನು ವರ್ಚುವಲ್ ಮೂಲಕ ಉದ್ದೇಶಿಸಿ ಮಾತನಾಡಿದ ಪ್ರಧಾನಿ, “2026ರ ಆರಂಭವು ಹೊಸ ಸಂತೋಷಗಳ ಆರಂಭವನ್ನು ಸೂಚಿಸುತ್ತದೆ. ವಸಂತ ಪಂಚಮಿಯ ನಂತರ ನಿಮ್ಮ ಜೀವನದಲ್ಲೂ ಹೊಸ ವಸಂತ ಆರಂಭವಾಗುತ್ತಿದೆ” ಎಂದು ಹೇಳಿದರು. ನೇಮಕಾತಿ ಪತ್ರಗಳನ್ನು ರಾಷ್ಟ್ರ ನಿರ್ಮಾಣದ ಆಹ್ವಾನ ಪತ್ರ ಹಾಗೂ ‘ವಿಕ್ಷಿತ್ ಭಾರತ’ದ ಸಂಕಲ್ಪ ಪತ್ರ ಎಂದು ಅವರು ವರ್ಣಿಸಿದರು.
ಗೃಹ ವ್ಯವಹಾರಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಹಣಕಾಸು ಸೇವೆಗಳು, ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಸಚಿವಾಲಯಗಳಿಗೆ ಹೊಸದಾಗಿ ಆಯ್ಕೆಯಾದ ಯುವಕರು ಸೇರಲಿದ್ದಾರೆ. ರೋಜ್‌ಗಾರ್ ಮೇಳವನ್ನು ಮಿಷನ್ ಮೋಡ್‌ನಲ್ಲಿ ಆರಂಭಿಸಿರು...







