Wednesday, January 28

ವೀಡಿಯೊ

ಒಳಮೀಸಲಾತಿಯ ಬಿಕ್ಕಟ್ಟಿನಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ

ಒಳಮೀಸಲಾತಿಯ ಬಿಕ್ಕಟ್ಟಿನಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಳಗಾವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿಯಿದೆ. ಈ ಹುದ್ದೆಗಳಿಗೆ ನೇಮಕಾತಿ ಮಾಡಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನ ಮಂಡಲ ಅಧಿವೇಶನದಲ್ಲಿ ಮಾತನಾಡುತ್ತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ನೇಮಕಾತಿ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ವಿವಿಧ ನಿಗಮ ಮಂಡಳಿಗಳಲ್ಲಿ1,01,420 ಹುದ್ದೆಗಳು, ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳು ಒಟ್ಟು 1,88,037 ಹುದ್ದೆಗಳು ಖಾಲಿಯಿದೆ. ಈಗಾಗಲೇ 24,300 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿದೆ. ಹೈದ್ರಾಬಾದ್ ಕರ್ನಾಟಕಕ್ಕೆ 371ಜೆ ಅಡಿ 32,132 ಹುದ್ದೆಗಳು ಭರ್ತಿಯಾಗಬೇಕಿದೆ. ಒಟ್ಟು 56,432 ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿಯಿದೆ. ಅದರಲ್ಲಿ ವಿವಿಧ ನಿಗಮ ಮಂಡಳಿಗಳಲ್ಲಿ1,01,420 ಹುದ್ದೆಗಳು, ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳು ಒಟ್ಟು 1,88,037 ಹುದ್ದೆಗಳು ಖಾಲಿಯಿದೆ....
ಖರೀದಿ ಕೇಂದ್ರವೂ ಇಲ್ಲ, ಬೆಲೆ ಹಾನಿಗೆ ಪರಿಹಾರವೂ ಇಲ್ಲ; ಹೆಚ್ಡಿಕೆ ಟೀಕೆ

ಖರೀದಿ ಕೇಂದ್ರವೂ ಇಲ್ಲ, ಬೆಲೆ ಹಾನಿಗೆ ಪರಿಹಾರವೂ ಇಲ್ಲ; ಹೆಚ್ಡಿಕೆ ಟೀಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಖರೀದಿ ಕೇಂದ್ರಗಳನ್ನು ತೆರೆಯದೇ ವಂಚಿಸಿರುವ ಕಾಂಗ್ರೆಸ್‌ ಸರ್ಕಾರ, ಬೆಳೆ ಹಾನಿ ಪರಿಹಾರದಲ್ಲೂ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಜ್ಯ ಸರ್ಕಾರದ ಧೋರಣೆ ಕುರಿತಂತೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಸರ್ಕಾರದ ನಡೆಯಿಂದಾಗಿ ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಟೀಕಿಸಿದ್ದಾರೆ. A teacher from Agra was fined for not wearing helmet inside a car Post that incident, he now wears a helmet Magical Amritkaalpic.twitter.com/wXkHqZ0wTt — 𝕲𝖆𝖓𝖊𝖘𝖍 * (@ggganeshh) December 9, 2025...
ಶಿವಕುಮಾರ್ ಸಿಎಂ ಆದರೆ ನಾನು ಮಂತ್ರಿಯಾಗಲ್ಲ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

ಶಿವಕುಮಾರ್ ಸಿಎಂ ಆದರೆ ನಾನು ಮಂತ್ರಿಯಾಗಲ್ಲ: ಕೆ.ಎನ್. ರಾಜಣ್ಣ ಸ್ಫೋಟಕ ಹೇಳಿಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಒಂದು ವೇಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ, ಅವರ ಸಂಪುಟದಲ್ಲಿ ನಾನು ಮಂತ್ರಿಯಾಗುವುದಿಲ್ಲ. ನನಗೆ ಸಚಿವ ಸ್ಥಾನ ಬೇಡ. ಇನ್ನೊಬ್ಬರಿಗೆ ಅವಕಾಶ ಕೊಡಲಿ,” ಎಂದು ಸ್ಪಷ್ಟಪಡಿಸಿದರು. ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ರಾಜಣ್ಣ, ನಾಯಕತ್ವ ಬದಲಾವಣೆ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. “ಡಿಕೆ ಶಿವಕುಮಾರ್ ಸಿಎಂ ಆಗ್ತಾರೆಂದು ನಾನು ಹೇಳಿಲ್ಲ,” ಎಂದೂ ಸ್ಪಷ್ಟನೆ ನೀಡಿದರು. ಇದಲ್ಲದೆ, “ಹಿಂದೆ ಪರಮೇಶ್ವರ್ ಕೂಡ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು,” ಎಂದು ನೀಡಿದ ಹೇಳಿಕೆ ಕೂಡ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. "I won't be oart of the cabinet if DK Shivakumar becomes CM."- Congress MLA KN Rajanna pic.twitter.com/eeXRPWGiHu— News Ar...
ಅನ್ನಭಾಗ್ಯದ ಅಕ್ಕಿ ವಿದೇಶಗಳಿಗೆ ರವಾನೆಯಾಗಿರುವ ಬಗ್ಗೆ ತನಿಖೆಯಾಗಬೇಕು; ಸಿ.ಟಿ.ರವಿ

ಅನ್ನಭಾಗ್ಯದ ಅಕ್ಕಿ ವಿದೇಶಗಳಿಗೆ ರವಾನೆಯಾಗಿರುವ ಬಗ್ಗೆ ತನಿಖೆಯಾಗಬೇಕು; ಸಿ.ಟಿ.ರವಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಳಗಾವಿ: ಅನ್ನಭಾಗ್ಯದ ಅಕ್ಕಿಯು ವಿದೇಶಗಳಿಗೆ ರವಾನೆಯಾಗಿರುವ ಬಗ್ಗೆ ತನಿಖೆಯಾಗಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಅನ್ನಭಾಗ್ಯದ ಅಕ್ಕಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಹಾಗೂ ಅಕ್ರಮಗಳ ಬಗ್ಗೆ ಆಕ್ರೋಶ ಹೊರಹಾಕಿದರು. ಅನ್ನಭಾಗ್ಯದ ಅಕ್ಕಿಯು ಹೊರ ರಾಜ್ಯಗಳಿಗೆ, ಹೊರ ದೇಶಗಳಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದು, ಇದರಲ್ಲಿ ಅಧಿಕಾರಿಗಳ ಕೈವಾಡವಿರುವುದನ್ನು ಸರ್ಕಾರದ ಖಚಿತಪಡಿಸಿದೆ. ಈ ಅಕ್ರಮ ನಿರಂತರವಾಗಿ ನಡೆದಿದೆ ಎಂದಾದರೆ, ಇದರ ಜಾಲ ರಾಜ್ಯದಾದ್ಯಂತ ವ್ಯಾಪಿಸಿದೆ ಎಂದರ್ಥ ಎಂದು ಪ್ರಶ್ನಿಸಿದರು. ಇದೆಲ್ಲವೂ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದಿಯೇ? ಅಥವಾ ಸರ್ಕಾರವೂ ಇದರಲ್ಲಿ ಭಾಗಿಯಾಗಿದೆಯೇ? ಇದಕ್ಕೆಲ್ಲ ಕಡಿವಾಣ ಯಾವಾಗ? ಇದಕ್ಕಾಗಿ ತಕ್ಷಣವೇ ಎಸ್ಐಟಿ ರಚನೆಯಾಗಿ, ತನಿಖೆಯಾಗಬೇಕು ಎಂದರು. ಅನ್ನಭಾಗ್ಯದ ಅಕ್ಕಿಯು ಹೊರ ರಾಜ್ಯಗಳಿಗೆ, ಹೊರ ದೇಶಗಳಿಗೆ ಅಕ್ರಮವಾಗಿ ಸಾಗಣೆಯಾಗುತ್ತಿದ್ದು, ಇದರಲ್ಲಿ ಅಧಿಕಾರಿಗಳ ಕೈವಾಡವಿರುವುದನ್ನು ಸರ್...
ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಸ್ವಾಗತ; ಒಪ್ಪಂದಗಳಿಗೆ ಸಹಿ ನಿರೀಕ್ಷೆ

ರಷ್ಯಾ ಅಧ್ಯಕ್ಷ ಪುಟಿನ್‌ಗೆ ಪ್ರಧಾನಿ ಮೋದಿ ಸ್ವಾಗತ; ಒಪ್ಪಂದಗಳಿಗೆ ಸಹಿ ನಿರೀಕ್ಷೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎರಡು ದಿನಗಳ ಅಧಿಕೃತ ಭಾರತ ಭೇಟಿಗೆ ಗುರುವಾರ ರಾತ್ರಿ ನವದೆಹಲಿಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಸ್ವತಃ ವಿಮಾನ ನಿಲ್ದಾಣಕ್ಕೆ ತೆರಳಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. In a notable departure from usual practice, Prime Minister Shri @narendramodi personally welcomed Russian President Vladimir Putin upon his arrival at the Delhi airport.President Putin is undertaking a two-day State visit to India, during which he will participate in the 23rd… pic.twitter.com/n89gV1S6XX— BJP (@BJP4India) December 4, 2025 ವಿಮಾನದಿಂದ ಇಳಿದ ಬಳಿಕ ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಂಡು ಮಾತನಾಡಿದರು. ಬಳಿಕ ಅಲ್ಪಕಾಲದ ಸಾಂಸ್ಕೃತಿಕ ಸ್ವಾಗತ ಕಾರ್ಯಕ್ರಮವನ್ನು ವೀಕ್ಷಿಸಿದರು. ವಿಮಾನ ನಿಲ್ದಾಣದಿಂದ ಇಬ್ಬರೂ ಒಂದೇ ವಾಹನದಲ್ಲಿ ಹೊರಟು ಗಮನಸೆಳೆದರು. ಪುಟಿನ್ ಭೇಟಿಯ ಸಂದರ್ಭದಲ್ಲಿ ಭಾರತ-ರಷ್ಯಾ ನಡುವೆ ಮಹತ್ವದ ಒಪ್ಪಂದಗಳು ಏರ್ಪಡಲಿವೆ ಎಂದು ...
Indian Navy Day; ಸಮುದ್ರ ಗಡಿ–ಆರ್ಥಿಕ ಹಿತಾಸಕ್ತಿಗಳ ರಕ್ಷಣೆಯಲ್ಲಿ ನೌಕಾಪಡೆಯ ನಿರ್ಣಾಯಕ ಪಾತ್ರ

Indian Navy Day; ಸಮುದ್ರ ಗಡಿ–ಆರ್ಥಿಕ ಹಿತಾಸಕ್ತಿಗಳ ರಕ್ಷಣೆಯಲ್ಲಿ ನೌಕಾಪಡೆಯ ನಿರ್ಣಾಯಕ ಪಾತ್ರ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ದೆಹಲಿ: ಭಾರತೀಯ ನೌಕಾಪಡೆಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಗುರುವಾರ ನೌಕಾಪಡೆಯ ಎಲ್ಲ ಅಧಿಕಾರಿಗಳು–ಸಿಬ್ಬಂದಿಗೆ ಶುಭಾಶಯ ತಿಳಿಸಿ, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ಪಡೆ ತೋರಿಸುತ್ತಿರುವ ಶೌರ್ಯ, ಸ್ವಾವಲಂಬನೆ ಮತ್ತು ಆಧುನೀಕರಣದ ಬದ್ಧತೆಯನ್ನು ಪ್ರಶಂಸಿಸಿದರು. ಡಿಸೆಂಬರ್ 4 ಅನ್ನು ಪ್ರತಿವರ್ಷ ನೌಕಾಪಡೆಯ ದಿನವಾಗಿ ಆಚರಿಸಲಾಗುತ್ತದೆ. 1971ರ ಯುದ್ಧದಲ್ಲಿ ‘ಆಪರೇಷನ್ ಟ್ರೈಡೆಂಟ್’ ಮೂಲಕ ಪಾಕಿಸ್ತಾನಿ ನೌಕಾಪಡೆಯ ಮೇಲೆ ಭಾರತ ಪಡೆದ ಐತಿಹಾಸಿಕ ಗೆಲುವಿಗೆ ಈ ದಿನಾಂಕ ಸ್ಮರಣಾರ್ಥವಾಗಿದೆ. Xನಲ್ಲಿ ಬರಹ ಹಂಚಿಕೊಂಡ ಪ್ರಧಾನಮಂತ್ರಿ' “ನಮ್ಮ ನೌಕಾಪಡೆ ಅಸಾಧಾರಣ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ಹೆಸರಾಗಿದ್ದು, ದೇಶದ ತೀರಗಳನ್ನು ಕಾಪಾಡುತ್ತಾ ನಮ್ಮ ಕಡಲ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸ್ವಾವಲಂಬನೆ ಮತ್ತು ಆಧುನೀಕರಣದತ್ತ ಪಡೆ ತೆಗೆದುಕೊಂಡ ಹೆಜ್ಜೆಗಳು ದೇಶದ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸಿವೆ” ಎಂದಿದ್ದಾರೆ. ದೀಪಾವಳಿ ವೇಳೆ ಐಎನ್‌ಎಸ್ ವಿಕ್ರಾಂಟ್‌ನಲ್ಲಿ ನೌಕಾ ಸಿಬ್ಬಂದಿಯೊಂದಿಗೆ ಕಳೆದ ಕ್ಷಣಗಳನ್ನು ನೆನೆದು, ಅವು ಸದ...
ಸಮಂತಾ ಜೊತೆ ಕೆಲಸ ಮಾಡುವ ಕಾಂತಾರ ನಟನ ಕನಸು ನನಸು!

ಸಮಂತಾ ಜೊತೆ ಕೆಲಸ ಮಾಡುವ ಕಾಂತಾರ ನಟನ ಕನಸು ನನಸು!

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ, ಸಿನಿಮಾ
ಮುಂಬೈ: ಕನ್ನಡದ ಕಾಂತಾರ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ, ಬಳಿಕ ಆರ್.ಮಾಧವನ್ ಜೊತೆ ತಮಿಳು ವೆಬ್‌ಸೀರಿಸ್ ಲೆಗಸಿಗೆ ಸಜ್ಜಾಗಿರುವ ನಟ ಗುಲ್ಶನ್ ದೇವಯ್ಯ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಸಮಂತಾ ರುತ್‌ ಪ್ರಭು ಅಭಿನಯದ ಮಾ ಇಂತಿ ಬಂಗಾರಂ ಅವರ ಮೊದಲ ತೆಲುಗು ಚಿತ್ರ. ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಪಾತ್ರವಹಿಸಿರುವುದಕ್ಕೆ ದೇವಯ್ಯ ಆನಂದ ವ್ಯಕ್ತಪಡಿಸಿದ್ದಾರೆ. “ಸಮಂತಾ ಜೊತೆ ಕೆಲಸ ಮಾಡುವ ಆಸೆ ನನಗಿನ್ನೂ ಹಲವು ವರ್ಷಗಳಿಂದಿತ್ತು. ಇದರೀಗ ಸರಿಯಾದ ಸಮಯದಲ್ಲಿ ನನಗೆ ಒದಗಿದೆ,” ಎಂದು ಅವರು ಮಾಧ್ಯಮ ಸಂದರ್ಶನದಲ್ಲಿ ಹೇಳಿದರು. ಚಿತ್ರದ ಮುಹೂರ್ತ ವಿಧಿ ಇತ್ತೀಚೆಗೆ ನೆರವೇರಿತು. ಗುಲ್ಶನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮುಹೂರ್ತ ಹಾಗೂ ಘೋಷಣೆ ವಿಡಿಯೊ ಹಂಚಿಕೊಂಡಿದ್ದು, ತೆಲುಗು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. “MIBಯಲ್ಲಿನ ನನ್ನ ಪಾತ್ರಕ್ಕಾಗಿ ತೀವ್ರವಾಗಿ ತಯಾರಿ ನಡೆಸುತ್ತಿದ್ದೇನೆ. ಈಗಲೇ ಹೆಚ್ಚಿನ ವಿವರ ಹಂಚಿಕೊಳ್ಳಲು ಸಾಧ್ಯವಿಲ್ಲ. ಆದರೆ ಪಾತ್ರವು ಸವಾಲಿನದು. ಅದನ್ನು ಸಮರ...
ಕರ್ನಾಟಕದಲ್ಲಿ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ; ಕೇಂದ್ರ ಸರ್ಕಾರದ ಗಮನಸೆಳೆದ ಕಾಂಗ್ರೆಸ್ ಸಂಸದೆ

ಕರ್ನಾಟಕದಲ್ಲಿ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ; ಕೇಂದ್ರ ಸರ್ಕಾರದ ಗಮನಸೆಳೆದ ಕಾಂಗ್ರೆಸ್ ಸಂಸದೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ನವದೆಹಲಿ: ದಾವಣಗೆರೆ ಸೇರಿದಂತೆ ಕರ್ನಾಟಕದಲ್ಲಿ ಪ್ರತಿಷ್ಠಿತ BSNL ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ಸಂಸದೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಕೇಂದ್ರದ ಗಮನಸೆಳೆದಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಮೊಬೈಲ್ ಸಂಪರ್ಕ ಸಮಸ್ಯೆ ಹಾಗೂ ಅದರಿಂದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಜನರು ಸಮಸ್ಯೆಗಳನ್ನು ಎದುರಿಸುತ್ತಿ ದ್ದಾರೆ. ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. I would like to raise a matter related to the installation of BSNL mobile tower in my constituency, Davanagere.Bridging the digital divide and ensuring last-mile connectivity are core pillars of the Digital India Mission. Yet, people in many villages in my Davanagere… pic.twitter.com/dwz20InyvR— Congress (@INCIndia) December 3, 2025...
ಡಿಆರ್‌ಡಿಓ ಮಹತ್ವದ ಸಾಧನೆ; ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆ ಯಶಸ್ವಿ

ಡಿಆರ್‌ಡಿಓ ಮಹತ್ವದ ಸಾಧನೆ; ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆ ಯಶಸ್ವಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ನವದೆಹಲಿ: ದೇಶದ ರಕ್ಷಣಾ ತಂತ್ರಜ್ಞಾನ ಸ್ವಾವಲಂಬನೆಗೆ ಮತ್ತೊಂದು ಮಹತ್ವದ ಪಟ್ಟೆ ಸೇರ್ಪಡೆಯಾಗಿದೆ. ಡಿಆರ್‌ಡಿಓ (DRDO) ಮಂಗಳವಾರ ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ (TBRL) ರೈಲ್ ಟ್ರ್ಯಾಕ್ ರಾಕೆಟ್-ಸ್ಲೆಡ್ (RTRS) ಕೇಂದ್ರದಲ್ಲಿ ಯುದ್ಧ ವಿಮಾನಗಳ ಏರ್‌ಕ್ರ್ಯೂ ಎಸ್ಕೇಪ್ ಸಿಸ್ಟಮ್‌ನ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ. Defence Research and Development Organization (DRDO) has successfully conducted a high-speed rocket-sled test of fighter aircraft escape system at precisely controlled velocity of 800 km/h- validating canopy severance, ejection sequencing and complete aircrew-recovery at Rail… pic.twitter.com/G19PJOV6yD— रक्षा मंत्री कार्यालय/ RMO India (@DefenceMinIndia) December 2, 2025 ಈ ಪರೀಕ್ಷೆಯಲ್ಲಿ ಕ್ಯಾನೋಪಿ ಸೆವೆರೆನ್ಸ್, ಎಜೆಕ್ಷನ್ ಸೀಕ್ವೆನ್ಸಿಂಗ್, ಮತ್ತು ಏರ್‌ಕ್ರ್ಯೂ ಚೇತರಿಕೆ ಸೇರಿದಂತೆ ಎಸ...
ಖಾಲಿ ಹುದ್ದೆಗಳ ಭರ್ತಿಗಾಗಿ ಹೋರಾಡುತ್ತಿದ್ದವರ  ದೌರ್ಜನ್ಯ; ಯತ್ನಾಳ್ ಆಕ್ರೋಶ

ಖಾಲಿ ಹುದ್ದೆಗಳ ಭರ್ತಿಗಾಗಿ ಹೋರಾಡುತ್ತಿದ್ದವರ ದೌರ್ಜನ್ಯ; ಯತ್ನಾಳ್ ಆಕ್ರೋಶ

Focus, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ಬೆಂಗಳೂರು: ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಸರ್ಕಾರದ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, 'ಕುರ್ಚಿ ಕುಸ್ತಿ' ಯಲ್ಲಿ ಸ್ತಬ್ದವಾಗಿರುವ ಆಡಳಿತದಿಂದ ನೇಮಕಾತಿಗಳು ಆಗದೆ ಪರೀಕ್ಷಾರ್ಥಿಗಳ ಶ್ರಮ ಫಲ ನೀಡದೆ ಇದ್ದರೆ ಇನ್ನೊಂದು ಕಡೆ ವಯೋಮಿತಿ ಮೀರುವ ಆತಂಕದಲ್ಲಿದ್ದಾರೆ. ಸರ್ಕಾರದಿಂದ ಪರೀಕ್ಷಾರ್ಥಿಗಳಿಗೆ ಯಾವುದೇ ಸ್ಪಷ್ಟ ಭರವಸೆ ಇಲ್ಲದೆ ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ ಎಂದಿದ್ದಾರೆ. ಖಾಲಿ ಇರುವ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಧಾರವಾಡದಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪರೀಕ್ಷಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ. 'ಕುರ್ಚಿ ಕುಸ್ತಿ' ಯಲ್ಲಿ ಸ್ತಬ್ದವಾಗಿರುವ ಆಡಳಿತದಿಂದ ನೇಮಕಾತಿಗಳು ಆಗದೆ ಪರೀಕ್ಷಾರ್ಥಿಗಳ ಶ್ರಮ ಫಲ ನೀಡದೆ ಇದ್ದರೆ ಇನ್ನೊಂದು ಕಡೆ ವಯೋಮಿತಿ ಮೀರುವ… pic.twitter.com/4cGjlRPC1n...