ಬಿಹಾರ: ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ಪಾಟ್ನಾ: ಬಿಹಾರದಲ್ಲೂ ಅಹಿಂದಾ ನಾಯಕ ಸಿದ್ದರಾಮಯ್ಯ ಹವಾ ಇದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಭೇಟಿನೀಡಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತಿಸಿದ ಸನ್ನಿವೇಶ ಗಮನಸೆಳೆಯಿತು. ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಹರ್ಷೋದ್ಗಾರದಿಂದ ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲೇ ನಾಯಕರು ಶಾಲು ಹೊದಿಸಿ ಸನ್ಮಾನಿಸಿದರು.
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಬಿಹಾರದ ಪಟ್ನಾಗೆ ಆಗಮಿಸಿದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಹರ್ಷೋದ್ಘಾರ, ಪ್ರೀತಿ ತುಂಬಿದ ಸ್ವಾಗತ ಕಂಡು ಖುಷಿಯಾಯಿತು.
ದೇಶದ ಯಾವ ಮೂಲೆಗೆ ಹೋದರೂ ಇದೇ ತೆರನಾದ ಪ್ರೀತಿ, ಅಕ್ಕರೆಯಿಂದ ಜನ ನನ್ನನ್ನು ಎದುರುಗೊಳ್ಳುತ್ತಾರೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಆ… pic.twitter.com/QpXYOQlXwS
— Siddaramaiah (@siddaramaiah) September 23, 2025
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ದೇಶದ ಯಾವ ಮೂಲೆಗೆ ಹೋದರೂ ಇದೇ ತೆರನಾದ ಪ್ರೀತಿ, ಅಕ್ಕರೆಯಿಂದ ಜನ ನನ್ನನ್ನು ಎದುರುಗೊಳ್...








