ರಾಯಣ್ಣ ಜೊತೆಗೆ ‘ಚೆನ್ನಮ್ಮ ಬ್ರಿಗೇಡ್’; ಈಶ್ವರಪ್ಪ ಕಾರ್ಯತಂತ್ರ

ವಿಜಯಪುರ: ಬಿಎಸ್ ಯಡಿಯೂರಪ್ಪ ಕುಟುಂಬ ರಾಜಕಾರಣ ವಿರುದ್ಧ ಸಮರ ಸಾರಿರುವ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇದೀಗ ಮತ್ತೊಂದು ರಾಯಣ್ಣ ಬ್ರಿಗೇಡ್ ಜೊತೆಗೆ ಮತ್ತೊಂದು ಸಂಘಟನೆಗೆ ತಯಾರಿ ನಡೆಸಿದ್ದಾರೆ.

ವಿಜಯಪುರದಲ್ಲಿ ಬೆಂಬಲಿಗರ ಸಭೆ ನಡೆಸಿರುವ ಈಶ್ವರಪ್ಪ, ಸದ್ಯದಲ್ಲೇ ಹಿಂದುತ್ವದ ಹೆಸರಿನಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸಂಘಟನೆ ಮಾಡುವುದಾಗಿ ಘೋಷಿದ್ದಾರೆ.

ವಿಜಯಪುರ ಸಮೀಪದ ಮಹಲ್ ಐನಾಪುರ ಗ್ರಾಮದಲ್ಲಿರುವ ಹುಲಜಂತಿ ಮಠದ ಆವರಣದಲ್ಲಿ ಈಶ್ವರಪ್ಪ ಅವರು ವಿವಿಧ ಮಠಾಧೀಶರು ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಿದರು. ಸದ್ಯವೇ ಮತ್ತೊಂದು ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡುವ ಸುಳಿವನ್ನು ಈಶ್ವರಪ್ಪ ನೀಡಿದರು.