ಇದೀಗ ‘ದೇವರ’ ಹವಾ; ಬಿಡುಗಡೆಗೆ ಮುನ್ನವೇ ದಾಖಲೆಯ ಗಳಿಕೆ

ಜೂನಿಯರ್​ ಎನ್​ಟಿಆರ್ ಅಭಿನಯದ ‘ದೇವರ’ ಚಿತ್ರ ಸಿನಿಲೋಕದಲ್ಲಿ ಬಿಡುಗಡೆಗೆ ಮುನ್ನವೇ ಹವಾ ಸೃಷ್ಟಿಸಿದೆ. ಸೆಪ್ಟೆಂಬರ್ 27ರಂದು ‘ದೇವರ’ ಸಿನಿಮಾ ಬಿಡುಗಡೆ ಅಗಲಿದ್ದು ಈಗಲೇ ಗಳಿಕೆಯಲ್ಲಿ ದಾಖಲೆ ಸೃಷ್ಟಿಸುವ ಪ್ರಯತ್ನದಲ್ಲಿದೆ.

ಕೊರಟಾಲ ಶಿವ ಅವರು ಈ ಚಿತ್ರವನ್ನು ನಿರ್ದೇಶನದ ಈ ಸಿನಿಮಾ ದೇಶ-ವಿದೇಶಗಳಲ್ಲಿ ಭರ್ಜರಿ ಗಳಿಕೆ ಮೂಲಕ ಸುದ್ದಿಯಲ್ಲಿದೆ. ಅಮೆರಿಕದಲ್ಲೇ ಬರೋಬ್ಬರಿ 8 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ರಿಲೀಸ್​ಗೂ ಮೊದಲೇ ಅಡ್ವಾನ್ಸ್ ಬುಕಿಂಗ್ ಪ್ರಾರಂಭಿಸಲಾಗಿದ್ದು ಅಮೆರಿಕದಲ್ಲಿ 30 ಸಾವಿರಕ್ಕೂ ಹೆಚ್ಚು ಟಿಕೆಟ್​ಗಳು ಮಾರಾಟ ಆಗಿವೆ. ಈ ಮೂಲಕ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.