Wednesday, June 25

HMPV ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಇರಲಿ; ಅರೋಗ್ಯ ಸಚಿವರ ಸಲಹೆ

ಬೆಂಗಳೂರು: ಚೀನಾದಲ್ಲಿ ಭೀತಿಯ ಅಲೆ ಎಬ್ಬಿಸಿರುವ HMPV ಹೊಸ ವೈರಸ್ ಅಲ್ಲ, ಅನೇಕ ವರ್ಷಗಳ ಹಿಂದಿನಿಂದಲೂ ಈ ವೈರಸ್ ಹಾವಳಿ ಇದೆ. ಹಾಗಾಗಿ ಈ ಸೋಂಕಿನ ಬಗ್ಗೆ ಆಂತಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಬೆಂಗಳೂರಿನಲ್ಲಿ ಮಕ್ಕಳಲ್ಲಿ HMPV ಸೋಂಕು ದೃಢಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದೇಶದಲ್ಲಿ ಇದು ಮೊದಲ ಪ್ರಕರಣ ಎಂಬುದು ನಿಜವಲ್ಲ. HMPV ಅಸ್ತಿತ್ವದಲ್ಲಿರುವ ವೈರಸ್. ಈ ವೈರಸ್ ನಿಂದ ಉಸಿರಾಟದ ತೊಂದರೆ ಸಮಸ್ಯೆ ಸಾಧ್ಯತೆ ಇದೆ. ಈ ವೈರಸ್​ ಕಡಿಮೆ ಇಮ್ಯೂನಿಟಿ ಹೊಂದಿರುವವರಿಗೆ ಬರುತ್ತದೆ ಎಂದರು.

ಈ ನಡುವೆ, ಬೆಂಗಳೂರಿನಲ್ಲಿ HMPV ಸೋಂಕು ತಗುಲಿರುವ ಮಗುವಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಪೋಷಕರು ಕೂಡಾ ಸ್ಥಳೀಯರಾಗಿದ್ದಾರೆ ಎಂದಿರುವ ಸಚಿವರು, ಬೆಂಗಳೂರಿನಲ್ಲಿನ ಪ್ರಕರಣಕ್ಕೂ ಚೀನಾ ವೇರಿಯಂಟ್​ಗೂ ಸಾಮ್ಯತೆ ಇಲ್ಲ ಎಂದಿದ್ದಾರೆ. HMPV ಬಗ್ಗೆ ಜನರು ಆತಂಕಪಡುವ ಅವಶ್ಯಕತೆ ಇಲ್ಲ, ಆದರೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.