Saturday, December 6

‘ಆವೆ ಮಣ್ಣನ್ನು ಮೈನ್ಸ್‌ ಎಂದು ಪರಿಗಣಿಸಬೇಡಿ’: ಸರ್ಕಾರದ ನಿರ್ಧಾರಕ್ಕೆ ಗಂಟಿಹೊಳೆ ಆಕ್ರೋಶ..

ಬೆಂಗಳೂರು: ಆವೆ ಮಣ್ಣನ್ನು ಮೈನ್ಸ್‌ ಎಂದು ಸರ್ಕಾರ ಪರಿಗಣಿಸಿರುವುದಕ್ಕೆ ಕರಾವಳಿ ಜಿಲ್ಲೆಗಳ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘UDAYA NEWS’ ಇಂಗ್ಲಿಷ್ ಆವೃತ್ತಿಯಲ್ಲೂ ಲಭ್ಯ.. 

ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಬೈಂದೂರು ಶಾಸಕ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.


ಆವೆ ಮಣ್ಣನ್ನು ಹಂಚಿನ ಕಾರ್ಖಾನೆಗಳಿಗೆ ಬಳಸಲಾಗುತ್ತಿದೆ ಎಂದು ಸರ್ಕಾರದ ಗಮನಸೆಳೆದ ಅವರು, ಹಂಚಿನ ಕಾರ್ಖಾನೆಗಳು ಸಾವಿರಾರು ಬಡವರಿಗೆ ಬದುಕು ಕಲ್ಪಿಸಿದೆ. ಆದರೆ ಹಂಚಿನ ಕಾರ್ಖಾನೆಗಳಿಗೆ ಅಗತ್ಯವಾಗಿರುವ ಆವೆ ಮಣ್ಣನ್ನು ಮೈನ್ಸ್‌ ಎಂದು ಸರ್ಕಾರ ಪರಿಗಣಿಸಿದೆ. ಇದರಿಂದ ಕಾರ್ಖಾನೆಗಳು ಮುಚ್ಚುವ ಪರಿಸ್ಥಿತಿ ಉದ್ಭವವಾಗಿದೆ. ಕಾರ್ಖಾನೆಗಳು ಬಾಗಿಲು ಹಾಕಿದರೆ ಸಾವಿರಾರು ಬಡವರಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ಹೊರಹಾಕಿದರು.