Saturday, December 6

ಭಾರತ-ಪಾಕ್ ಯುದ್ಧ ಆರಂಭ; ಪಾಕಿಸ್ತಾನದ ಎಲ್ಲಾ ಪ್ರಯತ್ನಗಳಿಗೂ ಬ್ರೇಕ್

ಕರಾಚಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್ ಪ್ರೇರಿತ ಉಗ್ರರ ವಿರುದ್ದದ ಕಾರ್ಯಾಚರಣೆ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸನ್ನಿವೇಶಕ್ಕೆ ತಿರುಗಿದೆ. ಕಳೆದೆರಡು ದಿನಗಲ್ಲಿ ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಪಡೆಗಳ ನಡುವೆ ಸಮರ ನಡೆಟೈತ್ತಿದ್ದು, ಗುರುವಾರ ನಡೆದ ಕಾರ್ಯಾಚರಣೆ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

ಭಾರತೀಯ ಸೇನಾ ನೆಲೆಯನ್ನೇ ಪಾಕಿಸ್ತಾನ ಗುರಿಯಾಗಿಸಿ ದಾಳಿ ಮಾಡಲು ಮುಂದಾಗಿದೆ. ಆದರೆ ಕ್ಷಿಪ್ರ ಪ್ರತಿರೋಧ ತಾಳಿದ ಭಾರತವು ಪಾಕ್ ಸೇನೆಯ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಪಾಕಿಸ್ತಾನದ​ ಫೈಟರ್​ ಜೆಟ್​ ಎಫ್‌-16 ಅನ್ನೂ ಭಾರತ ಧ್ವಂಸಗೊಳಿಸಿದೆ. ಜಮ್ಮು ವಾಯುನೆಲೆ ಮೊದಲ ಟಾರ್ಗೆಟ್ ಆಗಿತ್ತಾದರೂ ಅನಂತರದಲ್ಲಿ ರಾಜೌರಿ, ಪಠಾಣ್‌ಕೋಟ್‌, ಪೂಂಚ್‌, ಅಖ್ನೂರ್‌, ಜೈಸಲ್ಮೇರ್‌, ತಂಗಹಾರ್‌ ಸುತ್ತಮುತ್ತಲ ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನೆಯು ಡ್ರೋನ್‌ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆ ಅದನ್ನು ವಿಫಲಗೊಳಿಸಿದೆ.

ಇನ್ನೊಂದೆಡೆ, ಭಾರತಕ್ಕೆ ಪಾಕಿಸ್ತಾನ ಸೇನೆ ಲಗ್ಗೆ ಹಾಕಲು ಮುಂದಾಗುತ್ತಿದ್ದಂತೆಯೇ, ಭಾರತ ಸೇನೆ, ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದೆ. ಇಸ್ಲಾಮಾಬಾದ್, ಕರಾಚಿ, ಲಾಹೋರ್ ನಗರಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಅಕ್ಷರಶಃ ಬೆಚ್ಚಿ ಬಿದ್ದಿದೆ.

ಇದಕ್ಕೂ ಮುನ್ನ, ಜಮ್ಮು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಲು ಪಾಕಿಸ್ತಾನ ವಿಫಲ ಪ್ರಯತ್ನ ನಡೆಸಿದ್ದು, ಪಾಕ್ ಡ್ರೋನ್‌ಗಳನ್ನು ಭಾರತದ ಎಸ್ -400 ಹೊಡೆದುರುಳಿಸಿದೆ. ಇದರ ಜೊತೆಗೆ ಪಾಕಿಸ್ತಾನದ 1 ಎಫ್‌-16, 2 ಜೆಎಫ್‌-17 ಫೈಟರ್ ಜೆಟ್‌ಗಳನ್ನುಭಾರತ ಹೊಡೆದುರುಳಿಸುವ ಮೂಲಕ ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ಭಟ್ ವಿಫಲಗೊಳಿಸಿದೆ.