Monday, June 23

KSLU: ಕರ್ನಾಟಕ ರಾಜ್ಯ ಕಾನೂನು ವಿವಿ ಪರೀಕ್ಷೆ ಮುದೂಡಿಕೆ; ಆ.27ರ ಪರೀಕ್ಷೆ ಸೆ.18ಕ್ಕೆ ನಿಗದಿ

ಹುಬ್ಬಳ್ಳಿ: ಕೆಪಿಎಸ್‌ಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. 27-08-2024ರಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು 18-09-2024ರಂದು ನಡೆಸಲಾಗುವುದು ಎಂದು ಕಾನೂನು ವಿವಿ ಪ್ರಕಟಣೆ ತಿಳಿಸಿದೆ.

ಗೆಜೆಟೆಡ್ ಪ್ರೊಬೇಸನರ್ಸ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆಯ ದಿನದಂದು ರಾಜ್ಯದಲ್ಲಿ ವಿಶೇಷ/ಸಾರ್ವತ್ರಿಕ ರಜೆಯನ್ನು ಘೋಸಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕಾನೂನು ವಿವಿ ಪರೀಕ್ಷಾ ವೇಳಾಪಟ್ಟಿಯಲ್ಲಿ 27.08.2024ರಂದು ನಿಗದಿ ಪಡಿಸಿದ ಎಲ್ಲ ಪರೀಕ್ಷೆಗಳನ್ನು 18.09.2024ರಂದು ನಡೆಸಲು ತಿರ್ಮಾನಿಸಲಾಗಿದೆ. ಪರೀಕ್ಷೆಗಳ ಸಮಯದಲ್ಲಿ ಯಾವುದೇ ಬದಲಾವಣೆ ಇರುವದಿಲ್ಲ, ಎಂಬ ಮಾಹಿತಿಯನ್ನು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಮತ್ತು ಸಂಬಂಧಪಟ್ಟ ಸಿಬ್ಬಂದಿ ಗಮನಕ್ಕೆ ತರಲು ಸೂಚಿಸಲಾಗಿದೆ ಎಂದು KSLU ತಿಳಿಸಿದೆ.