ಭೂ ಕುಸಿತ.. ಈಗ ಪುತ್ತೂರು ಸರದಿ.. ಹೆದ್ದಾರಿಯಲ್ಲಿ ವಾಹನ ಸಂಚಾರ ಏರುಪೇರು

ಮಂಗಳೂರು: ಕರಾವಳಿ ಮಲೆನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ ಮುಂದುವರಿದಿದ್ದು ಬಹುತೇಕ ನದಿಗಳ ತೀರ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ಪಾತ್ರದ ಅನೇಕ ಹಳ್ಳಿಗಳ ತಗ್ಗು ಪ್ರದೇಶಗಳು ಜಲಾವ್ರತವಾಗಿವೆ.

ಈ ನಡುವೆ, ರಾಜ್ಯದ ಹಲವೆಡೆ ಮಳೆಯಿಂದಾಗಿ ಸರಣಿ ಅವಘಡಗಳು ಸಂಭವಿಸುತ್ತಿದ್ದು. ಭೂ ಕುಸಿತದ ದುರ್ಘಟನೆಗಳಿಂದಾಗಿ, ಹಲವು ನಗರಗಳನ್ನು ಸಂಪರ್ಕಿಸುವ ರಸ್ತೆಗಳು ಬಂದ್ ಆಗಿವೆ. ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಬಳಿ ಶುಕ್ರವಾರ ಮುಂಜಾನೆ ಭೂ ಕುಸಿತ ಸಂಭವಿಸಿದೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ತೆಂಕಿಲ ಬಪ್ಪಳಿಗೆ ಎಂಬಲ್ಲಿ ಬೈಪಾಸ್ ಬಳಿ ಗುಡ್ಡಕುಸಿದು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸ್ಥಳಕ್ಕೆ ಧಾವಿಸಿರುವ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.