Saturday, December 6

ಪಾಕ್ ಸ್ವಾಧೀನ ಪ್ರದೇಶದ ಮೇಲೆ ಭಾರತ ‘ಏರ್ ಸ್ಟ್ರೈಕ್’; ಉಗ್ರರ ಅಡಗುತಾಣಗಳು ಧ್ವಂಸ

ನವದೆಹಲಿ: ಪಹಲ್ಲಾಮ್ ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಉಗ್ರ ಪೋಷಕ ಪಾಕಿಸ್ತಾನದ ಮೇಲೆ ಭಾರತ ವಾಯುದಾಳಿ ನಡೆಸಿದ್ದು, ಉಗ್ರರ ಅಡಗುತಾಣಗಳನ್ನು ಧ್ವಂಸ ಮಾಡಿದೆ.

ಬುಧವಾರ ತಡ ರಾತ್ರಿ ಪಾಕ್ ಆಕ್ರಮಿತ ಭಾರತ ಪ್ರದೇಶದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಯಲ್ಲಿ ಹಲವು ಉಗ್ರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.


ಪಹಲ್ಲಾಮ್ ಉಗ್ರರ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಆತಂಕ ಕವಿದಿದೆ. ಪಾಕಿಸ್ತಾನಕ್ಕೆ ಹಲವು ರೀತಿಯಲ್ಲಿ ಹೊಡೆತ ನೀಡಿರುವ ಭಾರತ ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶಗಳ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದೆ.

‘ಆಪರೇಷನ್ ಸಿಂಧೂರ್ ‘:

ವರ್ಷಗಳ ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಭಾರತ ಈ ಬಾರಿ ಅದಕ್ಕಿಂತಲೂ ಭೀಕರ ಕಾರ್ಯಾಚರಣೆ ನಡೆಸಿದೆ. ಕೋಟ್ಲಿ, ಬಹ್ವಲ್ಪುರ್ ಮತ್ತು ಮುಜಫರಾಬಾದ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಈ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ ಎಂದು ಹೆಸರಿಸಲಾಗಿದೆ.


ಗುರುವಾರ ಮಧ್ಯರಾತ್ರಿ ಸುಮಾರು 9 ಉಗ್ರರ ಅಡಗುತಾಣಗಳನ್ನು ಧ್ವಂಸ ಧ್ವಂಸ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.