Wednesday, June 25

ಪಹಲ್ಗಾಮ್ ದಾಳಿ: ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ನಿಂತ ಸಂತೋಷ್ ಲಾಡ್

ಶ್ರೀನಗರ : ಜಮ್ಮು ಕಾಶ್ಮೀರದ ಪಹಲ್ಗಾಮ್’ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯ ಭಾರತದ ಪಾಲಿಗೆ ಅತ್ಯಂತ ಕರಾಳ ಘಟನೆಯಾಗಿದೆ. ಪ್ರವಾಸಿಗರನ್ನೇ ಗುರಿಯಾಗಿಸಿ ನಡೆದಿರುವ ಈ ದಾಳಿಯಲ್ಲಿ ಕನ್ನಡಿಗರೂ ಬಲಿಯಾಗಿದ್ದಾರೆ.

ಈ ನಡುವೆ ಜಮ್ಮುಕಾಶ್ಮೀರಕ್ಕೆ ಪ್ರವಾಸ ತೆರಳಿರುವ ಕನ್ನಡೀರನೇಕರು ಆತಂಕದಲ್ಲಿದ್ದು ರಾಜ್ಯಕ್ಕೆ ಮರಳಲು ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕನ್ನಡಿಗರಿಗೆ ಸರ್ಕಾರದ ವತಿಯಿಂದ ನೆರವಾಗಲು ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಅಧಿಕಾರಿಗಳನ್ನೊಳಗೊಂಡ ತಂಡ ಕಾಶ್ಮೀರಕ್ಕೆ ತೆರಳಿದೆ. ಸಂಕಷ್ಟದಲ್ಲಿ ಸಿಲುಕಿರುವ ಕನ್ನಡಿಗರ ಜೊತೆ ಚರ್ಚಿಸಿರುವ ಸಚಿವ ಸಂತೋಷ್ ಲಾಡ್, ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ.