Tuesday, September 9

‘ಆಪರೇಷನ್ ಸಿಂಧೂರ’: ಪಾಕಿಸ್ತಾನದ 35-40 ಸೇನಾ ಸಿಬ್ಬಂದಿ ಸಾವು

‘ಭಾರತೀಯ ದಾಳಿಗಳಲ್ಲಿ ಪಾಕಿಸ್ತಾನ ಸೇನೆಯು 35-40 ಸಿಬ್ಬಂದಿಯನ್ನು ಕಳೆದುಕೊಂಡಿತು’ ಎಂದು ಡಿಜಿಎಂಒ ವಿಶೇಷ ಮಾಹಿತಿಯಲ್ಲಿ ತಿಳಿಸಿದ್ದಾರೆ

ನವದೆಹಲಿ: ‘ಆಪರೇಷನ್ ಸಿಂಧೂರ’ ಹೆಸರಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 35-40 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಎಂದು ಡಿಜಿಎಂಒ ವಿಶೇಷ ಮಾಹಿತಿ ತಿಳಿಸಿದೆ. ಪಾಕಿಸ್ತಾನ ಸೇನೆಯು ಮೇ 7-10 ರ ನಡುವೆ ತನ್ನ ಆಕ್ರಮಣಕ್ಕೆ ಪ್ರತಿಯಾಗಿ ಭಾರತ ಪ್ರತೀಕಾರದ ಪ್ರತಿದಾಳಿ ನಡೆಸಿದಾಗ ಸುಮಾರು 35-40 ಸಿಬ್ಬಂದಿಯನ್ನು ಕಳೆದುಕೊಂಡಿತು ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಭಾನುವಾರ ವಿಶೇಷ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆಯ ಅಪರಾಧಿಗಳು ಮತ್ತು ಯೋಜಕರ ಢಮನಕ್ಕಾಗಿ ಮತ್ತು ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡಲು ಸ್ಪಷ್ಟ ಮಿಲಿಟರಿ ಗುರಿಯೊಂದಿಗೆ ಆಪರೇಷನ್ ಸಿಂಧೂರ್ ಅನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

“ಮೇ 7 ರಂದು ನಮ್ಮ ಗುರಿ ಭಯೋತ್ಪಾದಕರು ಮತ್ತು ಅವರ ಮೂಲಸೌಕರ್ಯಗಳನ್ನು ಗುರಿಯಾಗಿಸುವುದಾಗಿತ್ತು. ವಿಶೇಷವಾಗಿ ಪಾಕಿಸ್ತಾನಿ ನಾಗರಿಕ ಅಥವಾ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಬಾರದು. ಮತ್ತು ನಾವು ಇದನ್ನು ನಿಖರವಾಗಿ ಸಾಧಿಸಿದ್ದೇವೆ. ಆದಾಗ್ಯೂ, ಮೇ 7 ರ ಸಂಜೆ, ನಮ್ಮ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಮಾನವರಹಿತ ವೈಮಾನಿಕ ವಾಹನಗಳು (UAV ಗಳು) ಮತ್ತು ಸಣ್ಣ ಡ್ರೋನ್‌ಗಳ ಸವಾಲನ್ನು ಎದುರಿಸಬೇಕಾಯಿತು. ಅವುಗಳ ದಾಳಿಯನ್ನು ಯಶಸ್ವಿಯಾಗಿ ತಡೆಯಲಾಯಿತು. ಮೂರು ಡ್ರೋನ್‌ಗಳು ಇಳಿಯುವಲ್ಲಿ ಯಶಸ್ವಿಯಾದರೂ ಅದರಿಂದ ಹಾನಿಯುಂಟಾದವು” ಎಂದು ಅವರು ವಿವರಿಸಿದರು.

“ಮೇ 8-9 ರ ರಾತ್ರಿ, ಪಾಕಿಸ್ತಾನವು ಗಡಿಯುದ್ದಕ್ಕೂ ನಮ್ಮ ವಾಯುಪ್ರದೇಶಕ್ಕೆ ಡ್ರೋನ್‌ಗಳು ಮತ್ತು ವಿಮಾನಗಳನ್ನು ಹಾರಿಸಿದೆ. ಹಲವಾರು ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಲು ವಿಫಲ ಪ್ರಯತ್ನಗಳನ್ನು ನಡೆಸಿದೆ. ಪಾಕಿಸ್ತಾನದಿಂದ ಎಲ್‌ಒಸಿಯಲ್ಲಿ ಉಲ್ಲಂಘನೆಗಳು ಪುನರಾವರ್ತನೆಯಾಯಿತು ಮಾತ್ರವಲ್ಲ ಉಗ್ರ ಕಾರ್ಯಾಚರಣೆಗಳಿಗೆ ಕಾರಣವಾಯಿತು” ಎಂದು ಸೇನೆ ಪತ್ತೆಮಾಡಿದೆ ಎಂದು ಅವರು ಮಾಹಿತಿ ಒದಗಿಸಿದರು.