Saturday, December 6

ಪಾಕಿಸ್ತಾನಕ್ಕೆ ಮರ್ಮಾಘಾತ: ಕರಾಚಿ ಬಂದರು ಧ್ವಂಸ ಮಡಿದ ‘ವಿಕ್ರಾಂತ್’

ಕರಾಚಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕ್ ಪ್ರೇರಿತ ಉಗ್ರರ ವಿರುದ್ದದ ಕಾರ್ಯಾಚರಣೆ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಸನ್ನಿವೇಶಕ್ಕೆ ತಿರುಗಿದೆ. ಕಳೆದೆರಡು ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಪಡೆಗಳ ನಡುವೆ ಸಮರ ನಡೆಯುತ್ತಿದ್ದು, ಗುರುವಾರ ನಡೆದ ಕಾರ್ಯಾಚರಣೆ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

ಭಾರತೀಯ ಸೇನಾ ನೆಲೆಯನ್ನೇ ಪಾಕಿಸ್ತಾನ ಗುರಿಯಾಗಿಸಿ ದಾಳಿ ಮಾಡಲು ಮುಂದಾಗಿದೆ. ಆದರೆ ಕ್ಷಿಪ್ರ ಪ್ರತಿರೋಧ ತಾಳಿದ ಭಾರತವು ಪಾಕ್ ಸೇನೆಯ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಜಮ್ಮು ವಾಯುನೆಲೆ ಮೊದಲ ಟಾರ್ಗೆಟ್ ಆಗಿತ್ತಾದರೂ ಅನಂತರದಲ್ಲಿ ರಾಜೌರಿ, ಪಠಾಣ್‌ಕೋಟ್‌, ಪೂಂಚ್‌, ಅಖ್ನೂರ್‌, ಜೈಸಲ್ಮೇರ್‌, ತಂಗಹಾರ್‌ ಸುತ್ತಮುತ್ತಲ ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನೆಯು ಡ್ರೋನ್‌ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆ ಅದನ್ನು ವಿಫಲಗೊಳಿಸಿದೆ.

ಇದರ ಜೊತೆಗೆ ಭಾರತಕ್ಕೆ ಪಾಕಿಸ್ತಾನ ಸೇನೆ ಲಗ್ಗೆ ಹಾಕಲು ಮುಂದಾಗುತ್ತಿದ್ದಂತೆಯೇ, ಭಾರತ ಸೇನೆ, ಪಾಕಿಸ್ತಾನಕ್ಕೆ ನುಗ್ಗಿ ಹೊಡೆದಿದೆ. ಇಸ್ಲಾಮಾಬಾದ್, ಕರಾಚಿ, ಲಾಹೋರ್ ನಗರಗಳನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಅಕ್ಷರಶಃ ಬೆಚ್ಚಿ ಬಿದ್ದಿದೆ. ಇಸ್ಲಾಂಮಬಾದ್, ಲಾಹೋರ್, ರಾವಲ್ಪಿಂಡಿ ಸೇರಿದಂತೆ ಹಲವು ಪಾಕ್​ ನಗರಗಳ ಮೇಲೆ ದಾಳಿ ನಡೆಸಿರುವ ಭಾರತ, ನೌಕಾಪಡೆಯನ್ನೂ ಅಖಾಡಕ್ಕಿಸಿ ತನ್ನ ಶಕ್ತಿಯನ್ನು ಜಗತ್ತಿಗೆ ಅನಾವರಣ ಮಾಡಿದೆ. ಐಎನ್‌ಎಸ್‌ ವಿಕ್ರಾಂತ್ ಮೂಲಕ ಪಾಕಿಸ್ತಾನದ ಕರಾಚಿ ಬಂದರನ್ನು ಭಾರತ ಸರ್ವನಾಶ ಮಾಡಿದೆ.

ಐಎನ್‌ಎಸ್‌ ವಿಕ್ರಾಂತ್ ತನ್ನ ಪರಾಕ್ರಮ ಪ್ರದರ್ಶಿಸಿದ್ದು, 10ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಕರಾಚಿ ಬಂದರನ್ನು ಧ್ವಂಸಗೊಳಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.