
ಚಿತ್ರ ಮಂದಿರದೊಳಗೆ ನೀರಿನ ಬಾಟಲಿ ಕೊಂಡೊಯ್ಯಲು ಅವಕಾಶ ಇರಬೇಕು’: ನಟ ನಿಖಿಲ್ ಸಿದ್ಧಾರ್ಥ
ಚೆನ್ನೈ: ಚಿತ್ರಮಂದಿರಗಳಲ್ಲಿ ತಿನಿಸು ಮತ್ತು ತಂಪು ಪಾನೀಯಗಳ ಅತಿಯಾದ ಬೆಲೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ ನಿಖಿಲ್ ಸಿದ್ಧಾರ್ಥ, ಕನಿಷ್ಠ ನೀರಿನ ಬಾಟಲಿಗಳನ್ನು ಪ್ರೇಕ್ಷಕರು ಒಳಗೆ ತರಲು ಅವಕಾಶ ನೀಡಬೇಕೆಂದು ಪ್ರತಿಪಾದಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ‘X’ ಮೂಲಕ ಮನವಿ ಮಾಡಿರುವ ನಿಖಿಲ್, ಟಿಕೆಟ್ ದರಗಳಿಗೇ ಹೆಚ್ಚು ಹಣ ಹೋಗುತ್ತಿದೆ ಎಂಬುದರ ಜೊತೆಗೇ, ಪಾಪ್‌ಕಾರ್ನ್ ಹಾಗೂ ಸಾಫ್ಟ್ ಡ್ರಿಂಕ್‌ಗಳಿಗೆ ಮತ್ತಷ್ಟು ಹಣ ಕೊಡುವ ಸ್ಥಿತಿಯಾಗಿದೆ. ಇತ್ತೀಚೆಗಷ್ಟೇ ನಾನು ಒಂದು ಚಿತ್ರ ನೋಡಿದಾಗ, ತಿಂಡಿಗಳಿಗೆ ಚಿತ್ರಕ್ಕಿಂತ ಹೆಚ್ಚು ಹಣ ಖರ್ಚು ಮಾಡಿದ್ದೇನೆ. ಇದರ ಪರಿಹಾರಕ್ಕೆ ವಿತರಣಾ ವಲಯಗಳು ಗಮನಹರಿಸಬೇಕು. ಕನಿಷ್ಠ ನೀರಿನ ಬಾಟಲಿಯನ್ನು ತಂದೊಯ್ಯುವ ಅವಕಾಶ ಕೊಡಿಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರರಂಗದಲ್ಲಿ ವೇಗವಾಗಿ ಬೆಳೆದ ನಟರಲ್ಲಿ ಒಬ್ಬರಾದ ನಿಖಿಲ್, ಪ್ರಸ್ತುತ ತನ್ನ ಮುಂದಿನ ಬಹುಭಾಷಾ ಚಿತ್ರ 'ಸ್ವಯಂಭು' ಮೂಲಕ ಮತ್ತೆ ಗಮನಸೆಳೆದಿದ್ದಾರೆ. ಸ್ವಯಂಭು ಎಂಬ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಿಖಿಲ್ ಪೌರಾಣಿಕ ಯೋಧನ ಪಾತ್ರದಲ್ಲಿ ಅಭಿನಯಿಸುತ್ತಿದ್...