ಮಂಗಳೂರಿನ ‘ವೇದಾಂತ’ ಕಾಲೇಜಿನಲ್ಲಿ NEET, JEEE, CET ತರಬೇತಿ ಜೊತೆಗೆ ಉಚಿತ PUC ಶಿಕ್ಷಣ
ಮಂಗಳೂರು: ಕರಾವಳಿ ಮೂಲದ 'ವೇದಾಂತ ಶಿಕ್ಷಣ ಸಂಸ್ಥೆ' ಹೊಸ ಮೈಲುಗಲ್ಲು ಸಾಧಿಸಿದೆ. ಉನ್ನತ ಶಿಕ್ಷಣ, ವೈದ್ಯಕೀಯ ಶಿಕ್ಷಣಕ್ಕೆ ಬುನಾದಿಯಾಗುತ್ತಿರುವ 'ವೇದಾಂತ', NEET, JEEE, CET ತರಬೇತಿ ಮೂಲಕ ರಾಜ್ಯದಲ್ಲಿ ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ಇದೀಗ ಪದವಿಪೂರ್ವ ಶಿಕ್ಷಣವನ್ನೂ ಆರಂಭಿಸಿ, ನೂರಾರು ವಿದ್ಯಾರ್ಥಿಗಳಿಗೆ ಆಧಾರವಾಗಿ ನಿಂತಿದೆ.
ಮಂಗಳೂರಿನ ನೀರುಮಾರ್ಗ ಬಳಿಯ, ಫೆರ್ಮಾಯಿ ಚರ್ಚ್ ಸಮೀಪದ 'ವೇದಾಂತ ಪದವಿ ಪೂರ್ವ ಕಾಲೇಜು' ತನ್ನಲ್ಲಿರುವ ವಿದ್ಯಾರ್ಥಿಗಳಿಗೆ ಪಠ್ಯ ವಿಷಯಗಳ ಬೋಧನೆಯ ಜೊತೆಯಲ್ಲೇ CET, NEET, JEE ಕುರಿತು ತರಬೇತಿ ನೀಡುತ್ತಿದೆ. ಪದವಿ ಪೂರ್ವ ಶಿಕ್ಷಣದ ಸಂದರ್ಭದಲ್ಲೇ ವಿದ್ಯಾರ್ಥಿಗಳ ಆಸಕ್ತಿಗೆ ತಕ್ಕಂತೆಯೇ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಯಶಸ್ವೀ ಸೂತ್ರವನ್ನು 'ವೇದಾಂತ' ಹೇಳಿಕೊಡುತ್ತಿದೆ.
ಕಳೆದ 10 ವರ್ಷಗಳಿಂದ ವಿವಿಧ್ಯ ಎಂಬ ಹೆಸರಲ್ಲಿ CET, NEET, JEE ಪರೀಕ್ಷೆಗಳ ಬಗ್ಗೆ ಕೋಚಿಂಗ್ ನೀಡಲಾಗುತ್ತಿದೆ. ಈ ವಿಶೇಷ ಕೋಚಿಂಗ್ ಮೂಲಕ ಕರಾವಳಿಯ ಹಲವಾರು ವಿದ್ಯಾರ್ಥಿಗಳು ಉತ್ತಮ ಸ್ಥಾನ ಗಳಿಸಿ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರ್ಪಡೆಯಾಗಿದ...
