Tuesday, September 9

Tag: Greater Bangalore Authority; Assembly constituencies allocated to five municipal corporations

ಗ್ರೇಟರ್ ಬೆಂಗಳೂರು ಅಥಾರಿಟಿ; ಐದು ಪಾಲಿಕೆಗಳ ವ್ಯಾಪ್ತಿಗಳಿಗೆ ವಿಧಾನಸಭಾ ಕ್ಷೇತ್ರಗಳ ಹಂಚಿಕೆ

ಗ್ರೇಟರ್ ಬೆಂಗಳೂರು ಅಥಾರಿಟಿ; ಐದು ಪಾಲಿಕೆಗಳ ವ್ಯಾಪ್ತಿಗಳಿಗೆ ವಿಧಾನಸಭಾ ಕ್ಷೇತ್ರಗಳ ಹಂಚಿಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ರಾಜಧಾನಿ ಬೆಂಗಳೂರಿನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಜಾರಿಯಾಗಿದೆ. ರಾಜ್ಯ ಸರ್ಕಾರ ಬುಧವಾರದಿಂದಲೇ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಜಾರಿಗೆ ಬರುವಂತೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ, ಇನ್ನು ಮುಂದೆ ಬಿಬಿಎಂಪಿ ಬದಲು ಜಿಬಿಎ ನಗರದ ಆಡಳಿತವನ್ನು ನೋಡಿಕೊಳ್ಳಲಿದೆ. ಜಿಬಿಎ ಅಡಿಯಲ್ಲಿ . ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಹೆಸರುಗಳಲ್ಲಿ ಐದು ಹೊಸ ನಗರ ಪಾಲಿಕೆಗಳು ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಬಿಬಿಎಂಪಿಯ 198 ವಾರ್ಡ್‌ಗಳನ್ನು ಈ ಐದು ಪಾಲಿಕೆಗಳ ನಡುವೆ ಹಂಚಿಕೆ ಮಾಡಲಾಗಿದೆ. ಪ್ರತಿಯೊಂದು ಪಾಲಿಕೆಗೆ ಎರಡು ವಲಯಗಳಂತೆ ಒಟ್ಟು 10 ವಲಯಗಳನ್ನು ರಚಿಸಲಾಗಿದೆ. 'ಜಿಬಿಎ'ಗೆ ಸಿಎಂ ಸಿದ್ದರಾಮಯ್ಯ ಜಿಬಿಎ ಅಧ್ಯಕ್ಷರಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷರಾಗಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬೆಂಗಳೂರಿನ ಮೂವರು ಸಂಸದರು, ಹಾಗೂ ನಗರದ ಶಾಸಕರನ್ನು ಒಳಗೊಂಡಂತೆ 73 ಪದನಿಮಿತ್ತ ಸದಸ್ಯರನ್ನು ನೇಮಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು: ಬೆಂಗಳೂರು ಕೇಂದ್ರ ನಗರ ಪಾಲಿಕೆ: ಸಿವಿರಾಮನ್‌ನಗರ...