Thursday, January 29

Tag: Modern Tanker Calibration Unit in Mangalore

ಮಂಗಳೂರಿನಲ್ಲಿ ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ

ಮಂಗಳೂರಿನಲ್ಲಿ ಅತ್ಯಾಧುನಿಕ ಟ್ಯಾಂಕರ್‌ ಮಾಪನಾಂಕ ನಿರ್ಣಯ ಘಟಕ ಕಾರ್ಯಾರಂಭ

Focus, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು: ‘ಎಸ್‌ಎಸ್ ಮೆಟಲ್ಸ್ ಆಂಡ್ ಇಂಡಸ್ಟ್ರೀಸ್‌’ನ ಅತ್ಯಾಧುನಿಕ ಟ್ಯಾಂಕರ್ ಮಾಪನಾಂಕ ನಿರ್ಣಯ ಘಟಕ ಮಂಗಳೂರು ನಗರದಲ್ಲಿ ಉದ್ಘಾಟನೆಗೊಂಡಿದೆ. ಮಂಗಳೂರಿನ ಓಷನ್ ಪರ್ಲ್ ಹೊಟೇಲ್‌ನಲ್ಲಿ ಮಂಗಳವಾರ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಅನಾವರಣಗೊಂಡ ಈ ಘಟಕವು ಮಂಗಳೂರು ಸೇರಿದಂತೆ ವಿವಿಧೆಡೆಗಳಲ್ಲಿ ಬೃಹತ್ ತೈಲ, ರಾಸಾಯನಿಕ ನಿರ್ವಹಣೆ ಮಾಡುವ ಕೈಗಾರಿಕೆಗಳಿಗೆ ನಿಖರತೆ, ಸುರಕ್ಷತೆ ಮತ್ತು ನಿಯಂತ್ರಕ ಕ್ರಮಗಳನ್ನು ಅನುಸರಿಸಲು ಪೂರಕವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಉದ್ಯಮದ ಪ್ರಮುಖರು ಮತ್ತು ಧಾರ್ಮಿಕ ನಾಯಕರು ಪಾಲ್ಗೊಂಡಿದ್ದರು. ಬೆಂಗಳೂರಿನ ಸೈಂಟ್ ಆಂಡ್ರ್ಯೂಸ್ ಚರ್ಚ್‌ನ ವಂ.ಡಾ. ಡೆಕ್ಸ್ಟರ್ ಎಸ್. ಮಾಬೆನ್, ಜೋನಸ್ ಗ್ರೂಪ್‌ನ ನಿರ್ದೇಶಕ ಸುನಿಲ್ ಎ. ಜೋನಸ್, ಎಸ್‌ಎಸ್ ಮೆಟಲ್ಸ್‌ ನಿರ್ದೇಶಕಿ ಸಂಧ್ಯಾ ದೀಪಾ ಜೋನಸ್ ಭಾಗವಹಿಸಿದ್ದರು. ಪ್ರಮುಖ ಉದ್ಯಮ ಪ್ರತಿನಿಧಿಗಳಾದ ಎಂಆರ್‌ಪಿಎಲ್‌ನ ಜಿಜಿಎಂ (ಎಚ್‌ಆರ್) ಕೃಷ್ಣ ಹೆಗ್ಡೆ ಮಿಯಾರ್, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಕಾರ್ಯ ನಿರ್ವಾಹಕ ನಿರ್ದೇಶಕ ಸಂಜಯ್ ಪರಾಶರ್, ಶೈನಿ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ಪ್ರೈವೇಟ...