Wednesday, January 28

Tag: Praja Mani

‘ರಾಜಕೀಯವಾಗಿ, ಸೈದ್ದಂತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗದೆ’; ಪ್ರಿಯಾಂಕ್ ಆರೋಪ

‘ರಾಜಕೀಯವಾಗಿ, ಸೈದ್ದಂತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗದೆ’; ಪ್ರಿಯಾಂಕ್ ಆರೋಪ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: 'ರಾಜಕೀಯವಾಗಿ, ಸೈದ್ದಂತಿಕವಾಗಿ ನನ್ನನ್ನು ಟಾರ್ಗೆಟ್ ಮಾಡಲಾಗದೆ ಅಸಹಾಯಕ ಸ್ಥಿತಿಯಲ್ಲಿರುವ ಬಿಜೆಪಿಯವರು ನನ್ನ ವಿರುದ್ಧದ ವೈಯಕ್ತಿಕ ದಾಳಿಯಲ್ಲಿ ತೃಪ್ತಿ ಕಾಣುತ್ತಿದ್ದಾರೆ' ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. 'ಬಿಜೆಪಿಯವರ ದ್ವೇಷದ ಹೇಳಿಕೆಗಳು ನನಗೆ ಹೊಸದಲ್ಲ, ನಾನು ಇವರ ಹಗರಣಗಳನ್ನು ಬಯಲಿಗಿಟ್ಟಿದ್ದೇ ಈ ವೈಯಕ್ತಿಕ ನಿಂದನೆಗಳಿಗೆ ಕಾರಣ ಎನ್ನುವುದೂ ನನಗೆ ತಿಳಿದಿದೆ ಎಂದವರು ಬಿಜೆಪಿ ನಾಯಕರ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಗಂಗಾ ಕಲ್ಯಾಣ ಹಗರಣ, ಬಿಟ್ ಕಾಯಿನ್ ಹಗರಣ, KKRDB ಹಗರಣ, ಕೋವಿಡ್ ಹಗರಣ, PSI ಹಗರಣಗಳನ್ನು ಜನರ ಮುಂದಿಟ್ಟಿದ್ದನ್ನು ಬಿಜೆಪಿಗರಿಗೆ ಸಹಿಸಲಾಗುತ್ತಿಲ್ಲ. RSS ನವರನ್ನು ಸೈದ್ದಂತಿಕ ನೆಲೆಗಟ್ಟಿನಲ್ಲಿ ಬೆತ್ತಲುಗೊಳಿಸುತ್ತಿರುವುದೂ ಸಹ ಬಿಜೆಪಿಗರ ಈ ಅಸಹನೆಗೆ ಪ್ರಮುಖ ಕಾರಣ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ. ಸಾಮಾಜಿಕ ಮಾಧ್ಯಮ 'X'ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, 'ಈ ಹಿಂದೆ ಕಾನ್ವೆಂಟ್ ದಲಿತ ಎಂದಿದ್ದಾರೆ. ಪ್ರಿಯಾಂಕ್ ಎನ್ನುವ ಹೆಸರು ಹೆಣ್ಣೋ ಗಂಡೋ ಗೊತ್ತಿಲ್ಲ ಎಂದಿದ್ದಾರೆ. ದೇಹ ಬೆಳದಿ...