Thursday, January 29

Tag: Registrar Manipal Higher Education Academy Dr. P. Giridhar Kini

KSLU ಪರೀಕ್ಷಾ ಸುಧಾರಣಾ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ; ಕುಲಪತಿ ಪ್ರೊ.ಬಸವರಾಜು

KSLU ಪರೀಕ್ಷಾ ಸುಧಾರಣಾ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ; ಕುಲಪತಿ ಪ್ರೊ.ಬಸವರಾಜು

Focus, ಪ್ರಮುಖ ಸುದ್ದಿ, ರಾಜ್ಯ
ಉಡುಪಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಶಿಕ್ಷಣದಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಪರೀಕ್ಷಾ ವಿಧಾನದಲ್ಲೂ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕುಲಪತಿ ಪ್ರೊ.ಸಿ.ಬಸವರಾಜು ತಿಳಿಸಿದ್ದಾರೆ. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕ ದಿನ ಮತ್ತು ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದರು. ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದ ಅವರು, ಶೈಕ್ಷಣಿಕ ಸಾಧನೆಗೆ ಪೂರಕವಾದ ಮಾತುಗಳನ್ನಾಡಿ ಗಮನಸೆಳೆದರು. ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯವೆನಿಸಿರುವ ಕರ್ನಾಟಕ ರಾಜ್ಯ ಕಾನೂನು ವಿವಿ ಇದೀಗ ಪದವಿ ಶಿಕ್ಷಣದಲ್ಲಿ ಪರಿವರ್ತನೆ ತಂದಿದ್ದು, ದೇಶಾದ್ಯಂತ ಇರುವ ಕಾನೂನು ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಸಲಹೆಗಳನ್ನು ಆಧರಿಸಿ ಪಠ್ಯ ಕ್ರಮ ಹಾಗೂ ಪರಿಕ್ಷಾ ಪದ್ದತಿಯನ್ನು ಅಳವಡಿಸಲಾಗಿದೆ ಎಂದು ಡಾ.ಸಿ.ಬಸವರಾಜು ತಿಳಿಸಿದರು. ಪರೀಕ್ಷಾ ಹಂತದಲ್ಲಿ ಸುರಕ್ಷಾ ವ್ಯವಸ್ಥೆ ಅನುಸರಿಸಲಾಗುತ್ತಿದೆ. ಅಕ್ರಮಗಳನ್ನು ತಡೆಯಲು ಹೆಂದೆಂದಿಗಿಂತಲೂ ಹೆಚ್ಚಿನ ಬಿಗಿ ಕ್ರಮಗಳನ್ನು ...