Saturday, December 6

Tag: Shah Rukh Khan -Deepika Padukone

ದೋಷಪೂರಿತ ಕಾರು ಪ್ರಚಾರ: ಶಾರುಖ್, ದೀಪಿಕಾ ವಿರುದ್ಧ ಎಫ್‌ಐಆರ್

ದೋಷಪೂರಿತ ಕಾರು ಪ್ರಚಾರ: ಶಾರುಖ್, ದೀಪಿಕಾ ವಿರುದ್ಧ ಎಫ್‌ಐಆರ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಸಿನಿಮಾ
ಜೈಪುರ: ರಾಜಸ್ಥಾನದ ಭರತ್‌ಪುರದಲ್ಲಿ ಬಾಲಿವುಡ್ ನಟರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರು ಜಾಹೀರಾತು ಮಾಡಿದ ಕಾರಿನಲ್ಲಿ ಉತ್ಪಾದನಾ ದೋಷವಿದೆ ಎಂದು ವಕೀಲ ಕೀರ್ತಿ ಸಿಂಗ್ ಆರೋಪಿಸಿದ್ದಾರೆ. 2022ರಲ್ಲಿ 23.97 ಲಕ್ಷ ರೂ.ಗೆ ಕಾರು ಖರೀದಿಸಿದ ಸಿಂಗ್, 51 ಸಾವಿರ ರೂ. ಮುಂಗಡ ಪಾವತಿಸಿ, 10 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದರು. ಡೀಲರ್‌ಶಿಪ್ “ಕಾರು ತೊಂದರೆ-ಮುಕ್ತ”ವಾಗಿರುತ್ತದೆ ಎಂದು ಭರವಸೆ ನೀಡಿದ್ದರೂ, ಕೆಲವೇ ತಿಂಗಳಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡವು ಎಂದು ಅವರು ದೂರು ನೀಡಿದ್ದಾರೆ. “ಓವರ್‌ಟೇಕ್ ಮಾಡುವಾಗ ಕಾರು ಸರಿಯಾಗಿ ವೇಗ ಪಡೆಯುವುದಿಲ್ಲ. ಆರ್‌ಪಿಎಂ ಮಾತ್ರ ಹೆಚ್ಚಾಗುತ್ತದೆ. ಹೆಚ್ಚಿನ ವೇಗದಲ್ಲಿ ಕಾರು ಕಂಪಿಸಿ ಅಸಾಮಾನ್ಯ ಶಬ್ದ ಮಾಡುತ್ತದೆ. ದೂರಮಾಪಕದಲ್ಲಿ ಪದೇ ಪದೇ ಎಚ್ಚರಿಕೆ ಸಂದೇಶ ಬರುತ್ತದೆ,” ಎಂದು ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ. ಡೀಲರ್‌ಶಿಪ್‌ಗೆ ವಿಚಾರಿಸಿದಾಗ, ದೋಷವನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದರು. ಇದರಿಂದ ನೊಂದ ಸಿಂಗ್, ಗ್ರಾಹಕರನ್...