Saturday, December 6

ಲಾಸ್ ಏಂಜಲೀಸ್‌: ಭೀಕರ ಕಾಡ್ಗಿಚ್ಚಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆ

ಲಾಸ್ ಏಂಜಲೀಸ್: ಲಾಸ್ ಏಂಜಲೀಸ್‌ನಲ್ಲಿ ಭೀಕರ ಕಾಡ್ಗಿಚ್ಚಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 24 ಕ್ಕೆ ಏರಿಕೆಯಾಗಿದೆ.

ಲಾಸ್ ಏಂಜಲೀಸ್ ಕೌಂಟಿಯಾದ್ಯಂತ ಕಾಡ್ಗಿಚ್ಚು ತೀವ್ರಸ್ವರೂಪ ಪಡೆದಿದ್ದು, ಅಮೆರಿಕದ ಅತ್ಯಂತ ಜನನಿಬಿಡ ಕೌಂಟಿಯ ಇತಿಹಾಸದಲ್ಲಿ ಅತ್ಯಂತ ಕರಾಳ ದುರಂತ ಇದಾಗಿದೆ.

ಬೆಂಕಿಯು ಗುರುವಾರ ರಾತ್ರಿಯ ವೇಳೆಗೆ ಆರು ಪ್ರತಿಶತದಷ್ಟು ನಿಯಂತ್ರಣಕ್ಕೆ ಬಂದಿತ್ತು. ಸುಮಾರು 19,978 ಎಕರೆ (80.85 ಚದರ ಕಿಮೀ) ಅರಣ್ಯ ಭಸ್ಮವಾಗಿತ್ತು. ಆದರೆ ಅನಂತರ ಮತ್ತೆ ಉಲ್ಬಣಗೊಂಡು ಭಯಾನಕತೆಗೆ ಸಾಕ್ಷಿಯಾಯಿತು.

ಇದುವರೆಗೆ 10,000 ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿವೆಎಂದು ಅಂದಾಜಿಸಲಾಗಿದೆ. ಈ ಭೀಕರ ಕಾಡ್ಗಿಚ್ಚಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.