Thursday, January 29

ಕನ್ನಡಿಗರ ವಿರೋಧ ಕಟ್ಟಿಕೊಂಡ ‘ಥಗ್ ಲೈಫ್’ಗೆ ತಮಿಳುನಾಡಿನಲ್ಲೂ ಹೊಡೆತ?

ಕನ್ನಡಿಗರು ವಿರೋಧಿಸಿದರೂ ತಮ್ಮ ‘ಥಗ್ ಲೈಫ್’ ಚಿತ್ರ ಯಶಸ್ಸು ಸಾಧುತ್ತದೆ ಎಂಬ ಹುಮ್ಮಸ್ಸಿನಲ್ಲಿದ್ದ ತಮುಲು ನಟ ಕಮಲ್ ಹಾಸನ್​ಗೆ ತೀವ್ರ ಮುಖಭಂಗವಾಗಿದೆ. ಕನ್ನಡದ ಬಗ್ಗೆ ಅಕ್ಸೆಪಾರ್ಹ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ಕಮಲ್ ಹಾಸನ್ ಅವರಿಗೆ ತಮಿಳು ಸಿನಿಮಾ ಅಭಿಮಾನಿಗಳೂ ಬೆಂಬಲವಾಗಿ ನಿಂತಿಲ್ಲ. ಅವರ ನೊಸ ಸಿನಿಮಾ ‘ಥಗ್ ಲೈಫ್’ ಕಲೆಕ್ಷನ್ ದಿನೇ ದಿನೇ ಕಡಿಮೆಯಾಗುತ್ತಿದ್ದು, ಚಿತ್ರ ತಂಡವನ್ನು ಕಂಗಾಲಾಗಿಸಿದೆ.

‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ಮಾತನಾಡುವ ಮೂಲಕ ನಟ ಕಮಲ್ ಹಾಸನ್ ಕನ್ನಡಿಗರ ವಿರೋಧ ಕಟ್ಟಿಕೊಂಡರು. ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಯಾಗದಿದ್ದರೂ ತಮಿಳುನಾಡಿನಲ್ಲಿ ಯಶಸ್ಸು ಕಾಣಬಹುದು ಅಂದುಕೊಂಡಿದ್ದ ಕಮಲ್ ಹಾಸನ್ ಅವರಿಗೆ ತಮಿಳಿಗರೇ ಆಘಾತ ನೀಡಿದ್ದಾರೆ. ‘ಥಗ್ ಲೈಫ್’ ಸಿನಿಮಾ ಬಿಡುಗಡೆಯಾದ ದಿನ 15.5 ಕೋಟಿ ರೂಪಾಯಿ ಗಳಿಸಿದ್ದರೆ, ಎರಡನೇ ದಿನ ಕೇವಲ 7.5 ಕೋಟಿ ರೂಪಾಯಿ ಗಳಿಸಿದೆ.

ತಮಿಳು ಚಿತ್ರರಂಗಕ್ಕೆ ಕರ್ನಾಟಕವೂ ದೊಡ್ಡ ಮಾರುಕಟ್ಟೆ. ಆದರೆ ಕನ್ನಡ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡ ಕಾರಣದಿಂದಾಗಿ ಕಮಲ್ ಹಾಸನ್ ಅವರ ಈ ಸಿನಿಮಾ ದೊಡ್ಡ ಗಳಿಕೆಯಿಂದ ವಂಚಿತವಾಗಿದೆ