Wednesday, June 25

KSRTCಗೆ ಟಿವಿ-9 ನೆಟ್ವರ್ಕ್‌‌ನ ‘ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಪ್ರಶಸ್ತಿ’

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಪಾಲಿಗೆ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ಕೆಎಸ್ಸಾರ್ಟಿಸಿಗೆ ಟಿವಿ-9 ನೆಟ್ವರ್ಕ್‌ ನ ‘ದೇಶದ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ ಪ್ರಶಸ್ತಿ-2024’ ಲಭಿಸಿದೆ.

ನಿಗಮವು ಕೈಗೊಂಡಿರುವ ಬ್ರ್ಯಾಂಡಿಂಗ್ ಹಾಗೂ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ “ಟಿವಿ-9 ನೆಟ್ವರ್ಕ ಲೀಡರ್ಸ್ ಆಫ್ ರೋಡ್ ಟ್ರಾನ್ಸಪೋರ್ಟ್ 2024ರ ಪ್ರಶಸ್ತಿಯು ‘ವರ್ಷದ ದೇಶದ ಅತ್ಯುತ್ತಮ ಸಂಸ್ಥೆ’ ವರ್ಗದಲ್ಲಿ ಲಭಿಸಿದೆ.

ನವದೆಹಲಿಯ ‘ದ ಇಂಪೀರಿಯಲ್ ಜನಪತ್ ಲೇನ್, ಜನಪತ್’ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಸಚಿವರಾದ ಹರ್ಷ್ ಮಲೋತ್ರ ಅವರು, KSRTC ನಿಗಮಕ್ಕೆ ಪ್ರಶಸ್ತಿ ಪ್ರದಾನ ಮಾಡಿ, ಅಧಿಕಾರಿಗಳನ್ನು ಅಭಿನಂದಿಸಿದರು. ಕೆಎಸ್ಸಾರ್ಟಿಸಿ ನಿರ್ದೇಶಕರಾದ (ಸಿಬ್ಬಂದಿ ಮತ್ತು ಜಾಗೃತ) ಡಾ. ಕೆ.ನಂದಿನಿದೇವಿ ಅವರು ಪ್ರಶಸ್ತಿ ಸ್ವೀಕರಿಸಿದರು.