ಬೆಂಗಳೂರು: ಬಂಗಾಳದ ಚುನಾವಣೆ ನಮಗೆ ರಾಜಕೀಯ, ಅಧಿಕಾರದ ಹೋರಾಟವಲ್ಲ, ನಾಗರೀಕತೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಹೋರಾಟ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆಯ ಕ್ರಮವನ್ನು ಟೀಕಿಸುತ್ತಿರುವ ರಾಜಕೀಯ ಎದುರಾಳಿಗಳನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತವನ್ನು ಉಳಿಸಬೇಕಾದರೆ ನಾವು ಬಂಗಾಳವನ್ನು ಉಳಿಸಬೇಕು. ಎಲ್ಲರ ಆಶೀರ್ವಾದದೊಂದಿಗೆ ಬಂಗಾಳವನ್ನು ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದು ಸಂತೋಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಗಾಳದ ಚುನಾವಣೆ ನಮಗೆ ರಾಜಕೀಯ, ಅಧಿಕಾರದ ಹೋರಾಟವಲ್ಲ, ನಾಗರೀಕತೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಹೋರಾಟ. ಭಾರತವನ್ನು ಉಳಿಸಬೇಕಾದರೆ ನಾವು ಬಂಗಾಳವನ್ನು ಉಳಿಸಬೇಕು. ಎಲ್ಲರ ಆಶೀರ್ವಾದದೊಂದಿಗೆ ಬಂಗಾಳವನ್ನು ಬಿಜೆಪಿ ಗೆದ್ದೇ ಗೆಲ್ಲುತ್ತದೆ.
* ಶ್ರೀ ಬಿ. ಎಲ್. ಸಂತೋಷ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು pic.twitter.com/ulCkovz7yT
— BJP Karnataka (@BJP4Karnataka) December 30, 2025
