Saturday, December 6

ಶಾಸಕರ ಖರೀದಿಗೆ 50 ಕೋಟಿ ದುಡ್ಡಿದೆ, ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಸಲು ದುಡ್ಡಿಲ್ಲವೇ? ನಿಖಿಲ್ ಪ್ರಶ್ನೆ

ಶಿವಮೊಗ್ಗ : ಕಾಂಗ್ರೆಸ್ ಪಕ್ಷದೊಳಗೆ ಕುರ್ಚಿಗಾಗಿ ಗುದ್ದಾಟ ತೀವ್ರಗೊಂಡಿದ್ದು, ಶಾಸಕರ ಖರೀದಿ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಬೆಳವಣಿಗೆ ಬಗ್ಗೆ ಟೀಕಿಸಿರುವ ಪ್ರದೇಶ ಜೆಡಿಎಸ್ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರ ಖರೀದಿಗೆ ಹಣವಿದೆ ಆದರೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬೊಬ್ಬ ಶಾಸಕರ ಖರೀದಿಗೆ 50 ಕೋಟಿ ದುಡ್ಡಿದೆ, ತುಂಗಭದ್ರಾ ಡ್ಯಾಂ ಕ್ರಸ್ಟ್‌ ಗೇಟ್‌ ಅಳವಡಿಸಲು ದುಡ್ಡಿಲ್ಲವೇ ಜಲಸಂಪನ್ಮೂಲ ಸಚಿವರೇ ? ಎಂದು ನಿಖಿಲ್ ಅವರು ಪ್ರಶ್ನಿಸಿದ್ದಾರೆ.