Thursday, April 2

ಹಾರರ್-ಹಾಸ್ಯ ಚಿತ್ರ ‘ಭೂತ್ ಬಾಂಗ್ಲಾ’ ಏಪ್ರಿಲ್ 16ಕ್ಕೆ ರಿಲೀಸ್

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ ಹಾರರ್-ಹಾಸ್ಯ ಚಿತ್ರ ಭೂತ್ ಬಾಂಗ್ಲಾ ಬಿಡುಗಡೆ ದಿನಾಂಕವನ್ನು ನಿರ್ಮಾಪಕರು ಬದಲಾಯಿಸಿದ್ದು, ಇದೀಗ ಏಪ್ರಿಲ್ 16ರಂದು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ.

ಚಿತ್ರದ ಸಹ-ನಿರ್ಮಾಪಕಿ ಏಕ್ತಾ ಕಪೂರ್ ಸಾಮಾಜಿಕ ಜಾಲತಾಣದ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ರಣವೀರ್ ಸಿಂಗ್ ಅಭಿನಯದ ಧುರಂಧರ್: ದಿ ರಿವೆಂಜ್ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಮೊದಲು ಏಪ್ರಿಲ್ 10ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಇದೀಗ ಏಪ್ರಿಲ್ 16, 2026ರಂದು ರಾತ್ರಿ 9 ಗಂಟೆಯಿಂದ ಪ್ರದರ್ಶನ ಆರಂಭವಾಗಲಿದೆ.

ಈ ಚಿತ್ರದಲ್ಲಿ ವಾಮಿಕಾ ಗಬ್ಬಿ, ಪರೇಶ್ ರಾವಲ್, ಟಬು, ರಾಜ್‌ಪಾಲ್ ಯಾದವ್, ಜಿಶು ಸೇನ್‌ಗುಪ್ತಾ ಮತ್ತು ಮಿಥಿಲಾ ಪಾಲ್ಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಿತ್ರವು ಪ್ರಿಯದರ್ಶನ್ ನಿರ್ದೇಶನದಲ್ಲಿ ಮೂಡಿಬರುತ್ತಿದ್ದು, ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರ ಹಳೆಯ ಯಶಸ್ವಿ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.

ಬಾಲಾಜಿ ಮೋಷನ್ ಪಿಕ್ಚರ್ಸ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಸಹಯೋಗದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.