Friday, March 27

Author: info@rajasdigital.com

ಸಿಂಗಾಪುರದ ಶಾಲೆಯಲ್ಲಿ ಅಗ್ನಿ ಅವಘಡ; ನಟ ಪವನ್ ಕಲ್ಯಾಣ್ ಪುತ್ರ ಅಸ್ವಸ್ಥ

ಸಿಂಗಾಪುರದ ಶಾಲೆಯಲ್ಲಿ ಅಗ್ನಿ ಅವಘಡ; ನಟ ಪವನ್ ಕಲ್ಯಾಣ್ ಪುತ್ರ ಅಸ್ವಸ್ಥ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಸಿಂಗಾಪುರ: ಸಿಂಗಾಪುರ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಆ ಶಾಲೆಯಲ್ಲಿ ಕಲಿಯುತ್ತಿದ್ದ ಅನೇಕ ವಿದ್ಯಾರ್ತಿಗಳು ಗಾಯಗೊಂಡಿದ್ದಾರೆ. ಇವರಲ್ಲಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರ ಪುತ್ರ ಕೂಡಾ ಗಂಭೀರವಾಗಿ ಗಾಯಗೊಂಡಿರುವುದಾಗಿ ಮಾಧ್ಯಮಗಳು ವರದಿಮಾಡಿವೆ.ಪವನ್ ಕಲ್ಯಾಣ ಅವರ ಪುತ್ರ ಮಾರ್ಕ್ ಶಂಕರ್ ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು,ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಸಿಂಗಾಪುರದಲ್ಲಿನ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. Shocking visuals from Mark’s School 🥲Our prayers are with you, get well soon Mark @PawanKalyan pic.twitter.com/Ev61Ntonu6— ArunKumar (@arunganta) April 8, 2025...
ಬೆಲೆ ಏರಿಕೆ ವಿರುದ್ಧ ಜನಾಕ್ರೋಶದ ಭುಗಿಲು; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ

ಬೆಲೆ ಏರಿಕೆ ವಿರುದ್ಧ ಜನಾಕ್ರೋಶದ ಭುಗಿಲು; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಅನ್ಯಾಯ, ಹದಗೆಟ್ಟ ಕಾನೂನು ಸುವ್ಯವಸ್ಥೆ, ಸ್ವಜನಪಕ್ಷಪಾತ, ತುಷ್ಟೀಕರಣ ಮೊದಲಾದವುಗಳನ್ನು ವಿರೋಧಿಸಿ ಜನಾಕ್ರೋಶ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜನಾಕ್ರೋಶ ಪ್ರವಾಸ ಮಾಡಲಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಈ ಮಟ್ಟಕ್ಕೆ ಬೆಲೆ ಏರಿಕೆ ಮಾಡಿದ್ದಾರೆ. ಮದ್ಯದ ದರ, ಮೆಟ್ರೋ ದರ, ಕಾಲೇಜು ಪ್ರವೇಶ ಶುಲ್ಕ, ಬಿತ್ತನೆ ಬೀಜ ದರ, ಪೆಟ್ರೋಲ್‌-ಡೀಸೆಲ್‌ ದರ ಏರಿಕೆಯಾಗಿದೆ. ಈಗ ಕಸದಿಂದಲೂ ದುಡ್ಡು ಹೊಡೆಯಲಾಗುತ್ತಿದೆ. ಬೆಂಗಳೂರಿನ ಜನರು ಕಸಕ್ಕೂ ಶುಲ್ಕ ನೀಡಬೇಕಾಗಿದೆ. ಇದರಿಂದಲೇ ಒಂದೂವರೆ ಕೋಟಿ ರೂ. ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.ಕಾಂಗ್ರೆಸ್‌ ಜಾತ್ಯತೀತವಾದಿ ಎಂದು ಹೇಳಿಕೊಂಡು ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ. ಸರ್ಕಾರಿ ಗುತ್ತಿಗೆಯಲ್ಲಿ ಧರ್ಮಾಧಾರಿತವಾದ ಮೀಸಲು ಕೊಡುವ ಅಗತ್ಯವಿರಲಿಲ್ಲ. ಈಗಾಗಲೇ ಮಂಗಳೂರಿನಲ್ಲಿ ಹೆಚ್ಚಿನ ಗುತ್ತಿಗೆಯನ್ನು ಮುಸ್ಲಿಮರೇ...
ಬ್ರಿಟಿಷ್ ಸಂಸತ್ ಬಳಿ ಬಸವೇಶ್ವರರ 891ನೇ ಜಯಂತ್ಯುತ್ಸವ: ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂಗೆ ಆಹ್ವಾನ

ಬ್ರಿಟಿಷ್ ಸಂಸತ್ ಬಳಿ ಬಸವೇಶ್ವರರ 891ನೇ ಜಯಂತ್ಯುತ್ಸವ: ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಿಎಂಗೆ ಆಹ್ವಾನ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಲಂಡನ್: ಲಂಡನ್ ಥೇಮ್ಸ್ ನದಿ ತೀರದಲ್ಲಿರುವ ಲ್ಯಾಂಬೆತ್ ಬಸವೇಶ್ವರ ಪ್ರತಿಮೆ ಬಳಿ ಈ ಬಾರಿ ಬಸವೇಶ್ವರರ 891 ನೇ ಜಯಂತಿಯನ್ನು ವಿಶೇಷ ಕೈಂಕರ್ಯವಾಗಿ ಆಚರಿಸಲು ತಯಾರಿ ನಡೆದಿದೆ. ಏಪ್ರಿಲ್ 30ರಂದು ಬೆಳಿಗ್ಗೆ 11:30 ಕ್ಕೆ ಬ್ರಿಟಿಷ್ ಸಂಸತ್ ಬಳಿ ಭವ್ಯ ಸಮಾರಂಭ ನಡೆಯಲಿದ್ದು, ಈ ಸಮಾರಂಭಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗಿದೆ ಎಂದು ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷರೂ ಆದ ಲಂಡನ್ ಬರೋ ಆಫ್ ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ತಿಳಿಸಿದ್ದಾರೆ.ಏಪ್ರಿಲ್ 30ರಂದು ನಡೆಯುವ ಸಮಾರಂಭದಲ್ಲಿ ಯುಕೆಯ ಪ್ರಧಾನಿ ಸರ್ ಕಿಯರ್ ಸ್ಟಾರ್ಮರ್ ಸಂಪುಟದ ಸಚಿವರು ಹಾಗೂ ಲಂಡನಿನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಲಂಡನ್ನಿನ ಕಾರ್ಮಿಕ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆದ ಡಾ.ನೀರಜ್ ಪಾಟೀಲ್ ತಿಳಿಸಿದ್ದಾರೆ.ಈ ಸಮಾರಂಭದಲ್ಲಿ ಭಾಗವಹಿಸಲು ಕನ್ನಡಿಗರಾದ ಸಿಎಂ ಸಿದ್ದರಾಮಯ್ಯ ಅವರನ್ನೂ ಆಹ್ವಾನಿಸಲಾಗಿದ್ದು, ತಮ್ಮ ಪ್ರತಿಷ್ಠಾನದ ಪರವಾಗಿ ಆಹ್ವಾನ ಪತ್ರ ನೀಡಲಾಗಿದೆ ಎಂ...
ವಿನಯ್ ಸಾವಿನ ಹಿಂದಿನ ‘ಕೈ’ ಯಾವುದು? ಬಿಜೆಪಿಗೆ ಪ್ರತಿಭಟನೆ ಮೂಲಕವೇ ತಿರುಗೇಟು ನೀಡಲು ರಣತಂತ್ರ

ವಿನಯ್ ಸಾವಿನ ಹಿಂದಿನ ‘ಕೈ’ ಯಾವುದು? ಬಿಜೆಪಿಗೆ ಪ್ರತಿಭಟನೆ ಮೂಲಕವೇ ತಿರುಗೇಟು ನೀಡಲು ರಣತಂತ್ರ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಿನಯ್ ಸೋಮಯ್ಯ ಸಾವಿನ ಪ್ರಕರಣ ಕುರಿತಂತೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರಾದ ಧನಂಜಯ್ ಆರೋಪಿಸಿದ್ದಾರೆ. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ‌‌ ಎಂದು ದೂರಿದರು.ತನ್ನೇರಾ ಮೈನಾ ಅವರು ಮಡಿಕೇರಿ ಸರ್ಕಲ್ ಠಾಣೆಯಲ್ಲಿ ಮಾರ್ಚ್ 5 ರಂದು ಕೊಡಗಿನ ಸಮಸ್ಯೆಗಳು ಹಾಗೂ ಸೂಚನೆಗಳು ಎನ್ನುವ ವಾಟ್ಸಪ್ ಗುಂಪಿನಲ್ಲಿ ಬರುವ ಸಂದೇಶವನ್ನು ಗಮನಿಸಿದ ತನ್ನೇರಾ ಮೈನಾ ಅವರು ರಾಜೇಂದ್ರ, ವಿಷ್ಣು ನಾಚಪ್ಪ, ವಿನಯ್ ಸೋಮಯ್ಯ ಅವರ ವಿರುದ್ದ ದೂರು ಸಲ್ಲಿಸುತ್ತಾರೆ. ವಿನಯ್ ಸೋಮಯ್ಯ ಅವರ ಕೊನೆಯ ವಾಟ್ಸಪ್ ಸಂದೇಶದ ಕೊನೆಯ ಪ್ಯಾರದಲ್ಲಿ 'ನನ್ನ ವಿರುದ್ದ ಎಫ್ ಐಆರ್ ದಾಖಲಾದಾಗ ಬೆಂಬಲಕ್ಕೆ ನಿಂತ ಪ್ರತಾಪ್ ಸಿಂಹ, ಕೆಜೆ.ಬೋಪಯ್ಯ, ಅಪ್ಪಚ್ಚು ರಂಜನ್, ಎಂಪಿ ಚರಣ್, ವಕೀಲ ರಾಕೇಶ್ ದೇವಯ್ಯ, ನಿಶಾಂತ್,‌ಮೋಹನ್ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ ಎಂದು ಗಮನಸೆಳೆದರು.ವಿನಯ್ ಸೋಮಯ್ಯ ಅವರು ಎಲ್ಲಿಯೂ ಸಹ ನಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡ...
‘Antibiotic’: ಯುವಕರ ಪಾಲಿಗೆ ಔಷಧಿಯಾಗಿದ್ದರೂ ಅಪಾಯವೇ ಹೆಚ್ಚು..?

‘Antibiotic’: ಯುವಕರ ಪಾಲಿಗೆ ಔಷಧಿಯಾಗಿದ್ದರೂ ಅಪಾಯವೇ ಹೆಚ್ಚು..?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
ನವದೆಹಲಿ: ಸಂಭವನೀಯ ಅಪಾಯದ ಸರಿಯಾದ ಮೌಲ್ಯಮಾಪನವಿಲ್ಲದೆ ಯುವಜನರಿಗೆ ಹೆಚ್ಚಾಗಿ ಪ್ರತಿಜೀವಕಗಳನ್ನು ಶಿಫಾರಸು ಮಾಡಲಾಗುತ್ತಿದೆ. ಇದು ಪ್ರತಿರೋಧಕ್ಕೆ ಕಾರಣವಾಗಬಹುದು ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.ಲಂಡನಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ನೇತೃತ್ವದ ಅಧ್ಯಯನವು, ವೈದ್ಯರು ಸೋಂಕು ಹೊಂದಿರುವ ಹತ್ತಾರು ಸಾವಿರ ರೋಗಿಗಳಿಗೆ ಪ್ರತಿಜೀವಕಗಳನ್ನು ಶಿಫಾರಸು ಮಾಡುತ್ತಿದ್ದಾರೆ ಎಂದು ತೋರಿಸಿದೆ. ಮುನ್ನರಿವು ಮತ್ತು ಸೋಂಕು ಹದಗೆಡುವ ಅಪಾಯವನ್ನು ಕಡಿಮೆ ಅಥವಾ ಪರಿಗಣಿಸದೆ ಈ ರೀತಿ ಶಿಫಾರಸು ಮಾಡುವ ನಡೆ ಸರಿಯಲ್ಲ ಎಂದಿದೆ.15.7 ದಶಲಕ್ಷ ರೋಗಿಗಳ ದಾಖಲೆಗಳ ವಿಶ್ಲೇಷಣೆಯನ್ನು ಆಧರಿಸಿದ ಅಧ್ಯಯನವು, ಮಾದರಿಯಲ್ಲಿರುವ ಹೆಚ್ಚಿನ ವಯಸ್ಸಾದ ರೋಗಿಗಳು ಮೇಲ್ಭಾಗದ ಉಸಿರಾಟದ ಸೋಂಕುಗಳಿಗೆ ಪ್ರತಿಜೀವಕವನ್ನು ಪಡೆಯುವ ಕಿರಿಯ ರೋಗಿಗಳಿಗಿಂತ ಶೇಕಡಾ 31 ರಷ್ಟು ಕಡಿಮೆ ಎಂದು ಬಹಿರಂಗಪಡಿಸಿದೆ.ಇದರರ್ಥ "ಅನೇಕ ಕಿರಿಯ ಜನರಿಗೆ ಪ್ರತಿಜೀವಕಗಳನ್ನು ಶಿಫಾರಸು ಮಾಡಲಾಗುತ್ತಿದೆ, ಅವರು ಅವುಗಳಿಲ್ಲದೆ ಚೇತರಿಸಿಕೊಳ್ಳಲು ಸಾಕಷ್ಟು ಸದೃಢರಾಗಿದ್ದರೂ ಸಹ, ಇದು ಪ್ರತಿರೋಧಕ್ಕ...
ವಿರಳಾತಿ ವಿರಳ ಕಾಯಿಲೆ: ಇಂದಿರಾಗಾಂಧಿ ಮಕ್ಕಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 22 ಮಕ್ಕಳು

ವಿರಳಾತಿ ವಿರಳ ಕಾಯಿಲೆ: ಇಂದಿರಾಗಾಂಧಿ ಮಕ್ಕಳ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 22 ಮಕ್ಕಳು

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ನಮ್ಮ ದೇಶದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಅಪರೂಪದ ಕಾಯಿಲೆಗಳಿಗೆ ತುತ್ತಾದ ನೂರಾರು ಮಕ್ಕಳು ಇದ್ದಾರೆ. ಇವರಲ್ಲಿ ಕೆಲವರಿಗೆ ಚಿಕಿತ್ಸೆ ನೀಡಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಇಂಥ ಮಕ್ಕಳಿಗೆ ಸೂಕ್ತ ಹಾಗೂ ಸಮರ್ಪಕ ಹಾಗೂ ಪರಿಣಾಮಕಾರಿ ಚಿಕಿತ್ಸೆ ಕೊಡಿಸಲು ಕಾರ್ಪೊರೇಟ್‌ ಸಂಸ್ಥೆಗಳ ಜೊತೆಗೂಡಿ "ಯೋಜನೆ" ರೂಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಪರಿಣಾಮಕಾರಿ ಕ್ರಮಕ್ಕೆ ಮುಂದಾಗಿದ್ದಾರೆ.ಲೈಸೊಸಮಲ್‌ ಸ್ಟೋರೇಜ್‌ ಡಿಸ್‌ ಆರ್ಡರ್‌ ಎಂಬ ಅತ್ಯಂತ ಅಪರೂಪದ ಕಾಯಿಲೆಗೆ ಹಲವಾರು ಮಕ್ಕಳು ತುತ್ತಾಗಿದ್ದಾರೆ. ಈ ಪೈಕಿ ಕರ್ನಾಟಕದಲ್ಲಿ ಗೌಷೆ ರೋಗ ಎಂಪಿಎಸ್‌ (Gaucher), ಪಾಂಪೆ ಎಂಬ ಆನುವಂಶಿಕ ಕಾಯಿಲೆಯೂ ಈ ಗುಂಪಿಗೆ ಸೇರಿವೆ.ರಾಷ್ಟ್ರೀಯ ಅಪರೂಪ ಕಾಯಿಲೆ ನೀತಿಯಡಿ (ಎನ್‌ಪಿಆರ್‌ಡಿ) ಇಂಥ ರೋಗಕ್ಕೆ ತುತ್ತಾಗಿರುವ ಮಕ್ಕಳಿಗೆ ಚಿಕಿತ್ಸೆ ಒದಗಿಸಲು ಕೇಂದ್ರ ಸರ್ಕಾರ ಅನುದಾನ ಒದಗಿಸುತ್ತಿದೆ. 2016ರಿಂದ ಕರ್ನಾಟಕ...
ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

Focus, ಆಧ್ಯಾತ್ಮ, ದೇಗುಲ ದರ್ಶನ, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆ ದೇಗುಲ ಇಂದು ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಶ್ರೀ ರಾಮನವಮಿ ದಿನವಾದ ಇಂದು ಭವ್ಯ ದೇಗುಲದಲ್ಲಿರುವ ಬಾಲರಾಮನ ವಿಗ್ರಹಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿದ ಸನ್ನಿವೇಶ ಆಸ್ತಿಕ ಸಮೂಹದ ಗಮನಸೆಳೆಯಿತು.श्री राम नवमी के पावन पर्व पर प्रभु का सूर्यतिलक Surya Tilak of Prabhu on the pious occasion of Shri Ram Navami pic.twitter.com/UCaweKHT7h— Shri Ram Janmbhoomi Teerth Kshetra (@ShriRamTeerth) April 6, 2025ದೇಶಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸುತ್ತಿದ್ದ ಹೊತ್ತಿಗೆ ಅಯೋಧ್ಯೆಯಲ್ಲಿರುವ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಕೋಟ್ಯಂತರ ಜನರು ಈ ಅದ್ಭುತ ದೃಶ್ಯವನ್ನು ಸಾಕ್ಷೀಕರಿಸಿದರು.ಸೂರ್ಯ ರಶ್ಮಿ ವಿಗ್ರಹಕ್ಕೆ ಸ್ಪರ್ಶಿಸುತ್ತಿದ್ದಂತೆಯೇ ಬಾಲರಾಮನ ಹಣೆಯಲ್ಲಿ ತಿಲಕದ ದೃಶ್ಯ ಕಂಡುಬಂತು. ಅದಾಗಲೇ ಬಾಲರಾಮನಿಗೆ ವಿಶೇಷ ಆರತಿಯನ್ನು ನೆರವೇರಿಸಲಾಯಿತು.సూర్యవంశ రామ 🙇🏻🚩 శ్రీరామ నవమి శుభాకాంశలు #AyodhaRamMandir#RamaNavami pic.twitter.com/nOWjKpZ2J...
ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ; ಇದೀಗ ಕಾನೂನಿನ ಸ್ವರೂಪ

ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ; ಇದೀಗ ಕಾನೂನಿನ ಸ್ವರೂಪ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ನವದೆಹಲಿ: ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷೆಯ ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.ಕೇಂದ್ರ ಸರ್ಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನ ಉಭಯ ಸದನಗಳಲ್ಲೂ ಅಂಗೀಕರವಾಗಿತ್ತು. ಬಳಿಕ ರಾಷ್ಟ್ರಪತಿಗಳ ಅನುಮೋದನೆಗಾಗಿ ಕಳುಹಿಸಲಾಗಿತ್ತು. ಸಂಸತ್ತು ಅಂಗೀಕರಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದು, ಅವರ ಅಂಕಿತದೊಂದಿಗೆ 'ವಕ್ಫ್ ತಿದ್ದುಪಡಿ ಮಸೂದೆ-2025' ಇದೀಗ ಕಾನೂನಾಗಿ ಮಾರ್ಪಟ್ಟಿದೆ....
ಬಿಜೆಪಿ ನಾಯಕರಿಂದ ಮೃತದೇಹದ ಮೇಲೆ ರಾಜಕೀಯ; ಎ.ಎಸ್. ಪೊನ್ನಣ್ಣ ಆಕ್ರೋಶ

ಬಿಜೆಪಿ ನಾಯಕರಿಂದ ಮೃತದೇಹದ ಮೇಲೆ ರಾಜಕೀಯ; ಎ.ಎಸ್. ಪೊನ್ನಣ್ಣ ಆಕ್ರೋಶ

Focus, ಪ್ರಮುಖ ಸುದ್ದಿ, ರಾಜ್ಯ
ಮಡಿಕೇರಿ: ಬಿಜೆಪಿ ನಾಯಕರು ಮೃತದೇಹದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ರಾಜೀನಾಮೆಗೆ ಬಿಜೆಪಿ ನಾಯಕರು ಪಟ್ಟು ಹಿಡಿದಿರುವ ಬಗ್ಗೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿರುವ ಎ.ಎಸ್. ಪೊನ್ನಣ್ಣ, ಬಿಜೆಪಿ ನಾಯಕರು ಮೃತದೇಹದ ಮೇಲೆ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರು ಇಂದು ಮಾಡಿದ್ದು ಹಿಂದೂ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದಿದ್ದಾರೆ.ಸೂಕ್ತ ತನಿಖೆಯ ಮೂಲಕ ಸತ್ಯ ಹೊರಬರುತ್ತದೆ. ಆದರೆ, ಬಿಜೆಪಿಗೆ ತನಿಖೆ ಮಾಡುವುದು ಬೇಕಿಲ್ಲ. ಅವರು ಈ ವಿಷಯದಲ್ಲೂ ರಾಜಕೀಯ ಮಾಡುತ್ತಾರೆ ಎಂದು ವಿರಾಜಪೇಟೆ ಕಾಂಗ್ರೆಸ್ ಶಾಸಕರೂ ಆದ ಎ.ಎಸ್. ಪೊನ್ನಣ್ಣ ಪ್ರತಿಪಕ್ಷ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು....
ಇದು ಮಹಿಳೆಯರ ಸಮಸ್ಯೆ..! ‘ರುಮಟಾಯ್ಡ್ ಸಂಧಿವಾತ’ ಅಂದರೇನು ಗೊತ್ತಾ?

ಇದು ಮಹಿಳೆಯರ ಸಮಸ್ಯೆ..! ‘ರುಮಟಾಯ್ಡ್ ಸಂಧಿವಾತ’ ಅಂದರೇನು ಗೊತ್ತಾ?

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೈವಿಧ್ಯ
ನವದೆಹಲಿ: ರಕ್ತದಲ್ಲಿನ ಕೊಬ್ಬಿನ ಸಾಮಾನ್ಯ ವಿಧವಾದ ಟ್ರೈಗ್ಲಿಸರೈಡ್‌ಗಳು (Triglycerides) ಮಹಿಳೆಯರಲ್ಲಿ ರುಮಟಾಯ್ಡ್ ಸಂಧಿವಾತಕ್ಕೆ (rheumatoid arthritis) ಸಂಭಾವ್ಯ ಮಾರ್ಪಡಿಸಬಹುದಾದ ಅಪಾಯಕಾರಿ ಅಂಶವಾಗಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ.ರುಮಟಾಯ್ಡ್ ಸಂಧಿವಾತವು ಮಹಿಳೆಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ದೀರ್ಘಕಾಲದ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಇದು ಕೀಲುಗಳ ಉರಿಯೂತ, ನೋವು ಮತ್ತು ಊತದಿಂದ ನಿರೂಪಿಸಲ್ಪಟ್ಟಿದೆ, ಇದು ತೀವ್ರತರವಾದ ಪ್ರಕರಣಗಳಲ್ಲಿ ಕೀಲು ವಿರೂಪಗಳು ಮತ್ತು ಕ್ರಿಯಾತ್ಮಕ ಅಂಗವೈಕಲ್ಯಗಳಿಗೆ ಕಾರಣವಾಗಬಹುದು.ಲಿಪಿಡ್ ಚಯಾಪಚಯ ಕ್ರಿಯೆಯ ಪ್ರಮುಖ ಸೂಚಕಗಳಾದ ಟ್ರೈಗ್ಲಿಸರೈಡ್‌ಗಳು ಉರಿಯೂತ ಮತ್ತು ಚಯಾಪಚಯ ಅಸ್ವಸ್ಥತೆಗಳಿಗೆ ಸಂಬಂಧಿಸಿವೆ, ಎರಡೂ ರುಮಟಾಯ್ಡ್ ಸಂಧಿವಾತದ ರೋಗಕಾರಕತೆಗೆ ಕೊಡುಗೆ ನೀಡುತ್ತವೆ.ಆದಾಗ್ಯೂ, ಟ್ರೈಗ್ಲಿಸರೈಡ್ ಮಟ್ಟಗಳು ಮತ್ತು ಮಹಿಳೆಯರಲ್ಲಿ ರುಮಟಾಯ್ಡ್ ಸಂಧಿವಾತದ ಹರಡುವಿಕೆಯ ನಡುವಿನ ಸಂಬಂಧವು ಸ್ಪಷ್ಟವಾಗಿಲ್ಲ.ತನಿಖೆ ನಡೆಸಲು, ಚೀನಾದ ಸಿಚುವಾನ್‌ನಲ್ಲಿರುವ ಸುಯಿನಿಂಗ್ ಮುನ್ಸಿಪಲ್ ಹಾಸ್ಪಿಟಲ್ ಆಫ್ ಟ್ರೆಡಿಷನಲ್ ...