Friday, March 27

Author: info@rajasdigital.com

ಎಚ್ಚರ..! ಎಲ್ಲೆಲ್ಲೂ ನಕಲಿ ಕಲಬೆರಕೆ ಪನೀರ್ ಹಾವಳಿ.. ಕೇಂದ್ರ ಸಚಿವರಿಂದ ಮತ್ತೊಬ್ಬ ಮಂತ್ರಿಗೆ ಪತ್ರ..

ಎಚ್ಚರ..! ಎಲ್ಲೆಲ್ಲೂ ನಕಲಿ ಕಲಬೆರಕೆ ಪನೀರ್ ಹಾವಳಿ.. ಕೇಂದ್ರ ಸಚಿವರಿಂದ ಮತ್ತೊಬ್ಬ ಮಂತ್ರಿಗೆ ಪತ್ರ..

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ದೇಶಾದ್ಯಂತ ನಕಲಿ ನಕಲಿ ಮತ್ತು ಕಲಬೆರಕೆ ಪನೀರ್ ಹಾವಳಿ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಅರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಬರೆದಿರುವ ಪತ್ರ ಗಮನಸೆಳೆದಿದೆ.ದೇಶಾದ್ಯಂತ ಫಾಸ್ಟ್ ಫುಡ್ ಜಾಯಿಂಟ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಮಾರುಕಟ್ಟೆಗಳಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟದ ಪ್ರಕರಣಗಳು ಹೆಚ್ಚುತ್ತಿವೆ. ಈ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮತ್ತು ಸೇವಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ದೂರುಗಳನ್ನು ಹೆಚ್ಚಿಸಲು ಕಾರಣವಾಗಿವೆ ಎಂದು ಸಚಿವ ಪ್ರಲ್ಹಾದ್ ಜೋಶಿಯ ಆ ಪತ್ರದಲ್ಲಿ ಗಮನಸೆಳೆದಿದ್ದಾರೆ. ಈ ಸಂಬಂಧ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (NCH) ಪೋರ್ಟಲ್‌ನಲ್ಲಿ ಹಲವಾರು ದೂರುಗಳನ್ನು ದಾಖಲಿಸಿದ್ದಾರೆ. ಇದು ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ/ಬಳಕೆಯ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಅಂತಹ ನಕಲಿ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಸೇವನೆಯು ತೀವ್ರ ಮತ್ತು ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಪ್ರಲ್ಹಾದ್ ಜೋಶಿ...
ಸುಂಕ ಸಮರ: ಅಮರಿಕ ವಿರುದ್ಧ ತಿರುಗಿಬಿದ್ದ ಚೀನಾ, ಐರೋಪ್ಯ ರಾಷ್ಟ್ರಗಳಿಂದಲೂ ರಣತಂತ್ರ

ಸುಂಕ ಸಮರ: ಅಮರಿಕ ವಿರುದ್ಧ ತಿರುಗಿಬಿದ್ದ ಚೀನಾ, ಐರೋಪ್ಯ ರಾಷ್ಟ್ರಗಳಿಂದಲೂ ರಣತಂತ್ರ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತೆರಿಗೆ ಹೆಚ್ಚಳ ಕ್ರಮವು ಜಾಗತಿಕ ವ್ಯಾಪಾರ ಯುದ್ಧಕ್ಕೆ ನಾಂದಿ ಹಾಡಿದಂತಿದೆ. ವಿವಿಧ ರಾಷ್ಟ್ರಗಳ ಉತ್ಪನ್ನಗಳಿಗೆ ಭಾರೀ ಪ್ರಮಾಣದಲ್ಲಿ ಆಮದು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದ ವಿರುದ್ಧ ಅನೇಕ ರಾಷ್ಟ್ರಗಳು ಸಿಡಿದೆದ್ದಿವೆ. ಅದರಲ್ಲೂ ಚೀನಾ ಸುಂಕದಿಂದಲೇ ಎದಿರೇಟು ನೀಡಿದೆ.ಡೊನಾಲ್ಡ್ ಟ್ರಂಪ್ ಅವರಿಗೆ ಸಡ್ಡು ಹೊಡೆಡಿರುವ ಚೀನಾ ದೇಶ ಅಮೆರಿಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.34ಕ್ಕೆ ಏರಿಕೆ ಮಾಡಿದೆ. ಚೀನಾ ದೇಶದ ಈ ಘೋಷಣೆ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆ ಸಂಕಷ್ಟದಲ್ಲಿ ಸಿಲುಕಿದೆ. ಜಗತ್ತಿನಾದ್ಯಂತ ಷೇರುಮಾರುಕಟ್ಟೆಗಳು ತೀವ್ರವಾಗಿ ಕುಸಿಯ ತೊಡಗಿದೆ.ಯೂರೋಪಿಯನ್ ಒಕ್ಕೂಟದ ಹಲವು ರಾಷ್ಟ್ರಗಳು ಕೂಡಾ ಟ್ರಾಂಪ್ ವಿರುದ್ಧ ತಿರುಗಿಬೀಳಲು ಮುಂದಾಗಿವೆ ಎನ್ನಲಾಗುತ್ತಿದೆ....
ರಜನಿಕಾಂತ್ ‘ಕೂಲಿ’ ಚಿತ್ರ ಆಗಸ್ಟ್ 14 ರಂದು ವಿಶ್ವದಾದ್ಯಂತ ಬಿಡುಗಡೆ

ರಜನಿಕಾಂತ್ ‘ಕೂಲಿ’ ಚಿತ್ರ ಆಗಸ್ಟ್ 14 ರಂದು ವಿಶ್ವದಾದ್ಯಂತ ಬಿಡುಗಡೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಚೆನ್ನೈ: ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸೂಪರ್ ಸ್ಟಾರ್ ರಜನಿಕಾಂತ್ ನಾಯಕನಾಗಿ ನಟಿಸಿರುವ 'ಕೂಲಿ' ಚಿತ್ರವು ಈ ವರ್ಷ ಆಗಸ್ಟ್ 14 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಶುಕ್ರವಾರ ಘೋಷಿಸಿದ್ದಾರೆ.ಚಿತ್ರವನ್ನು ನಿರ್ಮಿಸುವ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್ 'X' ನಲ್ಲಿ ಈ ಬಗ್ಗೆ ಘೋಷಣೆ ಮಾಡಿದೆ. "ಆಹ್ ಯೆತ್ತು! ದೇವ ವರಾರರು #ಆಗಸ್ಟ್ 14 ರಿಂದ ವಿಶ್ವಾದ್ಯಂತ ಕೂಲಿ" ಎಂದು ಬರೆಯಲಾಗಿದೆ.ಕಳೆದ ತಿಂಗಳು ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್‌ನ ಚಿತ್ರೀಕರಣವನ್ನು ಮುಗಿಸಿದ ನಿರ್ದೇಶಕ ಲೋಕೇಶ್ ಕನಕರಾಜ್, ಚಿತ್ರೀಕರಣ ಪೂರ್ಣಗೊಂಡ ನಂತರ, ಈ ಚಿತ್ರವನ್ನು ಮಾಡುವ ಅದ್ಭುತ ಅನುಭವವನ್ನು ಶಾಶ್ವತವಾಗಿ ಪಾಲಿಸುವುದಾಗಿ ಹೇಳಿದ್ದಾಗಿ ನೆನಪಿಸಿಕೊಳ್ಳಬಹುದು.ಆಕ್ಷನ್ ಥ್ರಿಲ್ಲರ್ ಆಗುವ ನಿರೀಕ್ಷೆಯಿರುವ 'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ತೆಲುಗು ಸ್ಟಾರ್ ನಾಗಾರ್ಜುನ, ಕನ್ನಡ ಸ್ಟಾರ್ ಉಪೇಂದ್ರ, ಮಲಯಾಳಂ ಸ್ಟಾರ್ ಸೌಬಿನ್ ಶಾಹಿರ್ ಮತ್ತು ತಮಿಳು ಸ್ಟಾರ್ ಸತ್ಯರಾಜ್ ಸೇರಿದಂತೆ ಹಲವಾರು ಉನ್ನತ ತಾರೆಯರು ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್ ...
ಸಿನಿಲೋಕದಲ್ಲಿ ಕುತೂಹಲ ಹೆಚ್ಚಿಸಿದ ‘ಗುಡ್ ಬ್ಯಾಡ್ ಅಗ್ಲಿ’ ಟ್ರೈಲರ್

ಸಿನಿಲೋಕದಲ್ಲಿ ಕುತೂಹಲ ಹೆಚ್ಚಿಸಿದ ‘ಗುಡ್ ಬ್ಯಾಡ್ ಅಗ್ಲಿ’ ಟ್ರೈಲರ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಚೆನ್ನೈ: ಸಿನಿಲೋಕದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಅಧಿಕ್ ರವಿಚಂದ್ರನ್ ನಿರ್ದೇಶನದ ನಟ ಅಜಿತ್ ಕುಮಾರ್ ನಾಯಕನಾಗಿ ನಟಿಸಿರುವ ಆಕ್ಷನ್ ಎಂಟರ್‌ಟೈನರ್ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದ ನಿರ್ಮಾಪಕರು ಶುಕ್ರವಾರ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದಾರೆ.https://www.youtube.com/watch?v=c9zWcnNR2q0ನಿರ್ದೇಶಕ ಅಧಿಕ್ ರವಿಚಂದ್ರನ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಟ್ರೇಲರ್‌ನ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.ಚಿತ್ರದಲ್ಲಿ ಹೆಪ್ ಖಳನಾಯಕನ ಪಾತ್ರದಲ್ಲಿರುವ ನಟ ಅರ್ಜುನ್ ದಾಸ್, ‘ನಾತುಪುರ ಪಾಟು’ ಚಿತ್ರದ ಜನಪ್ರಿಯ ತಮಿಳು ಜಾನಪದ ಗೀತೆ ‘ಓಥಾ ರೂಬಾ ಥರೇನ್’ ಹಾಡಿನ ಹಾಡಿಗೆ ವಿದೇಶಿ ಮಾಡೆಲ್‌ಗಳೊಂದಿಗೆ ನೃತ್ಯ ಮಾಡುವುದರೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ.ಈ ಟ್ರೇಲರ್ ಅಜಿತ್ ಮತ್ತು ಅರ್ಜುನ್ ದಾಸ್ ಇಬ್ಬರೂ ಒಳಗೊಂಡ ಕೆಲವು ಸ್ಫೋಟಕ ಸಾಹಸ ಸನ್ನಿವೇಶಗಳನ್ನು ತೋರಿಸುತ್ತದೆ. ಒಂದು ಹಂತದಲ್ಲಿ ಅಜಿತ್ ಕುಮಾರ್, "ನಿನ್ನ ಮೂಗು ಮತ್ತು ಕಣ್ಣುಗಳು ಇರುತ್ತವೆ. ನಿನಗೆ ನಿನ್ನ ಕೈ ಮತ್ತು ಕಾಲುಗಳು ಇರುತ...
ಪಂಚಮಸಾಲಿಗಳಿಗೆ ಆರಂಭಿಕ ಜಯ: ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಬಗ್ಗೆ ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

ಪಂಚಮಸಾಲಿಗಳಿಗೆ ಆರಂಭಿಕ ಜಯ: ಮೀಸಲಾತಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್ ಬಗ್ಗೆ ನ್ಯಾಯಾಂಗ ತನಿಖೆಗೆ ಹೈಕೋರ್ಟ್ ಆದೇಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಧಾರವಾಡ: ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಡಿಸೆಂಬರ್ 10 ರಂದು ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಘಟನೆ ಕುರಿತಂತೆ ನ್ಯಾಯಾಂಗ ತನಿಖೆಗೆ ಧಾರವಾಡ ಹೈಕೋರ್ಟ್ ಪೀಠ ಆದೇಶಿಸಿದೆ.ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಲಾಠಿ ಪ್ರಹಾರ ನಡೆದಿತ್ತು. ಲಾಠಿ ಚಾರ್ಜ್ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದರು. ಈ ಪೊಲೀಸ್ ದೌರ್ಜನ್ಯ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​​ ಶುಕ್ರವಾರ ತೀರ್ಪು ಪ್ರಕಟಿಸಿದೆ.ಲಾಠಿ ಚಾರ್ಜ್ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ....
ಅರ್ಚಕರ ಕಲ್ಯಾಣಕ್ಕೆ ಬಿಜೆಪಿ ಅಡ್ಡಗಾಲು? ಅಂಕಿತ ಹಾಕದ ರಾಜ್ಯಪಾಲರ ಬಗ್ಗೆ ಬೇಸರ; ರಾಜಭವನ ಚಲೋಗೆ ಅರ್ಚಕ ಸಮೂಹ ನಿರ್ಧಾರ

ಅರ್ಚಕರ ಕಲ್ಯಾಣಕ್ಕೆ ಬಿಜೆಪಿ ಅಡ್ಡಗಾಲು? ಅಂಕಿತ ಹಾಕದ ರಾಜ್ಯಪಾಲರ ಬಗ್ಗೆ ಬೇಸರ; ರಾಜಭವನ ಚಲೋಗೆ ಅರ್ಚಕ ಸಮೂಹ ನಿರ್ಧಾರ

Focus, ಆಧ್ಯಾತ್ಮ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಅರ್ಚಕರ ಕಲ್ಯಾಣಕ್ಕೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಅರ್ಚಕರ ಸಮೂಹ, ಧಾರ್ಮಿಕ 'ಹಿಂದೂ ಧಾರ್ಮಿಕ ದತ್ತಿ ತಿದ್ದುಪಡಿ ವಿಧೇಯಕ'ಕ್ಕೆ ಅಂಕಿತ ಹಾಕದ ರಾಜ್ಯಪಾಲರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದೆ. ಈ ಸಂಬಂಧ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ರಾಜಭವನ ಚಲೋಗೆ ನಿರ್ಧರಿಸಿದೆ.ಧರ್ಮದ ವಿಷಯದಲ್ಲಿ ರಾಜಕೀಯ ಮಾಡಬಾರದು. ಆದರೆ ಬಿ.ಜೆ.ಪಿ ನಾಯಕರು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಾ ಬಂದಿದ್ದರೂ ಸಹ, ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ಹಾಗೂ ಅರ್ಚಕರ ಕಲ್ಯಾಣ ಅಭಿವೃದ್ಧಿ ಮಾಡದೇ, ಕಾಂಗ್ರೆಸ್ ಸರ್ಕಾರ ಮಾಡಲು ಯೋಜಿಸಿರುವ ಕಾಯಿದೆಯನ್ನು ಸಹಿಸದೆ ರಾಜ್ಯಪಾಲರಿಗೆ ಒತ್ತಡ ಹೇರಿ ಸಹಿ‌ ಹಾಕಿಸದೆ ಬಿಜೆಪಿಯು ಅರ್ಚಕ ಸಮೂಹಕ್ಕೆ ದ್ರೋಹ ಬಗೆಯುತ್ತಿದೆ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಪ್ರಮುಖರು ಆರೋಪಿಸಿದ್ದಾರೆ.ಈ ಕುರಿತಂತೆ ಮಾಧ್ಯಮ‌ ಪ್ರಕಟಣೆ ಹೊರಡಿಸಿರುವ ಅರ್ಚಕರ ಸಮೂಹ, ಕಾಂಗ್ರೆಸ್ ಸರ್ಕಾರವು ಅರ್ಚಕರ ಕಲ್ಯಾಣಕ್ಕ...
ವಕ್ಫ್ ತಿದ್ದುಪಡಿ ಮಸೂದೆ: ತಮ್ಮ ಹೋರಾಟ ಬೆಂಬಲಿಸಿದವರಿಗೆ ಧನ್ಯವಾದ ಸಮರ್ಪಿಸಿದ ಯತ್ನಾಳ್

ವಕ್ಫ್ ತಿದ್ದುಪಡಿ ಮಸೂದೆ: ತಮ್ಮ ಹೋರಾಟ ಬೆಂಬಲಿಸಿದವರಿಗೆ ಧನ್ಯವಾದ ಸಮರ್ಪಿಸಿದ ಯತ್ನಾಳ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಕ್ಫ್ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕರವಾಗಿರುವ ಬಗ್ಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಅವರ ಪ್ರತಿಕ್ರಿಯೆ ಗಮನಸೆಳೆದಿದ್ದಾರೆ. ಅತ್ತ, ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದರೆ, ಇತ್ತ, ವಕ್ಫ್ ವಿರುದ್ದದ ಹೋರಾಟ ಬೆಂಬಲಿಸಿದವರಿಗೆ ಯತ್ನಾಳ್ ಧನ್ಯವಾದ ಸಮರ್ಪಿಸಿದ್ದಾರೆ.ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಅಂಗೀಕಾರಗೊಂಡಿರುವ ವಕ್ಫ್ ತಿದ್ದುಪಡಿ ಮಸೂದೆಯು ವಕ್ಫ್ ಬೋರ್ಡ್ ನ ನಿರಂಕುಶ ನಡೆಗಳಿಗೆ ಕಡಿವಾಣ ಹಾಕಲಿದೆ. ವಕ್ಫ್ ಕಾಯ್ದೆಯ ತಿದ್ದುಪಡಿಗೆ ಗೆ ಜಂಟಿ ಸಂಸತ್ ಸಮಿತಿ ರಚಿಸಿ ತಿದ್ದುಪಡಿಗೆ ಸೂಚಿಸಿದ ಕೇಂದ್ರ ಸರ್ಕಾರಕ್ಕೂ, ಜೆ.ಪಿ.ಸಿ ಅಧ್ಯಕ್ಷರಿಗೂ, ಸದಸ್ಯರಿಗೂ ಸೇರಿದಂತೆ ತಿದ್ದುಪಡಿಗೆ ಕಾರಣೀಭೂತರಾದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು ಎಂದು ಶಾಸಕ ಬಸನಗೌಡ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.ತಿದ್ದುಪಡಿಯಿಂದ ರೈತರಿಗೆ, ಮಠಗಳಿಗೆ, ದೇವಸ್ಥಾನಗಳಿಗೆ, ಸರ್ಕಾರಿ ಭೂಮಿ ಹಾಗೂ ಜನ ಸಾಮಾನ್ಯರ ಭೂಮಿಯನ್ನು ವಕ್ಫ್ ಎಂದು ಘೋಷಿಸಲು ಸಾಧ್ಯವಿಲ್ಲ ಹಾಗೂ ಜಿಲ್ಲಾಡಳಿತ ಮತ್ತು ನ್ಯಾಯಾಲಯಗಳಷ್ಟೇ ಇದನ್ನು ತೀರ್ಮಾನಿಸಬಹುದು. ನಮ್ಮ ಸಾಮ...
ಕಂಬನಿ: ‘ಭರತ್ ಕುಮಾರ್’ ಎಂದೇ ಹೆಸರುವಾಸಿಯಾಗಿದ್ದ ನಟ ಮನೋಜ್ ಕುಮಾರ್

ಕಂಬನಿ: ‘ಭರತ್ ಕುಮಾರ್’ ಎಂದೇ ಹೆಸರುವಾಸಿಯಾಗಿದ್ದ ನಟ ಮನೋಜ್ ಕುಮಾರ್

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ, ಸಿನಿಮಾ
ಮುಂಬೈ: ಬಾಲಿವುಡ್ ನಟ, ನಿರ್ದೇಶಕ ಮನೋಜ್ ಕುಮಾರ್ ವಿಧಿವಶರಾಗಿದ್ದಾರೆ. ‘ಭರತ್ ಕುಮಾರ್’ ಎಂದೇ ಹೆಸರುವಾಸಿಯಾದ ನಟ ಮನೋಜ್ ಕುಮಾರ್ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಶುಕ್ರವಾರ ವಿಧಿವಶರಾಗಿದ್ದಾರೆ. ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಮನೋಜ್ ಕುಮಾರ್ ಅವರಿಗೆ 87 ವರ್ಷ ವಯಸ್ಸಾಗಿತ್ತು. ॐ शांति मनोज कुमार जी 🪔#Manojkumar pic.twitter.com/VM4OcpppNd— Raja Babu (@GaurangBhardwa1) April 4, 2025 60 ರ ದಶಕದಲ್ಲಿ ಭಕ್ತಿಪ್ರಧಾನ ಸಿನಿಮಾಗಳನ್ನು ಮಾಡಿರುವ ಮನೋಜ್ ಕುಮಾರ್ 'ಶಹೀದ್', 'ಉಪ್ಕಾರ್' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಪ್ರಶಸ್ತಿಗಳನ್ನು ಪಡೆದಿದ್ದಾರೆ. 1992 ರಲ್ಲಿ ಪದ್ಮಶ್ರೀ ಮತ್ತು 2015 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಪಡೆದಿದ್ದಾರೆ....
ಧಾರ್ಮಿಕ ಆಚರಣೆಗಳಿಗೆ ವಕ್ಫ್ ತಿದ್ದುಪಡಿ ಮಸೂದೆ ಅಡ್ಡಿಯಾಗದು: ದೇವೇಗೌಡ

ಧಾರ್ಮಿಕ ಆಚರಣೆಗಳಿಗೆ ವಕ್ಫ್ ತಿದ್ದುಪಡಿ ಮಸೂದೆ ಅಡ್ಡಿಯಾಗದು: ದೇವೇಗೌಡ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸ್ವಾಗತಿಸಿದ್ದಾರೆ. ಈ ಮಸೂದೆಯಿಂದ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.ರಾಜ್ಯಸಭೆಯಲ್ಲಿ ನೂತನ ವಕ್ಫ್ ಮಸೂದೆಯನ್ನು ಬೆಂಬಲಿಸಿ ಮಾತನಾಡಿದ ದೇವೇಗೌಡರು, ಈ ಕಾಯ್ದೆ ಮುಸ್ಲಿಂ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುವುದಿಲ್ಲ ಎಂದರು.ವಕ್ಫ್ ಆಸ್ತಿಗಳ ಆಡಳಿತವನ್ನು ನಿಯಂತ್ರಿಸುವ ಗುರಿಯನ್ನು ಈ ಕಾಯ್ದೆ ಹೊಂದಿದೆ. ದೇಶದ ಸುಮಾರು 9.4 ಲಕ್ಷ ಎಕರೆಗಳಷ್ಟು ವಿಸ್ತಾರವಾಗಿರುವ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತದೆ. 1.2 ಲಕ್ಷ ಕೋಟಿ ರೂ. ಮೌಲ್ಯದ ಈ ಆಸ್ತಿಗಳನ್ನು ಸ್ವತ್ತು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಮಸೂದೆಯಿಂದಾಗಿ ವಕ್ಫ್ ಆಸ್ತಿಗಳು ಶ್ರೀಮಂತರಿಂದ ಬಡ ಮುಸ್ಲಿಮರನ್ನು ರಕ್ಷಿಸುತ್ತದೆ ಎಂದು ದೇವೇಗೌಡರು ಪ್ರತಿಪಾದಿಸಿದ್ದಾರೆ....
ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸಿದ್ದರಾಮಯ್ಯ ಮನವಿ

ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸಿದ್ದರಾಮಯ್ಯ ಮನವಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ನವದೆಹಲಿ: ಕೇಂದ್ರ ಸರ್ಕಾರದ ಅನುಮತಿಗಾಗಿ ಬಾಕಿಯಿರುವ ಕರ್ನಾಟಕದ ಮೇಕೆದಾಟು ಯೋಜನೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಈ ಸಂಬಂಧ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್.ಪಾಟೀಲ್‌ ಅವರಿಗೆ ಸಿಎಂ ಬೇಡಿಕೆ ಪತ್ರ ಸಲ್ಲಿಸಿದ್ದಾರೆ. ದೇಶದಲ್ಲೇ ರಾಜಸ್ಥಾನವನ್ನು ಹೊರತುಪಡಿಸಿದರೆ ಕರ್ನಾಟಕ ಅತಿ ಹೆಚ್ಚು ಒಣ ಭೂಮಿ ಹೊಂದಿರುವ ರಾಜ್ಯವಾಗಿದೆ. ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಹಾಗೂ ಅನುಷ್ಠಾನಗೊಳಿಸಲಾಗಿರುವ ನೀರಾವರಿ ಯೋಜನೆಗಳು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿವೆ. ಉತ್ಪಾದನೆಯಲ್ಲಿನ ಹೆಚ್ಚಳ, ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದ ನೀರಿನ ನಿರ್ವಹಣೆಯಲ್ಲಿ ಸುಧಾರಣೆ, ಹವಾಮಾನ ವೈಪರೀತ್ಯದ ನಿರ್ವಹಣೆ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ಕೃಷಿ ಉತ್ಪಾದನೆ ಹೆಚ್ಚಳ, ರೈತರ ಆದಾಯ ಹೆಚ್ಚಳ ಮಾಡಲು ಪೂರಕವಾಗಿ ನಿರಂತರ ಮತ್ತು ಸಮರ್ಪಕ ನೀರಾವರಿ ಪೂರೈಕೆಗೆ ಬದ್ಧವಾಗಿದೆ ಎಂದವರು ಮನವಿ ಪಾತ್ರದಲ್ಲಿ ತಿಳಿಸಿದ್ದಾರೆ....