Saturday, March 28

Author: info@rajasdigital.com

ಶಾಸಕರ ಅಮಾನತು ಆದೇಶದ ಪ್ರತಿಧ್ವನಿ: ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಖಾದರ್ ಗಿಮ್ಮಿಕ್? ಏನಿದು ಬಿಜೆಪಿ ಆಕ್ರೋಶ

ಶಾಸಕರ ಅಮಾನತು ಆದೇಶದ ಪ್ರತಿಧ್ವನಿ: ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಖಾದರ್ ಗಿಮ್ಮಿಕ್? ಏನಿದು ಬಿಜೆಪಿ ಆಕ್ರೋಶ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯದೇ ಹೋದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರಿಗೆ ನೀಡಿದ ಮೀಸಲಾತಿಯನ್ನು ವಿರೋಧಿಸಿ ಹಾಗೂ ಹನಿಟ್ರ್ಯಾಪ್ ಪ್ರಕರಣ ಖಂಡಿಸಿ 18 ಶಾಸಕರು ಪ್ರತಿಭಟನೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಸಿಬಿಐ, ಎಸ್ಐಟಿ ಅಥವಾ ಯಾವುದೇ ತನಿಖೆ ಮಾಡುವುದಾಗಿ ಹೇಳಿದ್ದರೆ ಅಥವಾ ಸ್ಪಷ್ಟತೆ ನೀಡಿದ್ದರೆ ಪ್ರತಿಭಟನೆ ಕೈ ಬಿಡಬಹುದಿತ್ತು. ಅಮಾನತು ಸಮಯದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸೌಜನ್ಯಕ್ಕೂ ಶಾಸಕರನ್ನು ಕರೆದು ಮಾತಾಡಿಲ್ಲ ಎಂದು ದೂರಿದರು.ಸ್ಪೀಕರ್ ಕಾಂಗ್ರೆಸ್ ಸರ್ಕಾರದ ಪರವಾಗಿ ನಿಂತಿದ್ದಾರೆ. ಈಗ ಸಚಿವ ಸಂಪುಟ ಪುನರ್ ರಚನೆಯಾಗಲು ಸಿದ್ಧತೆ ನಡೆದಿದೆ. ಇಂತಹ ಸಮಯದಲ್ಲಿ ವಿರೋಧ ಪಕ್ಷದ ಸದಸ್ಯರ ವಿರುದ್ಧ ಕ್ರಮ ಕೈಗೊಂಡರೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಸ್ಪೀಕರ್ ಯು.ಟಿ.ಖಾದರ್ ಅವರಿಗಿದೆ. ಸಭಾಧ್ಯಕ್ಷರ ಪೀಠ ಬಹಳ ಪವಿತ್ರವಾದುದು. ಸ್ಪೀಕರ್ ಯಾರು ಯಾರನ್ನೋ ಕರೆದುಕೊಂಡು ಬಂದು ಫೋಟೋ ತೆಗೆಸಿಕೊಳ್ಳುತ್...
ಬೆಲೆ ಏರಿಕೆ ಮೂಲಕ ಲೂಟಿ? ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

ಬೆಲೆ ಏರಿಕೆ ಮೂಲಕ ಲೂಟಿ? ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕಾಂಗ್ರೆಸ್ ಚುನಾವಣೆಗೆ ಮುನ್ನ ಬೆಲೆ ಏರಿಕೆ ಮಾಡಲ್ಲ, ಐದು ಗ್ಯಾರಂಟಿ ಕೊಡುತ್ತೇವೆ ಎಂದಿತ್ತು. ಆದರೆ ಎರಡು ವರ್ಷಗಳಲ್ಲಿ ಹಾಲಿನ ದರ ಮೂರು ಬಾರಿ ಏರಿಕೆ ಮಾಡಲಾಗಿದೆ. ಸರ್ಕಾರದಲ್ಲಿ 136 ಜನ ಕಳ್ಳರು ಇದ್ದಾರೆ. ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ. ಅದಕ್ಕಾಗಿ ಬೆಲೆ ಏರಿಕೆ ಮೂಲಕ ಲೂಟಿ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಹೋರಾತ್ರಿ ಧರಣಿಯಲ್ಲಿ ಭಾಗಿಯಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಜೆಟ್ ನಲ್ಲಿ ಯಾವುದೇ ತೆರಿಗೆ ತೋರಿಸದೆ ಇದೀಗ ಬೆಲೆ ಏರಿಕೆ ಮಾಡಲಾಗ್ತಿದೆ. ಐದು ಗ್ಯಾರಂಟಿಗಾಗಿ ಕರ್ನಾಟಕದ ಮನೆ ಮನೆ ಲೂಟಿ ಆಗ್ತಿದೆ ಎಂದು ಆರೋಪಿಸಿದರು. ಸಚಿವರು ಅಂಗಡಿ ತೆರೆದಿದ್ದಾರೆ. 40% ಆರೋಪಕ್ಕೆ ಸಾಕ್ಷಿ ಇಲ್ಲ. ಆದರೆ ಕಾಂಗ್ರೆಸ್ ಸರ್ಕಾರ 60% ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್ ನಲ್ಲಿ 15,000 ಹಗರಣ ನಡೆದಿದೆ. ಸಿದ್ದರಾಮಯ್ಯ ಹೆಸರಿಗಷ್ಟೇ ಸಿಎಂ. ಸರ್ಕಾರದ ಗಾಲಿ ಕುರ್ಚಿಯಲ್ಲಿದೆ ಎಂದು ಕಿಡಿಕಾರಿದರು.ಕಾಂಗ್ರೆಸ್ ಪಕ್ಷ ತನ್ನ ಓಲೈಕೆ ರಾಜಕಾರಣಕ್ಕಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿ...
ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ; ಅಶೋಕ್

ಮತ್ತೊಮ್ಮೆ ಬಸ್ ಟಿಕೆಟ್ ದರ ಏರಿಕೆ ಮಾಡುವುದರಲ್ಲಿ ಅನುಮಾನವೇ ಇಲ್ಲ; ಅಶೋಕ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಶ್ಲೇಷಿಸಿದ್ದಾರೆ. ಕನ್ನಡಿಗರಿಗೆ ಈ ವರ್ಷ ಮಾರಿಹಬ್ಬ ಕಾದಿದೆ ಎಂದು ಬಜೆಟ್ ಅಧಿವೇಶನದಲ್ಲಿ ನಾನು ನೀಡಿದ್ದ ಎಚ್ಚರಿಕೆ ಈಗ ಅಕ್ಷರಶಃ ನಿಜವಾಗುತ್ತಿದೆ.ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ @siddaramaiah ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ,… pic.twitter.com/1h1zFHr8HL— R. Ashoka (@RAshokaBJP) April 1, 2025ಬಜೆಟ್ ನಲ್ಲಿ ಯಾವುದೇ ತೆರಿಗೆ ಹೆಚ್ಚಳವನ್ನ, ಬೆಲೆ ಏರಿಕೆಯನ್ನ ಘೋಷಣೆ ಮಾಡದೆ ಕನ್ನಡಿಗರ ಕಿವಿಗೆ ಹೂವಿಟ್ಟ ಸಿಎಂ ಸಿದ್ದರಾಮಯ್ಯ ಅವರು ಈಗ ದಿನಕ್ಕೊಂದು ವಸ್ತುಗಳ ಮೇಲೆ ತೆರಿಗೆ ಹಾಕಿ, ಬೆಲೆ ಹೆಚ್ಚಿಸಿ, ಬಡವರು, ಮಾಧ್ಯಮ ವರ್ಗದ ರಕ್ತ ಹೀರಲು ಹೊರಟಿದ್ದಾರೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರ...
ಜನರನ್ನು ಬೆಲೆ ಏರಿಕೆಯ ಶೂಲಕ್ಕೆ ಸಿಲುಕಿಸಿದ ಕಾಂಗ್ರೆಸ್ ಸರ್ಕಾರ..? ಸಿ.ಟಿ.ರವಿ ಲೇವಡಿ

ಜನರನ್ನು ಬೆಲೆ ಏರಿಕೆಯ ಶೂಲಕ್ಕೆ ಸಿಲುಕಿಸಿದ ಕಾಂಗ್ರೆಸ್ ಸರ್ಕಾರ..? ಸಿ.ಟಿ.ರವಿ ಲೇವಡಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಿದ್ಯುತ್, ಹಾಲು ಬೆಲೆ ಹೆಚ್ಚಳ, ವಿವಿಧ ತೆರಿಗೆ ಹೊರೆಯ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರಇದೀಗ ಡೀಸೆಲ್​ ದರ ಹೆಚ್ಚಳ ಮಾಡಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯ ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಶಾಸಕ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆಗೆ "ಹೊಸ ತಡಕುವಿನ" ಉಡುಗೊರೆ ಎಂದು ರವಿ ಟೀಕಿಸಿದ್ದಾರೆ. ಬೆಲೆ ಏರಿಕೆಯ ಶೂಲಕ್ಕೆ ಜನರನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಿಲುಕಿಸಿದೆ ಎಂದವರು ಆಕ್ರೋಶವನ್ನೂ ಹೊರಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ "ಹೊಸ ತಡಕುವಿನ" ಉಡುಗೊರೆ. ಪ್ರತಿ ಲೀಟರ್ ಡೀಸಿಲ್ ಬೆಲೆ ಎರಡು ರೂಪಾಯಿ ಏರಿಕೆ. ಬೆಲೆ ಏರಿಕೆಯ ಶೂಲಕ್ಕೆ ಜನರನ್ನು ಸಿಲುಕಿಸಿದ ಕರ್ನಾಟಕ ಕಾಂಗ್ರೆಸ್ ಸರ್ಕಾರ. pic.twitter.com/HIogQiPNfA— C T Ravi 🇮🇳 ಸಿ ಟಿ ರವಿ (@CTRavi_BJP) April 1, 2025...
ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ

ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಬಿರು ಬಿಸಿಲ ಬೇಗೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಹವಾಮಾನ ಇಲಾಖೆ ಹೀಗೊಂದು ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಗುರುವಾರದಿಂದ ಮಳೆಯಾಗುವ ಸಾಧ್ಯತೆ ಇದೆ.ಹಾವೇರಿ, ಗದಗ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಇದ್ದು, 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೇ ವೇಳೆ, ಏಪ್ರಿಲ್ 3 ರಿಂದ ಏಪ್ರಿಲ್ 5ರವರೆಗೆ ಉಷ್ಣಾಂಶ ಇಳಿಮುಖವಾಗುವ ಸಾಧ್ಯತೆ ಎಂದು ವಿಶ್ಲೇಷಿಸಲಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲೂ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ....
ಬೆಲೆ ಏರಿಕೆಯ ಪರ್ವ? ಇದೀಗ ಡೀಸೆಲ್​ ದರ ಹೆಚ್ಚಳ..!

ಬೆಲೆ ಏರಿಕೆಯ ಪರ್ವ? ಇದೀಗ ಡೀಸೆಲ್​ ದರ ಹೆಚ್ಚಳ..!

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಿದ್ಯುತ್, ಹಾಲು ಬೆಲೆ ಹೆಚ್ಚಳ, ವಿವಿಧ ತೆರಿಗೆ ಹೊರೆಯ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಡೀಸೆಲ್​ ದರ ಹೆಚ್ಚಳ ಮಾಡಿದೆ. ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ತಕ್ಷಣದಿಂದಲೇ ತೆರಿಗೆ ಜಾರಿಗೆ ಬರಲಿದ್ದು ಈ ಹಿಂದೆ ಶೇ 18.44 ರಷ್ಟು ಇದ್ದ ತೆರಿಗೆ, ಇದೀಗ ಶೇ 21.17ಕ್ಕೆ ಏರಿಕೆಯಾಗಿದೆ. ಡೀಸೆಲ್ ಬೆಲೆ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಾಗಲಿದ್ದು, ಬೆಲೆ ಏರಿಕೆಯಿಂದ ಡೀಸೆಲ್ ಬೆಲೆ ಸುಮೇರು 90 ರೂಪಾಯಿ ತಲುಪಲಿದೆ ಎನ್ನಲಾಗುತ್ತಿದೆ....
ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಯಡಿಯೂರಪ್ಪ

ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಯಡಿಯೂರಪ್ಪ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ರಾಜ್ಯ ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಯಡಿಯೂರಪ್ಪ, ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಬೆಲೆ ಒಂದು ವರ್ಷದ ಅವಧಿಯಲ್ಲಿ 9 ರೂಪಾಯಿ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.ರಾಜ್ಯ ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಬೆಲೆ ಒಂದು ವರ್ಷದ ಅವಧಿಯಲ್ಲಿ 9 ರೂಪಾಯಿ ಹೆಚ್ಚಾಗಿದೆ.ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ… pic.twitter.com/2oHzWHliEp — BJP Karnataka (@BJP4Karnataka) April 1, 2025...
ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
 ಬೆಂಗಳೂರು: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ. ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಅಂಗಾಂಗ ದಾನ ಯೋಜನೆಗೆ ಹೊಸ ರೂಪ ನೀಡಲು ಕ್ರಮ ಕೈಗೊಂಡಿದೆ. ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮಹತ್ವದ ಯೋಜನೆಗೆ ಇಲಾಖೆ ಮುಂದಾಗಿದೆ.ವೈದ್ಯಕೀಯ ಶಿಕ್ಷಣ ಇಲಾಖೆಯು ತನ್ನ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ನವೀಕರಿಸಲು ಮತ್ತು ಅಂಗಾಂಗ ಮರು ಪಡೆಯುವ ಕೇಂದ್ರ ಸ್ಥಾಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಸಂಬಂಧ ಆದೇಶ ಕೂಡ ಹೊರಡಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ 125ನೇ ವರ್ಷಾಚರಣೆ ಸಂದರ್ಭದಲ್ಲಿಯೇ ಈ ಮಹತ್ವದ ಕೇಂದ್ರ ಆರಂಭವಾಗುತ್ತಿರುವುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಈ ಅಂಗಾಂಗ ಮರು ಪಡೆಯುವಿಕೆ ಕೇಂದ್ರವು ಕಾರ್ಯಾರಂಭ ಮಾಡಲಿದೆ ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್* ಪತ್ರಿಕಾ ಪ್ರಕಟಣೆಯಲ್ಲಿ ಸೋಮವಾರ ಮಾಹಿತಿ ನೀಡಿದ್ದಾರೆ."ಕಸಿ ಮಾಡಲು ಅಂಗಾಂಗಗಳ ಖರೀದಿಯನ್ನು ಸುಗಮಗೊಳಿಸುವ ಮೂಲಕ ಅಂಗಾಂಗ ಮರುಪಡೆಯುವಿಕೆ ...
ಶಾಸಕ ರಾಜಣ್ಣ ಹತ್ಯೆ ಸಂಚು; ಸ್ಫೋಟಕ ಆಡಿಯೋ ಬಹಿರಂಗ

ಶಾಸಕ ರಾಜಣ್ಣ ಹತ್ಯೆ ಸಂಚು; ಸ್ಫೋಟಕ ಆಡಿಯೋ ಬಹಿರಂಗ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್‌ ಸಂಚಿನ ಪ್ರಕರಣದ ಜೊತೆಯಲ್ಲೇ ವೇಳೆ ಶಾಸಕ ರಾಜೇಂದ್ರ ಹತ್ಯೆ ಸಂಚಿನ ಆರೋಪವೂ ತಲ್ಲಣ ಸೃಷ್ಟಿಸಿದೆ.ತಮ್ಮ ಹತ್ಯೆಗೆ ಸಂಚು ನಡೆದಿದೆ ಎಂದು ಸಹಕಾರ ಸಚಿವ ಕೆಎನ್​ ರಾಜಣ್ಣ ಪುತ್ರ, ಎಂಎಲ್​ಸಿ ರಾಜೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್​ಐಆರ್​ ಕೂಡ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿರುವಂತೆಯೇ, ಹತ್ಯೆ ಸಂಚಿನದ್ದೆನ್ನಲಾದ ಆಡಿಯೋ ತುಣುಕೊಂದು ವೈರಲ್ ಆಗಿದೆ.ಕೊಲೆ ಸಂಚಿಗೆ ಸಂಬಂಧಿಸಿದ ಆಡಿಯೋವನ್ನೂ ಪೊಲೀಸರಿಗೆ ನೀಡಿದ್ದಾಗಿ ರಾಜೇಂದ್ರ ಹೇಳಿದ್ದರು. ಆ ಆಡಿಯೋದ್ದೆನ್ನಲಾದ ತುಣುಕೊಂದು ಬಹಿರಂಗವಾಗಿದೆ. ಮಹಿಳೆಯು ಆ ಆಡಿಯೋದಲ್ಲಿ ಅನೇಕ ರಹಸ್ಯಗಳನ್ನು ಆಡಿಯೋದಲ್ಲಿ ಹೇಳಿಕೊಂಡಂತಿದೆ. ಆದರೆ, ಹತ್ಯೆ ಸಂಚಿನ ಹಿಂದಿನ ಮಹಾನಾಯಕ ಯಾರು ಎಂಬ ಸುಳಿವು ವ್ಯಕ್ತವಾಗಿಲ್ಲ....
BJD ಶಾಸಕನಿಗೆ 1.4 ಕೋಟಿ ರೂ ವಂಚನೆ; ಕರ್ನಾಟಕದ ವ್ಯಕ್ತಿ ಸೇರಿ 7 ಸೈಬರ್ ಖದೀಮರ ಸೆರೆ

BJD ಶಾಸಕನಿಗೆ 1.4 ಕೋಟಿ ರೂ ವಂಚನೆ; ಕರ್ನಾಟಕದ ವ್ಯಕ್ತಿ ಸೇರಿ 7 ಸೈಬರ್ ಖದೀಮರ ಸೆರೆ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
 ಭುವನೇಶ್ವರ: ಐಪಿಒಗಳು ಮತ್ತು ಒಟಿಸಿ ವಹಿವಾಟಿನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಆದಾಯ ನೀಡುವ ನೆಪದಲ್ಲಿ ಬಿಜು ಜನತಾದಳ (ಬಿಜೆಡಿ) ಹಿರಿಯ ಶಾಸಕ ಮತ್ತು ಮಾಜಿ ಸಚಿವರಿಗೆ 1.4 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ಒಡಿಶಾ ಪೊಲೀಸರು ಏಳು ಮಂದಿ ಅಂತರರಾಜ್ಯ ಸೈಬರ್ ವಂಚಕರನ್ನು ಬಂಧಿಸಿದ್ದಾರೆ.ಮಾರ್ಚ್ 25 ರಿಂದ ಮಾರ್ಚ್ 28 ರವರೆಗೆ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಅಪರಾಧ ವಿಭಾಗದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಂಚಕರನ್ನು ಬಂಧಿಸಲಾಗಿದೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.ಆರೋಪಿಗಳನ್ನು ಕರ್ನಾಟಕದ ಜ್ಯೋತಿ ರಾಜು (39), ರಾಜು ಸಿ (34), ಇಸ್ಮಾಯಿಲ್ ರಹೈದ್ (27), ವಾಸಿಮ್ (28) ಮತ್ತು ತಮಿಳುನಾಡಿನ ಪಟ್ಟರಾಜ ಎಸ್ (34), ಜೆಗತೀಶ್ ರಾಧಾಕೃಷ್ಣನ್ (40), ಇ ಶಕ್ತಿಕುಮಾರವೇಲ್ (50) ಎಂದು ಗುರುತಿಸಲಾಗಿದೆ.ಸೈಬರ್ ವಂಚಕರ ಬಲೆಗೆ ಬಿದ್ದ ಬಿಜೆಡಿ ಶಾಸಕರು ಜನವರಿ 13, 2025 ರಂದು ಅಪರಾಧ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಹಿರಿಯ ಬಿಜೆಡಿ ನಾಯಕ ಕೆಲವು ತಿಂಗಳ ಹಿಂದೆ ಸಾಮಾಜಿಕ...