Monday, March 30

Author: info@rajasdigital.com

ಹಬ್ಬಗಳ ಸಂದರ್ಭ KSRTCಯಿಂದ 2000 ಹೆಚ್ಚುವರಿ ಬಸ್ಸುಗಳು..

ಹಬ್ಬಗಳ ಸಂದರ್ಭ KSRTCಯಿಂದ 2000 ಹೆಚ್ಚುವರಿ ಬಸ್ಸುಗಳು..

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಯುಗಾದಿ, ರಂಜಾನ್ ಸಹಿತ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಊರಿಗೆ ತೆರಳಲು ಬಸ್ಸುಗಳಲ್ಲಿ ಸೀಟು ಸಿಗದೇ ಜನ ಪರದಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) 2000 ಹೆಚ್ಚುವರಿ ಬಸ್ಸುಗಳನ್ನು ರಸ್ತೆಗಿಸಿದೆ.31.03.2025ರಂದು ರಂಜಾನ್ ಹಬ್ಬವಿರುವುದರಿಂದ KSRTC ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 28.03.2025 to 30.03.2025ವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ 2000 ಹೆಚ್ಚುವರಿ ವಾಹನಗಳ ವಿಶೇಷ ವ್ಯವಸ್ಥೆ ಮಾಡಿದೆ. ಈ ಬಗ್ಗೆ ನಿಗಮದ ಪ್ರಕಟಣೆ ತಿಳಿಸಿದೆ.ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ 31.03.2025ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುವುದು. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿ, ವಿಜಯವಾಡ, ಹೈದರಾಬಾ...
ಫ್ರಾನ್ಸ್ ನಲ್ಲಿ ಏರ್ ಶೋ ವೇಳೆ ಭೀಕರ ದುರಂತ: ಬಾನಂಗಳದಲ್ಲಿ ವಿಮಾನಗಳ ಡಿಕ್ಕಿ

ಫ್ರಾನ್ಸ್ ನಲ್ಲಿ ಏರ್ ಶೋ ವೇಳೆ ಭೀಕರ ದುರಂತ: ಬಾನಂಗಳದಲ್ಲಿ ವಿಮಾನಗಳ ಡಿಕ್ಕಿ

Focus, ದೇಶ-ವಿದೇಶ, ಪ್ರಮುಖ ಸುದ್ದಿ, ವೀಡಿಯೊ
ಪ್ಯಾರಿಸ್: ಫ್ರಾನ್ಸ್ ನಲ್ಲಿ ಏರ್ ಶೋ ವೇಳೆ ಭೀಕರ ವಿಮಾನ ದುರಂತ ಸಂಭವಿಸಿದೆ. ಏರ್ ಶೋ ವೇಳೆ ಮಂಗಳವಾರ ಎರಡು ವಿಮಾನಗಳು ಢಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.🇫🇷 Two Jets collided at an airshow in France today.Another plane crashed this week at an Air Show in South Africa.Too many coincidences involving planes now. pic.twitter.com/xlJgtadlCj — Concerned Citizen (@BGatesIsaPyscho) March 25, 2025ಫ್ರಾನ್ಸ್‌ನ ಈಶಾನ್ಯ ವಾಯುನೆಲೆಯಲ್ಲಿ ಫ್ರೆಂಚ್ ವಾಯುಪಡೆಯ ಎರಡು ವಿಮಾನಗಳು ಬಾನಂಗಳದಲ್ಲಿ ಢಿಕ್ಕಿ ಹೊಡೆದಿವೆ. ಆಲ್ಫಾ ಜೆಟ್ ವಿಮಾನಗಳು ಡಿಕ್ಕಿ ಹೊಡೆಡಿದ್ದು, ಬೆಂಕಿ ಕಾಣಿಸಿಕೊಂಡಿತು. ಈ ದುರ್ಘಟನೆಯಲ್ಲಿ ಗಾಯಗೊಂಡಿರುವ ಮೂವರು ಪೈಲೆಟ್'ಗಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಮಂಗಳೂರಿನ ‘ಅನಿರ್ವೇದ’ ಪ್ರತಿಷ್ಠಾನದಿಂದ ಮಕ್ಕಳಿಗಾಗಿ ʻನೆರವಿನ ಶನಿವಾರʼ ಉಪಕ್ರಮಕ್ಕೆ ಚಾಲನೆ

ಮಂಗಳೂರಿನ ‘ಅನಿರ್ವೇದ’ ಪ್ರತಿಷ್ಠಾನದಿಂದ ಮಕ್ಕಳಿಗಾಗಿ ʻನೆರವಿನ ಶನಿವಾರʼ ಉಪಕ್ರಮಕ್ಕೆ ಚಾಲನೆ

Focus, ಪ್ರಮುಖ ಸುದ್ದಿ, ರಾಜ್ಯ, ವೈವಿಧ್ಯ
ಮಂಗಳೂರು: ಬಂದರು ನಗರ ಮಂಗಳೂರಿನಲ್ಲಿ ಮಾನಸಿಕ ಯೋಗಕ್ಷೇಮ ಸಂಪನ್ಮೂಲ ಕೇಂದ್ರ ಹಾಗೂ ಸರ್ಕಾರೇತರ ಸಂಸ್ಥೆ ಎನಿಸಿರುವ ʻಅನಿರ್ವೇದʼವು ನಗರದ ವಿಶೇಷ ಅಗತ್ಯತೆಯ ಮಕ್ಕಳಿಗಾಗಿ ಉಚಿತ ಮತ್ತು ಅಂತರ್ಗತ ʻನೆರವಿನ ಶನಿವಾರʼ ಎಂಬ ಉಪಕ್ರಮವನ್ನು ಪ್ರಾರಂಭಿಸಿದೆ.ಇಫ್ತಿಕಾರ್‌ ಆಲಿ, ಅಧ್ಯಕ್ಷರು, ಕರ್ನಾಟಕದ ಅಲೈಡ್‌ ಮತ್ತು ಹೆಲ್ತ್‌ ಕೇರ್‌ ಕೌನ್ಸಿಲ್‌, ಇವರು ಮಂಗಳವಾರ ಸಂಜೆ ನಗರದಲ್ಲಿ ಅನಿರ್ವೇದದ ವಿಶೇಷ ಅಗತ್ಯತೆಯ ಮಕ್ಕಳ ಕೆಂದ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಉಪಕ್ರಮಕ್ಕೆ ಚಾಲನೆ ನೀಡಿದರು.ಪ್ರತಿಷ್ಠಾನದ ನಿರ್ದೇಶಕರಾದ ಡಾ. ಕೆ.ಟಿ ಶ್ವೇತಾ ಅವರು ಈ ಕುರಿತು ಮಾಹಿತಿ ನೀಡಿ, ʻನೆರವಿನ ಶನಿವಾರʼ ಉಪಕ್ರಮವು 2025ರ ಮಾರ್ಚ್‌ 29ರಿಂದ ಪ್ರತಿ ಶನಿವಾರದಂದು ಮೋರ್ಗನ್ಸ್‌ ಗೇಟ್‌ ನಲ್ಲಿರುವ ಅನಿರ್ವೇದ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ತಿಳಿಸಿದರು. ʻನೆರವಿನ ಶನಿವಾರʼ ಉಪಕ್ರಮವು ಆಟಿಸಂ ಸ್ಪೆಕ್ಟ್ರಮ್‌ ಡಿಸಾರ್ಡರ್‌ (ಎ.ಎಸ್‌.ಡಿ), ಎ.ಡಿ.ಎಚ್‌.ಡಿ, ಕಲಿಕಾ ನ್ಯೂನತೆಗಳು, ಬೌದ್ಧಿಕ ವೈಕಲ್ಯತೆಗಳು ಮತ್ತು ಬೆಳವಣಿಗೆಗೆ ಸಂಬಂಧಿಸಿದ ಇತರ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಸು...
ಹೆಚ್ಚಳವಾದ ಹಾಲಿನ ದರ ರೈತರಿಗೆ ಪಾವತಿಯಾಗಬೇಕು: ಸಿಎಂ

ಹೆಚ್ಚಳವಾದ ಹಾಲಿನ ದರ ರೈತರಿಗೆ ಪಾವತಿಯಾಗಬೇಕು: ಸಿಎಂ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತದ ಅಧ್ಯಕ್ಷರು ಮತ್ತು ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಒಕ್ಕೂಟದ ಬೇಡಿಕೆಗಳನ್ನು ಆಲಿಸಿ, ಹಾಲಿನ ಬೆಲೆಯೇರಿಕೆಯ ಸಂಬಂಧ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ದರ ಏರಿಕೆ ಮಾಡಬೇಕು ಎಂಬ ಒತ್ತಾಯವಿದೆ ಆದರೆ ದರ ಹೆಚ್ಚಳ ಮಾಡಿದರೆ ಮೊತ್ತವು ಸಂಪೂರ್ಣವಾಗಿ ರೈತರಿಗೆ ಮಾತ್ರವೇ ವರ್ಗಾವಣೆಯಾಗಬೇಕು ಎಂಬುದು ಸರ್ಕಾರದ ದೃಢ ನಿಲುವು ಎಂದವರು ತಿಳಿಸಿದ್ದಾರೆ.ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು. ಪಾರದರ್ಶಕತೆಯನ್ನು ಪಾಲಿಸಬೇಕು. ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು. ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ ಎಂದವರು ಹೇಳಿದ್ದಾರೆ.ಮುಂದಿನ ಮೂರು ತಿಂಗಳಲ್ಲಿ ಆಡಳಿತಾತ್ಮಕ ವೆಚ್ಚವನ್ನು 2.5% ಕಡ್ಡಾಯವಾಗಿ ...
990 ಕ್ಲಸ್ಟರ್ ಗಳಲ್ಲಿ ಪ್ರಾಯೋಗಿಕ ನೈಸರ್ಗಿಕ ಕೃಷಿ: ಸಚಿವ ಎನ್.ಚಲುವರಾಯಸ್ವಾಮಿ.

990 ಕ್ಲಸ್ಟರ್ ಗಳಲ್ಲಿ ಪ್ರಾಯೋಗಿಕ ನೈಸರ್ಗಿಕ ಕೃಷಿ: ಸಚಿವ ಎನ್.ಚಲುವರಾಯಸ್ವಾಮಿ.

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಷ್ಟ್ರೀಯ ನೈಸರ್ಗಿಕ ಕೃಷಿ ಯೋಜನೆಯಡಿ ಈ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳ ಒಟ್ಟಾರೆ 990 ಕ್ಲಸ್ಟರ್ ಗಳಲ್ಲಿ ಪ್ರಾಯೋಗಿಕ ನೈಸರ್ಗಿಕ ಕೃಷಿ ಪ್ರಾತ್ಯಕ್ಷಿಕೆ ನಡೆಸಲಾಗುವುದು ಎಂದು ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಡಾ. ಸುಭಾಷ್ ಪಾಲ್ಕರ್ ನೈಸರ್ಗಿಕ ಕೃಷಿ ಮಾದರಿಯ ಸಾಧಕ ಬಾಧಕಗಳ ಕುರಿತು ಸಹಜ ಕೃಷಿ ಜಾಗೃತಿ, ಸಂಘಟನೆಯಲ್ಲಿ ತೊಡಗಿರುವ ರೈತ ಪ್ರಮುಖರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಅವರು ಮಾತನಾಡಿದರು. ನೈಸರ್ಗಿಕ ಕೃಷಿ ದೃಡೀಕರಣದ ವ್ಯವಸ್ಥೆ ಕೂಡ ಜಾರಿ ಮಾಡಲಾಗುವುದು ರೈತರ ಉತ್ಪನ್ನಗಳ ಮೌಲ್ಯವರ್ಧನೆಗೆ ಅಗತ್ಯವಿರುವ ಎಲ್ಲಾ ಪೂರಕ ನೆರವುಗಳನ್ನು ಒದಗಿಸಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಚಲುವರಾಯಸ್ವಾಮಿ ಹೇಳಿದರು.ರೈತರ ಅಭ್ಯುದಯ ಹಾಗೂ ಪ್ರಕೃತಿಗೆ ವರವಾಗುವ ನೈಸರ್ಗಿಕ ಕೃಷಿಯನ್ನು ಪ್ರೇರೇಪಿಸಲು ಕೃಷಿ ಇಲಾಖೆಯಿಂದ ಪೂರಕ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.ಕೃಷಿಕರ ಏಳಿಗೆಗೆ ಅನುಕೂಲವಾಗುವ ಎಲ್ಲಾ ಪ್ರಯತ್ನಗಳಿಗೆ ನಮ್...
ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದ ಸಭಾಪತಿ ಹೊರಟ್ಟಿ

ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದ ಸಭಾಪತಿ ಹೊರಟ್ಟಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಹುಬ್ಬಳ್ಳಿ: ರಾಜೀನಾಮೆ ನಿರ್ಧಾರದಿಂದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಿಂದಕ್ಕೆ ಸರಿದಿದ್ದಾರೆ.ಪ್ರಸ್ತುತ ದಿನಗಳಲ್ಲಿ ಸದನದಲ್ಲಿ ಸಂಭಾಳಿಸಲು ಸಾಧ್ಯವಿಲ್ಲ ಎಂದು ಕೆಲವು ದಿನಗಳ ಹಿಂದೆ ಅಸಮಾಧಾನ ಹೊರಹಾಕಿದ್ದ​ ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆಯ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಹೊರಟ್ಟಿ ತಿಳಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದರು.ತಮ್ಮ ರಾಜೀನಾಮೆ ಸುದ್ದಿ ಹರಿದಾಡಿದ ಬಳಿಕ ರಾಜ್ಯಪಾಲರು, ಸಚಿವರು ಹಾಗೂ ಸಾಹಿತಿಗಳು ಮಾತನಾಡಿದ್ದಾರೆ. ಮಾರ್ಚ್ 27ರಂದು ಕುಳಿತು ಮಾತನಾಡೋಣ ಎಂದಿದ್ದರು ಹಾಗಾಗಿ ರಾಜೀನಾಮೆ ನಿರ್ಧಾರವನ್ನು ಕೈ ಬಿಟ್ಟಿದ್ದೇನೆ ಎಂದು ಹೊರಟ್ಟಿ ತಿಳಿಸಿದರು....
ಡಾ.ಅಂಬೇಡ್ಕರ್‌ರ ಸಂವಿಧಾನವನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿಎನ್‌ಎ: ಸಿ.ಟಿ.ರವಿ

ಡಾ.ಅಂಬೇಡ್ಕರ್‌ರ ಸಂವಿಧಾನವನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿಎನ್‌ಎ: ಸಿ.ಟಿ.ರವಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಬಾಬಾಸಾಹೇಬ್ ಡಾ.ಅಂಬೇಡ್ಕರ್ ಮತ್ತು ದೇಶದ ಸಂವಿಧಾನವನ್ನು ವಿರೋಧಿಸುವುದು ಕಾಂಗ್ರೆಸ್ಸಿನ ಡಿ.ಎನ್.ಎ ಎಂದು ಮಾಜಿ ಸಚಿವ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಟೀಕಿಸಿದ್ದಾರೆ.ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ  ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ಸಿನ ಡಿ.ಎನ್.ಎಯು ಸಂವಿಧಾನ ವಿರೋಧಿ ಮಾನಸಿಕತೆ ಹೊಂದಿದೆ. 370ನೇ ವಿಧಿಯನ್ನು ಡಾ. ಅಂಬೇಡ್ಕರರು ವಿರೋಧಿಸಿದ್ದರು. ನೆಹರೂ ಇದೇ ವಿಧಿಯನ್ನು ಜಾರಿಗೊಳಿಸಿದರು. ಸಂವಿಧಾನದಲ್ಲಿ ಡಾ. ಅಂಬೇಡ್ಕರರು ಸೇರಿಸಿದ್ದ ಸಮಾನ ನಾಗರಿಕ ಸಂಹಿತೆಯನ್ನು ಇವತ್ತಿನವರೆಗೂ ಅವರು ಅದನ್ನು ಅನುಷ್ಠಾನಕ್ಕೆ ತಂದಿಲ್ಲ; ಬಿಜೆಪಿ ಅದನ್ನು ಅನುಷ್ಠಾನಕ್ಕೆ ತರುವುದಾಗಿ ಮುಂದಾದರೆ ವಿರೋಧಿಸುತ್ತಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ಸಿನ ಡಿಎನ್‍ಎ ಮುಂದುವರೆದ ಭಾಗವಾಗಿ ಡಿ.ಕೆ.ಶಿವಕುಮಾರರು ಟಿ.ವಿ. ಸಂದರ್ಶನದಲ್ಲಿ ಸಂವಿಧಾನ ಬದಲಿಸುವ ಮಾತನಾಡಿದ್ದಾರೆ ಎಂದು ತಿಳಿಸಿದರು.ಕಾಂಗ್ರೆಸ್ಸನ್ನು ಕಿತ್ತೊಗೆದು ನಾವು ಸಂವಿಧಾನ ಉಳಿಸಿಕೊಳ್ಳುತ್ತೇವೆ ಎಂದು ಅವರು ಸವಾಲು ಹಾಕಿದರು. ಮತೀಯ ಆಧಾರಿತ ಶೇ 4 ಮೀಸಲ...
ಯೆನೆಪೋಯ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂದೀಪ್ ಶೆಟ್ಟಿಗೆ PhD

ಯೆನೆಪೋಯ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂದೀಪ್ ಶೆಟ್ಟಿಗೆ PhD

Focus, ಪ್ರಮುಖ ಸುದ್ದಿ, ರಾಜ್ಯ
ಮಂಗಳೂರು: ಯೆನೆಪೋಯ ದಂತ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂದೀಪ್ ಶೆಟ್ಟಿ ಅವರ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಲಭಿಸಿದೆ.ಡಾ.ಸಂದೀಪ್ ಶೆಟ್ಟಿ ಅವರು ಮಂಗಳೂರಿನ ಯೆನೆಪೋಯ ದಂತ ಮಹಾ ವಿದ್ಯಾಲಯದ ವಕ್ರದಂಥ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಅವರು ಮಂಡಿಸಿದ 'ಡೆವಲಪ್ಮೆಂಟ್ ಆಫ್ ಸೇವ್, ನಾವೆಲ್ ಅಪ್ಪಲಿಯೇನ್ಸ ಅಂಡ್ ಇಟ್ಸ್ ಫೈನೈಟ್ ಎಲಿಮೆಂಟ್ ಎವಲ್ಯೂಯೇಷನ್ ಫಾರ್ ಕರೆಕ್ಟಿನ್ಗ್ ಡೆಫಿಷಿಯೆಂಟ್ ಮ್ಯಾಕ್ಸಿಲ್ಲ" ಎಂಬ ಪ್ರಭಂದಕ್ಕೆ ಯೆನೆಪೋಯ ಪರಿಗಣಿತ ವಿಶ್ವ ವಿದ್ಯಾಲಯವು ಪಿ.ಎಚ್.ಡಿ ನೀಡಿ ಪುರಸ್ಕರಿಸಿದೆ. ಯೆನೆಪೋಯ ದಂತ ವಿದ್ಯಾಲಯದ ಪ್ರಾದ್ಯಾಪಕರಾದ ಡಾ. ಬಿ.ಟಿ ನಂದೀಶ್ ರವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧವನ್ನು ಮಂಡಿಸಲಾಗಿದೆ....
ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ದೃಷ್ಟಿ ದೋಷ..!

ಡಿಜಿಟಲ್ ಸಾಧನಗಳ ಅತಿಯಾದ ಬಳಕೆಯಿಂದ ದೃಷ್ಟಿ ದೋಷ..!

Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
ನವದೆಹಲಿ: ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಮತ್ತು ಅದರ ಪರಿಣಾಮವಾಗಿ ಹೆಚ್ಚಿದ ಸ್ಕ್ರೀನ್ ಸಮಯವು ಗಮನಾರ್ಹ ಸಂಖ್ಯೆಯ ಜನರನ್ನು, ವಿಶೇಷವಾಗಿ ಯುವಕರನ್ನು ಸಮೀಪದೃಷ್ಟಿ ದೋಷ ಅಥವಾ ಸಮೀಪದೃಷ್ಟಿಯತ್ತ ಕೊಂಡೊಯ್ಯುತ್ತಿದೆ. ಈ ಕುರಿತಂತೆ ಸಂಶೋಧಕರು ತಮ್ಮ ಅಧ್ಯಯನ ವರದಿಯನ್ನು ಅನಾವರಣ ಮಾಡಿದ್ದಾರೆ.ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ, ಸಾಂಪ್ರದಾಯಿಕ ಶಾಲೆಗಳು ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳ ಮೂಲಕ ಆನ್‌ಲೈನ್ ಕಲಿಕೆಗೆ ಬದಲಾದಾಗ, ಮತ್ತು ಹೊರಾಂಗಣ ಚಟುವಟಿಕೆಗಳನ್ನು ಬಹುತೇಕ ತೆಗೆದುಹಾಕಿದಾಗ, ಪ್ರಪಂಚದಾದ್ಯಂತ ಸ್ಫೋಟಕ ಸಮೀಪದೃಷ್ಟಿ ಬಿಕ್ಕಟ್ಟಿನತ್ತ ಸಾಗುತ್ತಿರುವ ಬಗ್ಗೆ ಆರೋಗ್ಯ ತಜ್ಞರು ಬಹಳ ಹಿಂದಿನಿಂದಲೂ ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಅಧ್ಯನಗಳು ಅಂತಹಾ ಆತಂಕವನ್ನು ದೃಢಪಡಿಸಿವೆ.ಇಂಗ್ಲಿಷ್ ಆವೃತ್ತಿಯಲ್ಲೂ ಓದಿ.."Increased screen time to drive near-sightedness in children, adults"'ಡಿಜಿಟಲ್ ಕಣ್ಣಿನ ಒತ್ತಡವು ವಿಶೇಷವಾಗಿ ಕೋವಿಡ್ ನಂತರದ ಮಕ್ಕಳಲ್ಲಿ ಗಮನಾರ್ಹ ಕಾಳಜಿಯಾಗುತ್ತಿದೆ. ಮಕ್ಕಳು ದೀರ್ಘಕಾಲದವರೆಗೆ ಪರದೆಗಳ ಮೇಲೆ ಕೇಂದ್ರೀಕರಿಸಿ...
ಜಮೀನು ಒತ್ತುವರಿ ವಿವಾದ; ಹೈಕೋರ್ಟ್ ಮೆಟ್ಟಿಲೇರಿದ ಹೆಚ್ಡಿಕೆ, ಬಲವಂತದ ಕ್ರಮಕ್ಕೆ ತಡೆ

ಜಮೀನು ಒತ್ತುವರಿ ವಿವಾದ; ಹೈಕೋರ್ಟ್ ಮೆಟ್ಟಿಲೇರಿದ ಹೆಚ್ಡಿಕೆ, ಬಲವಂತದ ಕ್ರಮಕ್ಕೆ ತಡೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜಧಾನಿ ಹೊರವಲಯದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕುಟುಂಬ ಒತ್ತುವರಿ ಮಾಡಿದೆ ಎನ್ನಲಾದ ಜಮೀನು ವಿಚಾರದಲ್ಲಿ ಕಾನೂನು ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಮನಗರ ತಹಶೀಲ್ದಾರ್‌ ಅವರು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೋಟೀಸ್ ನೀಡಿದ್ದಾರೆ ಎನ್ನಲಾಗಿದ್ದು, ಇದನ್ನು ಪ್ರಶ್ನಿಸಿ ಕುಮಾರಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಈ ವಿಚಾರದಲ್ಲಿ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಮುಂದಿನ ಆದೇಶದವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ ತಾಲ್ಲೂಕು ತಹಶೀಲ್ದಾರ್‌ ಅವರಿಗೆ ನ್ಯಾಯಪೀಠ ಆದೇಶಿಸಿದ್ದು, ಇದರಿಂದಾಗಿ ಕುಮಾರಸ್ವಾಮಿ ಸ್ವಲ್ಪ ನಿರಾಳರಾಗಿದ್ದಾರೆ....