Monday, March 30

Author: info@rajasdigital.com

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿ ಇಂಗಿತ?

ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹೊರಟ್ಟಿ ಇಂಗಿತ?

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆಬೆಳಿಗ್ಗೆಯಷ್ಟೇ ಹುದ್ದೆ ತೊರೆಯುವ ಬಗ್ಗೆ ಹೊರಟ್ಟಿ ಮಾತನಾಡಿದ್ದರು. ಆ ಸುದ್ದಿಗೋಷ್ಠಿಯ ಬೆನ್ನಲ್ಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಾಡಿದೆ‌. ಉಪ ಸಭಾಪತಿಗೆ ಪತ್ರ? ಈ ನಡುವೆ ವಿಧಾನಪರಿಷತ್ ಉಪಸಭಾಪತಿ ಪ್ರಾಣೇಶ್​ ಅವರಿಗೆ ಬಸವರಾಜ ಹೊರಟ್ಟಿಯವರು ಪತ್ರ ಬರೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಭಾಪತಿ ಹೊರಟ್ಟಿ, ತಾವು ರಾಜೀನಾಮೆ ಪತ್ರ ಸಿದ್ದಪಡಿಸಿದ್ದೇನೆಯೇ ಹೊರತು ಅಧಿಕೃತವಾಗಿ ನೀಡಿಲ್ಲ ಎಂದಿದ್ದಾರೆ. ತಮ್ಮ ಕಚೇರಿ ಸಿಬ್ಬಂದಿಯಿಂದ ಸಹಿ ಇಲ್ಲದ ಪತ್ರ ಸೋರಿಕೆಯಾಗಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ....
ದೋಸ್ತಿಗಳು ದೂರ ದೂರ? ಮುಸ್ಲಿಮರ ಟೆಂಡರ್ ಮೀಸಲಾತಿ ಹೋರಾಟದಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ಇಂಗಿತ

ದೋಸ್ತಿಗಳು ದೂರ ದೂರ? ಮುಸ್ಲಿಮರ ಟೆಂಡರ್ ಮೀಸಲಾತಿ ಹೋರಾಟದಲ್ಲಿ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ಇಂಗಿತ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿಚಾರದಲ್ಲಿ ಮಿತ್ರ ಪಕ್ಷ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳಲು ಜೆಡಿಎಸ್ ನಿರ್ಧರಿಸಿದೆ. ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿರುದ್ಧದ ಬಿಜೆಪಿ ಹೋರಾಟದಲ್ಲಿ ಕೈಜೋಡಿಸುವುದಿಲ್ಲ ಎಂದು ಜೆಡಿಎಸ್ ನಾಯಕರು ತಿಳಿಸಿದ್ದಾರೆ.ಈ ಸಂಬಂಧ ಬೆಂಗಳೂರಿನಲ್ಲಿ ಶನಿವಾರ ನಡೆದ ಜೆಡಿಎಸ್ ನಾಯಕರ ಸಭೆಯಲ್ಲಿ ಗಹನವಾದ ಚರ್ಚೆ ನಡೆದಿದೆ. ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿರೋಧಿಸಿ ಬಿಜೆಪಿ ನಡೆಸುವ ಹೋರಾಟದಲ್ಲಿ ಭಾಗವಹಿಸಬಾರದೆಂಬ ಅಭಿಪ್ರಾಯ ಜೆಡಿಎಸ್ ನಾಯಕರಿಂದ ವ್ಯಕ್ತವಾಗಿದೆ ಎನ್ನಲಾಗಿದೆ.ಬಿಜೆಪಿ ಜೊತೆಗೆ ರಾಜಕೀಯ ಮೈತ್ರಿ ಮಾಡಿಕೊಂಡರೂ ಸಿದ್ಧಾಂತ ಮತ್ತು ತತ್ವಗಳಲ್ಲಿ ತಮ್ಮ ಪಕ್ಷ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಂದೇಶ ಸಾರಿರುವ ಜೆಡಿಎಸ್ ನಾಯಕರು, ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿಚಾರವು ಸೈದ್ದಂತಿಕ ಹೋರಾಟವಾಗಿದ್ದು ಅದರಿಂದ ದೂರ ಉಳಿಯುವ ಬಗ್ಗೆ ಅನೇಕರು ಅಭಿಪ್ರಾಯ ಮಂಡಿಸಿದ್ದಾರೆ ಎನ್ನಲಾಗಿದೆ. ಬೆಲೆ ಏರಿಕೆ, ದುರಾಡಳಿತ, ಭ್ರಷ್ಟಾಚಾರ ಇತ್ಯಾದಿಗಳ ವಿರುದ್ಧದ ಹೋರಾಟದಲ್ಲಿ ಬಿಜೆಪಿ...
ಮಹಿಳೆಯರ ಅಸಂಯಮಕ್ಕೆ ಆಕ್ರಮಣಶೀಲವಲ್ಲದ ಮೂತ್ರಕೋಶ ಪರೀಕ್ಷೆಗಳ ಪರಿಣಾಮ..

ಮಹಿಳೆಯರ ಅಸಂಯಮಕ್ಕೆ ಆಕ್ರಮಣಶೀಲವಲ್ಲದ ಮೂತ್ರಕೋಶ ಪರೀಕ್ಷೆಗಳ ಪರಿಣಾಮ..

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
ನವದೆಹಲಿ: ಆಕ್ರಮಣಶೀಲವಲ್ಲದ ಮೂತ್ರಕೋಶ ಒತ್ತಡ ಪರೀಕ್ಷೆಗಳು ಆಕ್ರಮಣಕಾರಿ ಮೌಲ್ಯಮಾಪನಗಳಷ್ಟೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೊಸ ಸಂಶೋಧನೆ ತಿಳಿಸಿದೆ.ಸ್ಕಾಟ್ಲೆಂಡ್‌ನ ಅಬರ್ಡೀನ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ಅಧ್ಯಯನವು, ನಿರಂತರ ಮೂತ್ರ ಅಸಂಯಮ ಅಥವಾ ಅತಿಯಾದ ಮೂತ್ರಕೋಶ ಹೊಂದಿರುವ ಮಹಿಳೆಯರು, ಮುಖ್ಯವಾಗಿ ಮೂತ್ರ ವಿಸರ್ಜಿಸಲು ಹಠಾತ್ ತುರ್ತುಸ್ಥಿತಿಯಿಂದ ನಿರೂಪಿಸಲ್ಪಟ್ಟವರು, ಆಕ್ರಮಣಕಾರಿ ಮೂತ್ರಕೋಶ ಒತ್ತಡ ಪರೀಕ್ಷೆಗಳನ್ನು ತಪ್ಪಿಸಬಹುದು ಎಂದು ಸೂಚಿಸುತ್ತದೆ ಎಂಬುದನ್ನು ಅನಾವರಣ ಮಾಡಿದೆ.ಆಕ್ರಮಣಕಾರಿ ಯುರೊಡೈನಾಮಿಕ್ಸ್ ಪರೀಕ್ಷೆ - ಸಾಮಾನ್ಯವಾಗಿ 40 ವರ್ಷಗಳಿಗೂ ಹೆಚ್ಚು ಕಾಲ ವೈದ್ಯಕೀಯ ಅಭ್ಯಾಸದಲ್ಲಿ ಬಳಸಲ್ಪಡುತ್ತಿದೆ - ಮೂತ್ರಕೋಶವು ಮೂತ್ರವನ್ನು ಎಷ್ಟು ಚೆನ್ನಾಗಿ ಸಂಗ್ರಹಿಸುತ್ತದೆ ಮತ್ತು ಬಿಡುಗಡೆ ಮಾಡುತ್ತದೆ ಮತ್ತು ಅನೇಕರಿಗೆ ಅನಾನುಕೂಲ ಪರೀಕ್ಷೆಯಾಗಿರಬಹುದು. ಪರೀಕ್ಷೆಗಳು ಮೂತ್ರಕೋಶಕ್ಕೆ ಸೇರಿಸಲಾದ ಕ್ಯಾತಿಟರ್ ಮೂಲಕ ಮೂತ್ರಕೋಶವನ್ನು ನೀರಿನಿಂದ ತುಂಬಿಸುವುದನ್ನು ಒಳಗೊಂಡಿವೆ. ಮೂತ್ರಕೋಶ ಮತ್ತು ಹೊಟ್ಟೆಯೊಳಗಿನ ಒತ್ತಡವನ್ನು ಅಳೆಯಲು ...
ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಐವರ ಬಂಧನ ಬೆನ್ನಲ್ಲೇ ಪ್ರಮೋದ್ ಮಧ್ವರಾಜ್ ವಿರುದ್ಧ ಕೇಸ್

ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ಪ್ರಕರಣ: ಐವರ ಬಂಧನ ಬೆನ್ನಲ್ಲೇ ಪ್ರಮೋದ್ ಮಧ್ವರಾಜ್ ವಿರುದ್ಧ ಕೇಸ್

Focus, ಪ್ರಮುಖ ಸುದ್ದಿ, ರಾಜ್ಯ
ಉಡುಪಿ: ಮೀನು ಕದ್ದ ಆರೋಪದ ಮೇಲೆ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಪೊಲೀಸರು ಬಂಧಿಸಿರುವ ಬೆನ್ನಲ್ಲೀ ಇದೀಗ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲಾಗಿದೆ.ಮೀನುಗಾರರ ಬಂಧನ ವಿರೋಧಿಸಿ ಶನಿವಾರ ಮಲ್ಪೆ ಮೀನುಗಾರರ ಸಂಘಟನೆಗಳು ಮಲ್ಪೆ ಬಂದರಿನಲ್ಲಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮಹಿಳೆಯನ್ನು ಕಟ್ಟಿಹಾಕಿ ಎರಡು ಏಟು ಕೊಟ್ಟದ್ದನ್ನು ಸಮರ್ಥಿಸಿಕೊಂಡಿದ್ದ ಪ್ರಮೋದ್ ಮಧ್ವರಾಜ್, ಕಳ್ಳರನ್ನು ಕಟ್ಟಿ ಹಾಕದೆ ಇನ್ನೇನು ಮಾಡಲು ಸಾಧ್ಯ? ಎಂದು ಪ್ರತಿಭಟನೆಯಲ್ಲಿ ಹೇಳಿದ್ದಾರೆ ಎನ್ನಲಾಗಿದ್ದು, ಈ ಹೇಳಿಕೆ ಹಿನ್ನೆಲೆಯಲ್ಲಿಮಲ್ಪೆ ಠಾಣೆ ಪೊಲೀಸರು ಸ್ವಯಂಪ್ರೇರಿತ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ....
ಭಾರೀ ಮಳೆ; ಬೆಂಗಳೂರಿನಲ್ಲಿ ಅವಾಂತರ, ಮರದ ಕೊಂಬೆ ಬಿದ್ದು ಮಗು ಸಾವು

ಭಾರೀ ಮಳೆ; ಬೆಂಗಳೂರಿನಲ್ಲಿ ಅವಾಂತರ, ಮರದ ಕೊಂಬೆ ಬಿದ್ದು ಮಗು ಸಾವು

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ಭಾರೀ ಮಳೆಯಾಗಿದೆ. ಬೆಂಗಳೂರು ನಗರದಲ್ಲಂತೂ ಮಳೆ ಅವಾಂತರವನ್ನೇ ಸೃಷ್ಟಿಸಿದೆ. VIDEO | Rains brought respite from the heat to Bengaluru residents, but they also caused waterlogging and traffic congestion across several parts of the city on Saturday evening. The India Meteorological Department said Bengaluru city recorded 3.6 mm of rainfall with… pic.twitter.com/xD7AVhH9Ge— Press Trust of India (@PTI_News) March 22, 2025 ಈ ನಡುವೆ, ಮಳೆ ಸಂದರ್ಭದಲ್ಲೇ, ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ಮೂರು ವರ್ಷದ ಹೆಣ್ಣುಮಗು ಸಾವನ್ನಪ್ಪಿ ಘಟನೆ ಮನಕಲಕುವಂತಿದೆ. ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ರಾತ್ರಿ ಈ ಘಟನೆ ನಡೆದಿದೆ. ಗಾಳಿ ಮಳೆಗೆ ರಸ್ತೆ ಬದಿ ಮರ ಬೈಕ್ ಮೇಲೆ ಬಿದ್ದಿದೆ. ಬೈಕ್ ನಲ್ಲಿತಂದೆ ಜೊತೆ ತೆರಳುತ್ತಿದ್ದ ರಕ್ಷಾ ಎಂಬ ಮಗುವೀಣೆ ತಲೆ ಮೇಲೆಯೇ ಮರದ ತುಂಡು ಬಿದ್ದಿದೆ. ಕೂಡಲೇ ಆಕೆಯನ್ನು...
ಇದೀಗ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣರ ‘ಸಿಕಂದರ್’ ಬಗ್ಗೆಯೇ ಕೌತುಕ..

ಇದೀಗ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣರ ‘ಸಿಕಂದರ್’ ಬಗ್ಗೆಯೇ ಕೌತುಕ..

Focus, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ಸಿನಿಮಾ
ಬಾಲಿವುಡ್ ನಟ ನಟ ಸಲ್ಮಾನ್ ಖಾನ್ ಅವರ ಆ್ಯಕ್ಷನ್ ಡ್ರಾಮಾ 'ಸಿಕಂದರ್' ಸಿನಿಮಾ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.https://www.youtube.com/watch?v=pzuAltuKXUoಈ ಸಿನಿಮಾ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಸಲ್ಮಾನ್ ಖಾನ್, ತಮ್ಮ 'ಸಿಕಂದರ್ ಚಿತ್ರ' ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. View this post on Instagram  A post shared by Salman Khan (@beingsalmankhan)...
2026 ರ ತಮಿಳುನಾಡು ಚುನಾವಣೆಗೆ ಕಮಲ್ ಹಾಸನ್ ತಯಾರಿ: MNMಗೆ ಹೊಸ ಪದಾಧಿಕಾರಿಗಳ ನೇಮಕ

2026 ರ ತಮಿಳುನಾಡು ಚುನಾವಣೆಗೆ ಕಮಲ್ ಹಾಸನ್ ತಯಾರಿ: MNMಗೆ ಹೊಸ ಪದಾಧಿಕಾರಿಗಳ ನೇಮಕ

Focus, ದೇಶ-ವಿದೇಶ, ಪ್ರಮುಖ ಸುದ್ದಿ
ಚೆನ್ನೈ: ತಮಿಳು ಸೂಪರ್‌ಸ್ಟಾರ್ ಮತ್ತು ಮಕ್ಕಳ್ ನೀಧಿ ಮೈಯಂ (MNM) ಅಧ್ಯಕ್ಷ ಕಮಲ್ ಹಾಸನ್ ಅವರು 2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳ ಭಾಗವಾಗಿ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.ಇತ್ತೀಚೆಗೆ ಡಿಎಂಕೆ ನೇತೃತ್ವದ ಪಕ್ಷದೊಂದಿಗೆ ಕೈಜೋಡಿಸಿದ ಕಮಲ್ ಹಾಸನ್, ನಾಲ್ಕು ರಾಜ್ಯ ಕಾರ್ಯದರ್ಶಿಗಳು ಮತ್ತು ಎಂಟು ಜಿಲ್ಲಾ ಕಾರ್ಯದರ್ಶಿಗಳನ್ನು ಒಳಗೊಂಡ 13 ಹೊಸ ಪದಾಧಿಕಾರಿಗಳ ತಂಡವನ್ನು ಅನಾವರಣಗೊಳಿಸಿದರು. ಶನಿವಾರ ಎಂಎನ್‌ಎಂನ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿ ಸಭೆ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ.ಸಭೆಯಲ್ಲಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಹಾಸನ್, ತ್ವರಿತ ಸದಸ್ಯತ್ವ ಡ್ರೈವ್‌ಗಳು, ರಾಜಕೀಯ ಸಂಪರ್ಕ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಪಕ್ಷದ ತಳಮಟ್ಟದ ಉಪಸ್ಥಿತಿಯನ್ನು ಬಲಪಡಿಸುವ ತುರ್ತುಸ್ಥಿತಿಯನ್ನು ಒತ್ತಿ ಹೇಳಿದರು. 'ಇದು ನಿರ್ಣಾಯಕ ಕ್ಷಣ. ಅರ್ಥಪೂರ್ಣ ಪರಿಣಾಮ ಬೀರಲು ನಮ್ಮ ಪ್ರಯತ್ನಗಳು ಹಲವು ಪಟ್ಟು ಹೆಚ್ಚಾಗಬೇಕು ಎಂಬುದನ್ನು ನಾವು ಅರಿತುಕೊಳ್ಳಬೇಕು' ಎಂದು ಅವರು ಹೇಳಿದರು.ನೇಮಕಾತಿಗಳು ಸಾಂಕೇತಿಕವಲ್ಲ ಆದ...
ಸದನದಲ್ಲಿ ಗಲಭೆಗೆ ಪ್ರಚೋದಿಸಿದರೇ ಅಶೋಕ್? ಸ್ಪೀಕರ್’ಗೆ ಕಾಂಗ್ರೆಸ್ ದೂರು, ವಿಪಕ್ಷ ನಾಯಕರ ಅಮಾನತಿಗೆ ಆಗ್ರಹ

ಸದನದಲ್ಲಿ ಗಲಭೆಗೆ ಪ್ರಚೋದಿಸಿದರೇ ಅಶೋಕ್? ಸ್ಪೀಕರ್’ಗೆ ಕಾಂಗ್ರೆಸ್ ದೂರು, ವಿಪಕ್ಷ ನಾಯಕರ ಅಮಾನತಿಗೆ ಆಗ್ರಹ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಿಧಾನಸಭೆಯಲ್ಲಿ ಸದನಕ್ಕೆ ಅಗೌರವ ತೋರಿದ ಆರೋಪದಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಲಾಗಿದೆಯಾದರೂ ಆ ಅಶಿಸ್ತಿಗೆ ಪ್ರಚೋದನೆ ನೀಡಿರುವ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಗಮನಸೆಳೆದಿದೆ. ಈ ಕುರಿತಂತೆ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಸ್ಪೀಕರ್ ಯು.ಟಿ.ಖದರ್ ಅವರಿಗೆ ನೀಡಿದ್ದಾರೆ.ಸಂಸದೀಯ ವಿಶ್ಲೇಷಕರೂ, ವಕೀಲರೂ ಆಗಿರುವ ಮಾಜಿ ಶಾಸಕ ರಮೇಶ್ ಬಾಬು ಅವರು ವಿಧಾನಸಭೆಯ ಅಧಿವೇಶನದಲ್ಲಿ ಶುಕ್ರವಾರ ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ ಸದನವು ಅಂಗೀಕರಿಸಿದ ಪ್ರಸ್ತಾವದ ಲೋಪ ಕುರಿತು ಸ್ಪೀಕರ್ ಅವರ ಗಮನಸೆಳೆದಿದ್ದಾರೆ. ಸದನಕ್ಕೆ ಮತ್ತು ಸಭಾಧ್ಯಕ್ಷರಿಗೆ ಅಗೌರವ ತೋರಿದ ಮತ್ತು ಅಶಿಸ್ತಿನಿಂದ ನಡೆದುಕೊಂಡ ಸದಸ್ಯರನ್ನು ಅಮಾನತ್ತುಗೊಳಿಸುವ ಸಂದರ್ಭ 21-03-2025 ರಂದು ಸದನದಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ.ಪಾಟೀಲ್ ಅವರು ಮಂಡಿಸಿದ ಪ್ರಸ್ತಾವನೆಯ ಮೇಲೆ 18 ಮಂದಿ ಬಿಜೆಪಿ ಶಾಸಕರನ್ನು 6 ...
ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ

ಕರ್ನಾಟಕ ಬಂದ್: ಹಲವೆಡೆ ಪ್ರತಿಭಟನೆ, ಹಲವರು ಪೊಲೀಸ್ ವಶಕ್ಕೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿ ಭಾಷಿಗರಿಂದ ಕನ್ನಡಿಗರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಕನ್ನಡ ಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್​ಗೆ ಕರೆ ನೀಡಿವೆ.ಬಂದ್ ಕರೆ ಬೆಂಬಲಿಸಿ ಹಲವಾರು ಅಂಗಡಿ-ಮುಂಗಟ್ಟುಗಳು ಮುಚ್ಚಿವೆ ಆದರೆ, ವಾಹನ ಸಂಚಾರಕ್ಕೆ ಅಡ್ಡಿಯಾಗಿಲ್ಲ. ಬೆಂಗಳೂರು ಸಹಿತ ರಾಜ್ಯದ ಬಹುತೇಕ ಕಡೆ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. #WATCH | Karnataka: Several pro-Kannada groups have called a bandh in the state today from 6 am to 6 pm, in protest against the alleged assault on a bus conductor in Belagavi for not speaking Marathi. Visuals from Kalaburagi, where Police personnel have been deployed as a… pic.twitter.com/atR3C3pPxw— ANI (@ANI) March 22, 2025ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಬೆಳಗಾವಿ ಸೇರಿದಂತೆ ಹಲವೆಡೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹಲವೆಡೆ ಅಂಗಡಿಗಳನ್ನು ಮುಚ್ಚಿಸುವಂತೆ ಮನವೊಲಿಸುತ...
ನಾಯಕರ ವೀಕ್ನೆಸ್ ಬಗ್ಗೆ ಸಂಶಯ..! ಹನಿಟ್ರ್ಯಾಪ್‌ಗೆ ಒಳಗಾದವರನ್ನು ಮೂರ್ಖರು ಎಂದ ದೇಶಪಾಂಡೆ

ನಾಯಕರ ವೀಕ್ನೆಸ್ ಬಗ್ಗೆ ಸಂಶಯ..! ಹನಿಟ್ರ್ಯಾಪ್‌ಗೆ ಒಳಗಾದವರನ್ನು ಮೂರ್ಖರು ಎಂದ ದೇಶಪಾಂಡೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹನಿಟ್ರ್ಯಾಪ್ ವಿಚಾರ ಭಾರೀ ಕೋಲಾಹಲ ಸೃಷ್ಟಿಸಿದೆ. ಸುಮಾರು 48 ರಾಜಕಾರಣಿಗಳನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರೆ, ಇನ್ನೊಂದೆಡೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ರಾಜ್ಯದಲ್ಲಿ ಕನಿಷ್ಠ 400 ಜನರನ್ನು ಹನಿಟ್ರ್ಯಾಪ್‌ಗೆ ಬಲಿ ಮಾಡಲಾಗಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.ಈ ವಿಚಾರದಲ್ಲಿ ರಾಜಕೀಯ ನಾಯಕರಿಂದ ಆರೋಪ ಪ್ರತ್ಯಾರೋಪ ನಡೆಯುತ್ತಿದೆ. ಈ ವಿಚಾರವು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾಯಕರು ಆಗ್ರಹಿಸಿದ್ದಾರೆ. ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ? ಇದೇ ವೇಳೆ, ಹನಿಟ್ರ್ಯಾಪ್'ಗೆ ಒಳಗಾಗುವರ ವೀಕ್ನೆಸ್ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕೂಡಾ ಗಮನಸೆಳೆದಿದೆ. ಬೇರೆಯವರು ಸುಮ್ಮನೆ ನಿಮ್ಮ ಹತ್ತಿರ ಬರ್ತಾರಾ? ಹನಿಟ್ರ್ಯಾಪ್ ಸುಮ್ಮನೆ ಆಗುತ್ತಾ? ನಾವು ಹಲೋ ಅಂದ್ರೆ ಅವರು ಹಲೋ ಅಂತಾರೆ, ನೀವು ಬಾಯ್ ಅಂದ್ರೆ ಅವರು ಬಾಯ್ ಅಂತಾರೆ ಎಂದು ಹೇಳುವ ಮೂಲಕ ಡಿ.ಕೆ.ಶಿವಕುಮಾರ್ ಹನಿಟ್ರ್ಯಾಪ್ ಅದವರ ವೀಕ್ನೆಸ್ ಬಗ್ಗೆ ಬೊಟ್ಟು ಮ...