Wednesday, April 1

Author: info@rajasdigital.com

ಮಂಜೇಶ್ವರ ಅನಂತೇಶ್ವರ ದೇವಸ್ಥಾನ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದಂತಿ

ಮಂಜೇಶ್ವರ ಅನಂತೇಶ್ವರ ದೇವಸ್ಥಾನ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದಂತಿ

Others
ಚಿತ್ರ : ಮಂಜು ನೀರೇಶ್ವಾಲ್ಯ :ಮಂಜೇಶ್ವರ: ಕರಾವಳಿಯ ಪುರಾಣ ಪ್ರಸಿದ್ಧ ದೇವಾಲಯಗಳಲ್ಲೊಂದಾಗಿರುವ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಸ್ಥಾನ ವಿಶೇಷ ಮಹೋತ್ಸವಕ್ಕೆ ಸಾಕ್ಷಿಯಾಗಿದೆ. ಈ ದೇವಾಲಯದ 221 ನೇ ವರ್ಷದ ಪುನರ್ ಪ್ರತಿಷ್ಠಾ ವರ್ದಂತಿ ಹಾಗೂ ಬೆಳ್ಳಿ ಲಾಲ್ಕಿ ಯ 150 ನೇ ವರ್ಷದ ಸಂಭ್ರಮೋತ್ಸವ ವಿಜೃಂಭಣೆಯಿಂದ ನೆರವೇರಿದೆ.ಸೋಮವಾರ ಬೆಳಿಗ್ಗೆ ಬೆಳ್ಳಿ ಪಲ್ಲಕಿ ಹಗಲೋತ್ಸವ , ಮಧ್ಯಾಹ್ನ ಸಮಾಜ ಭಾಂದವರಿಂದ ಶ್ರೀ ನರಸಿಂಹ ಸ್ತುತಿ ಪಠಣ ದೊಂದಿಗೆ ಪ್ರದಕ್ಷಿಣಾ ಸೇವೆ ನಡೆಯಿತು. ಸಮೃದ್ಧವಾದ ನಿರೀಕ್ಷಣಾ ವಸ್ತುಗಳು ಶ್ರೀ ದೇವರಿಗೆ ವಾದ್ಯ ಘೋಷ್ಠಿಯೊಂದಿಗೆ ಸಮರ್ಪಣೆ ಮಡಿದ ಸನ್ನಿವೇಶವೂ ಭಕ್ತ ಸಮೂಹದ ಗಮನಕೇಂದ್ರೀಕರಿಸಿತು.ರಾತ್ರಿ 150 ನೇ ವರ್ಷದ ಬೆಳ್ಳಿ ಲಾಲಕಿಗೆ ಅಪೂರ್ವ ಅಲಂಕಾರದೊಂದಿಗೆ ಉತ್ಸವ ಹಾಗೂ ಪೂಜಾ ಸೇವೆ, ಉತ್ಸವದಲ್ಲಿ ಅದ್ಧುರಿ ವಾದ್ಯಘೋಷ್ಠಿ, ಕಣ್ಮನ ಸಂತೈಸುವ ವಿಶೇಷ ದೀಪಾರಾಧನೆ ನೆರವೇರಿತು....
ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು, ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷ ಸಂಘಟಿಸಿ

ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು, ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷ ಸಂಘಟಿಸಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಯುವ ಕಾಂಗ್ರೆಸ್ ಚುನಾವಣೆ ಮುಗಿದಿದೆ. ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಒಗ್ಗಟ್ಟಾಗಿ ಸೈದ್ಧಾಂತಿಕವಾಗಿ ರಾಜಕೀಯ ಎದುರಾಳಿಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಎಲ್ಲಾ ಬೂತ್ ಮಟ್ಟದಲ್ಲಿ ಹೋರಾಟ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.ಅರಮನೆ ಮೈದಾನದಲ್ಲಿ ಸೋಮವಾರ ನಡೆದ 'ಯುವ ಸಂಕಲ್ಪ' ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಮಾತನಾಡಿದ ಶಿವಕುಮಾರ್, ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಿದೆವು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನನ ಅದಿಕಾರಕ್ಕೆ ಬಂದಂತೆ ಎಂದರು.ರಾಜಕೀಯದಲ್ಲಿ ಚುನಾವಣೆ ಗೆಲುವು ಸೋಲು ಸಹಜ. ಚುನಾವಣೆಯಲ್ಲಿ ಸ್ಪರ್ಧಿಸಿದವರೆಲ್ಲಾ ಗೆಲ್ಲಲು ಆಗುವುದಿಲ್ಲ. ಚುನಾವಣೆಯಲ್ಲಿ ಗೆದ್ದವರೆಲ್ಲಾ ನಾಯಕರಲ್ಲ. ಯಾರು ಪ್ರಾಮಾಣಿಕವಾಗಿ ಪಕ್ಷವನ್ನು ಶಿಸ...
ಆಶಾ ಕಾರ್ಯಕರ್ತೆಯರ ನಿರ್ಲಕ್ಷ್ಯ.. ನುಡಿದಂತೆ ನಡೆಯದ ಸಿಎಂ: ಗೌರವ ಧನ ಹೆಚ್ಚಿಸಿ, ಇತರ ರಾಜ್ಯಗಳಂತೆ ಎಲ್ಲ ಸೌಲಭ್ಯ ಕೊಡಿ ಎಂದು ಆಗ್ರಹ

ಆಶಾ ಕಾರ್ಯಕರ್ತೆಯರ ನಿರ್ಲಕ್ಷ್ಯ.. ನುಡಿದಂತೆ ನಡೆಯದ ಸಿಎಂ: ಗೌರವ ಧನ ಹೆಚ್ಚಿಸಿ, ಇತರ ರಾಜ್ಯಗಳಂತೆ ಎಲ್ಲ ಸೌಲಭ್ಯ ಕೊಡಿ ಎಂದು ಆಗ್ರಹ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ಅರೋಗ್ಯ ಕ್ಷೇತ್ರದಲ್ಲಿ ಅವಿರತ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತೆ ಹೋರಾಟಕ್ಕೆ ತಯಾರಿ ನಡೆಸಿದ್ದಾರೆ. ಬೇಡಿಕೆ ಈಡೇರಿಸುವ ಸಂಬಂಧ ಮುಖ್ಯಮಂತ್ರಿಯವರು ನುಡಿದಂತೆ ನಡೆಯಬೇಕೆಂದು ಆಗ್ರಹಿಸಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಆಯವ್ಯಯದಲ್ಲಿ ರಾಜ್ಯದ ಸುಮಾರು 2.5 ಲಕ್ಷ ಅಂಗನವಾಡಿ-ಬಿಸಿಯೂಟ ಕಾರ್ಯಕರ್ತೆಯರಿಗೆ 1000 ರೂಪಾಯಿ ಹೆಚ್ಚಿಸಿದಂತೆ 42, ಸಾವಿರ ಆಶಾ ಕಾರ್ಯಕರ್ತೆಯರಿಗೂ 1000 ರೂಪಾಯಿ ಹೆಚ್ಚಿಸಿ, ಇದೇ ಬಜೆಟ್‌ನಲ್ಲಿ ಸೇರಿಸಿ ಆದೇಶಿಸಬೇಕು ಎಂದು ಒತ್ತಾಯಿಸಿದೆ.ಈ ಸಂಬಂಧ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ ಹಾಗೂ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಅವರು ಸರ್ಕಾರದ ಮುಂದಿಟ್ಟಿರುವ ಬೇಡಿಕೆ ಗಮನಸೆಳೆದಿದೆ. ಮುಖ್ಯ ಮಂತ್ರಿ ಘೋಷಿಸಿರುವಂತೆ ಎಪ್ರಿಲ್ 2025ರಿಂದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಸೇರಿಸಿ ಕನಿಷ್ಟ ಮಾಸಿಕ 10,000 ರೂಪಾಯಿ ಗೌರವಧನ ಮತ್ತು ಈ ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾದ 1,000 ರೂ.ಪಾಯಿ ಹೆಚ್ಚಳ ಸೇರಿಸಿ ಅಧಿಕೃತ ಆದೇಶ ಮಾಡಬೇಕೆಂದು ಒತ್ತಾಯಿಸಿ ಹಾಗೂ 'ನುಡಿದಂತೆ ನ...
ಯುವನಿಧಿ ಯೋಜನೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ: ಡಾ. ಶರಣ್ ಪ್ರಕಾಶ್ ಪಾಟೀಲ್

ಯುವನಿಧಿ ಯೋಜನೆ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲ: ಡಾ. ಶರಣ್ ಪ್ರಕಾಶ್ ಪಾಟೀಲ್

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದಂತೆ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿದ ಪದವೀಧರರಿಗೆ ಯುವನಿಧಿ ಗ್ಯಾರಂಟಿ ಯೋಜನೆಯಡಿ ನೀಡಲಾಗುತ್ತಿರುವ ಆರ್ಥಿಕ ಸಹಾಯವನ್ನು ನೀಡಲು ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.ಸೋಮವಾರದ ವಿಧಾನಪರಿಷತ್ ಕಲಾಪದಲ್ಲಿ ಬಿಜೆಪಿಯ ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಕೊಟ್ಟ ವಾಗ್ದಾನದಂತೆ ನಡೆದುಕೊಳ್ಳುತ್ತೇವೆ. ಚುನಾವಣೆಗೂ ಮುನ್ನ ಜನತೆಗೆ ಯಾವ ಭರವಸೆಯನ್ನು ಕೊಟ್ಟಿದ್ದೇವೋ ಅವೆಲ್ಲವನ್ನೂ ಈಡೇರಿಸಲು ನಾವು ಬದ್ಧರಾಗಿದ್ದೇವೆ. ಯುವನಿಧಿ ಯೋಜನೆಯನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ವದಂತಿಗಳಿಗೆ ತೆರೆ ಎಳೆದರು.ಕೆಲವು ತಾಂತ್ರಿಕ ಕಾರಣಗಳಿಂದ ಯುವನಿಧಿ ಯೋಜನೆಯಡಿ ನೀಡಲಾಗುತ್ತಿರುವ ಆರ್ಥಿಕ ನೆರವು ವಿಳಂಬವಾಗಿರಬಹುದು. ಹಾಗೆಂದು ಇದನ್ನು ಸ್ಥಗಿತ ಮಾಡುತ್ತೇವೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಅನುದಾನದ...
ವಯಸ್ಸನ್ನು ಇಸವಿಗಳಲ್ಲಿ ಲೆಕ್ಕಹಾಕಬೇಕಿಲ್ಲ, ‘ರಕ್ತದ ಹನಿ’ ಎಲ್ಲವನ್ನೂ ವಿವರಿಸಬಲ್ಲದು

ವಯಸ್ಸನ್ನು ಇಸವಿಗಳಲ್ಲಿ ಲೆಕ್ಕಹಾಕಬೇಕಿಲ್ಲ, ‘ರಕ್ತದ ಹನಿ’ ಎಲ್ಲವನ್ನೂ ವಿವರಿಸಬಲ್ಲದು

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೈವಿಧ್ಯ
ನವದೆಹಲಿ: ಜಪಾನ್‌ನ ಒಸಾಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ವ್ಯಕ್ತಿಯ ಜೈವಿಕ ವಯಸ್ಸನ್ನು ಅಂದಾಜು ಮಾಡಲು ಹೊಸ AI ಮಾದರಿಯನ್ನು ರೂಪಿಸಿದ್ದಾರೆ. ಇದು ಜನನದ ನಂತರದ ವರ್ಷಗಳನ್ನು ಎಣಿಸುವ ಬದಲು, ಅವರ ದೇಹವು ಎಷ್ಟು ವಯಸ್ಸಾಗಿದೆ ಎಂಬುದರ ಅಳತೆ ವಿಧಾನವಾಗಬಹುದು.ಕೇವಲ ಐದು ಹನಿ ರಕ್ತದ ಹನಿಗಳನ್ನು ಬಳಸಿಕೊಂಡು, ಈ ಹೊಸ ವಿಧಾನವು 22 ಪ್ರಮುಖ ಸ್ಟೀರಾಯ್ಡ್‌ಗಳು ಮತ್ತು ಅವುಗಳ ಪರಸ್ಪರ ಕ್ರಿಯೆಗಳನ್ನು ವಿಶ್ಲೇಷಿಸಿ ಹೆಚ್ಚು ನಿಖರವಾದ ಆರೋಗ್ಯ ಮೌಲ್ಯಮಾಪನವನ್ನು ಒದಗಿಸುತ್ತದೆ.'UDAYA NEWS' ಈಗ 'ಇಂಗ್ಲಿಷ್'ನಲ್ಲೂ ಲಭ್ಯ AI could predict true biological age from 5 drops of bloodಸೈನ್ಸ್ ಅಡ್ವಾನ್ಸಸ್‌ನಲ್ಲಿ ಪ್ರಕಟವಾದ ತಂಡದ ಅದ್ಭುತ ಅಧ್ಯಯನವು ವೈಯಕ್ತಿಕಗೊಳಿಸಿದ ಆರೋಗ್ಯ ನಿರ್ವಹಣೆಯಲ್ಲಿ ಸಂಭಾವ್ಯ ಹೆಜ್ಜೆಯನ್ನು ನೀಡುತ್ತದೆ. ಇದು ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಅಪಾಯಗಳು ಮತ್ತು ಸೂಕ್ತವಾದ ಮಧ್ಯಸ್ಥಿಕೆಗಳನ್ನು ಮೊದಲೇ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ."ನಮ್ಮ ದೇಹವು ಹೋಮಿಯೋಸ್ಟಾಸಿಸ್ ಅನ್ನು ಕಾಪಾಡಿಕೊಳ್ಳಲು ಹಾರ್ಮೋನ...
ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಶ್ವಾಸಕೋಶ ಕ್ಯಾನ್ಸರ್ ಅಪಾಯ; ಸಂಶೋಧಕರು ಹೇಳೋದೇನು?

ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಶ್ವಾಸಕೋಶ ಕ್ಯಾನ್ಸರ್ ಅಪಾಯ; ಸಂಶೋಧಕರು ಹೇಳೋದೇನು?

Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೈವಿಧ್ಯ
ನವದೆಹಲಿ: ಪಾಶ್ಚಿಮಾತ್ಯ ಆಹಾರ ಪದ್ಧತಿಯಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬು ಹೆಚ್ಚಾಗಿದ್ದು, ಶ್ವಾಸಕೋಶದಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನವೊಂದು ಬಯಲುಮಾಡಿದೆ.ಈ ಸಂಶೋಧನೆಯು ಕಳಪೆ ಆಹಾರ ಪದ್ಧತಿ ಮತ್ತು ಯಕೃತ್ತು ಮತ್ತು ಮೇದೋಜ್ಜೀರಕ ಗ್ರಂಥಿಯಂತಹ ಅಂಗಗಳ ಕ್ಯಾನ್ಸರ್ ನಡುವಿನ ಸಂಬಂಧವನ್ನು ತೋರಿಸಿದೆ. ಹೀಗಾಗಿ ಆಹಾರದ ದೀರ್ಘಕಾಲೀನ ಪರಿಣಾಮದತ್ತ ಅಧ್ಯಯನವು ಬೆಳಕುಚೆಲ್ಲಿದೆ.'UDAYA NEWS' ಈಗ 'ಇಂಗ್ಲಿಷ್'ನಲ್ಲೂ ಲಭ್ಯ 'Western diet may raise risk of lung cancer': Study'ಶ್ವಾಸಕೋಶದ ಕ್ಯಾನ್ಸರ್ ಅನ್ನು ಸಾಂಪ್ರದಾಯಿಕವಾಗಿ ಆಹಾರ-ಸಂಬಂಧಿತ ಕಾಯಿಲೆ ಎಂದು ಭಾವಿಸಲಾಗಿಲ್ಲ' ಎಂದು ಫ್ಲೋರಿಡಾ ವಿಶ್ವವಿದ್ಯಾಲಯದ ಸುಧಾರಿತ ಪ್ರಾದೇಶಿಕ ಜೈವಿಕ ಅಣು ಸಂಶೋಧನಾ ಕೇಂದ್ರದ ಅಸೋಸಿಯೇಟ್ ಪ್ರಾಧ್ಯಾಪಕ ಮತ್ತು ನಿರ್ದೇಶಕ ರಾಮನ್ ಸನ್ ಹೇಳಿದ್ದಾರೆ. .'ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ಅಥವಾ ಯಕೃತ್ತಿನ ಕ್ಯಾನ್ಸರ್‌ನಂತಹ ರೋಗಗಳು, ಹೌದು. ಆದಾಗ್ಯೂ, ಶ್ವಾಸಕೋಶದ ಕ್ಯಾನ್ಸರ್‌ಗೆ ಬಂದಾಗ, ಆಹಾರವು ಒಂದು ಪಾತ್ರವನ್ನು ವಹಿಸುತ್...
‘ನನಗೆ ಮೊದಲು ಟಿಕೆಟ್ ಕೊಟ್ಟಿದ್ದು ಕೆ.ಹೆಚ್ ಪಾಟೀಲ್’: ರಾಜಕೀಯ ಗುರುವಿಗೆ ನಮಿಸಿದ ಡಿಕೆಶಿ

‘ನನಗೆ ಮೊದಲು ಟಿಕೆಟ್ ಕೊಟ್ಟಿದ್ದು ಕೆ.ಹೆಚ್ ಪಾಟೀಲ್’: ರಾಜಕೀಯ ಗುರುವಿಗೆ ನಮಿಸಿದ ಡಿಕೆಶಿ

Focus, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
ಗದಗ: ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಗದಗದಲ್ಲಿ ಭಾನುವಾರ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಹೆಚ್.ಕೆ.ಪಾಟೀಲ್ ಸಹಿತ ಅನೇಕ ನಾಯಕರು, ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಹಕಾರಿ ಭೀಷ್ಮ ಎಂದೇ ಜನಜನಿತರಾಗಿರುವ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಗದಗ್ ಕೋ-ಆಪರೇಟಿವ್ ಕಾಟನ್ ಸೇಲ್ಸ್ ಸೊಸೈಟಿಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ತಮ್ಮ ಆದರ್ಶ ನಾಯಕರಾಗಿದ್ದ ಕೆ.ಹೆಚ್.ಪಾಟೀಲ್ ಅವರನ್ನು ಸ್ಮರಿಸಿದ ಡಿ.ಕೆ.ಶಿವಕುಮಾರ್, ಸಹಕಾರ ರಂಗದ ಭೀಷ್ಮ ಕೆ.ಹೆಚ್.ಪಾಟೀಲ್ ಅವರ ಜನಪರ ಕಾಳಜಿಯ ನಿದರ್ಶನಗಳು ನಮ್ಮ ಮುಂದಿವೆ. ಅವರು ಚುನಾವಣೆಯಲ್ಲಿ ಸೋತಾಗ ಕುಗ್ಗದೆ, ಅಧಿಕಾರ ಸಿಕ್ಕಾಗ ಹಿಗ್ಗದೆ ದಕ್ಷತೆಯಿಂದ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ದೃಢ ನಿರ್ಧಾರಗಳನ್ನು ಕೈಗೊಂಡು, ಸಹಕಾರಿ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು ಎಂದರು.ಕೆ.ಹೆಚ್...
ಅಂಡಾಶಯ ಕ್ಯಾನ್ಸರನ್ನು ಪ್ರಚೋದಿಸುವ ಅಪಾಯಕಾರಿ ಕೋಶಗಳ ಬಗ್ಗೆ ತಿಳಿಯಿರಿ..

ಅಂಡಾಶಯ ಕ್ಯಾನ್ಸರನ್ನು ಪ್ರಚೋದಿಸುವ ಅಪಾಯಕಾರಿ ಕೋಶಗಳ ಬಗ್ಗೆ ತಿಳಿಯಿರಿ..

Others
ನವದೆಹಲಿ: ಅಮೆರಿಕದ ಸಂಶೋಧಕರ ತಂಡವು ಫಾಲೋಪಿಯನ್ ಟ್ಯೂಬ್‌ಗಳಲ್ಲಿ ಮಾರಕ ರೂಪದ ಅಂಡಾಶಯ ಕ್ಯಾನ್ಸರನ್ನು ಪ್ರಚೋದಿಸುವ ಹೆಚ್ಚಿನ ಅಪಾಯಕಾರಿ ಕೋಶಗಳ ಬಗ್ಗೆ ಬೆಳಕುಚೆಲ್ಲಿದೆ.ಫಾಲೋಪಿಯನ್ ಟ್ಯೂಬ್ ಪೋಷಕ ಅಂಗಾಂಶ ಅಥವಾ ಸ್ಟ್ರೋಮಾದಲ್ಲಿ ವಾಸಿಸುವ ಪೂರ್ವಗಾಮಿ ಕೋಶಗಳ ಉಪವಿಭಾಗವಾದ ಹೈ-ರಿಸ್ಕ್ ಕೋಶಗಳ ಆವಿಷ್ಕಾರವು ಹೈ-ಗ್ರೇಡ್ ಸೀರಸ್ ಅಂಡಾಶಯ ಕ್ಯಾನ್ಸರ್ (HGSOC) ಅನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ಉತ್ತಮ ವಿಧಾನಗಳಿಗೆ ದಾರಿ ಮಾಡಿಕೊಡಬಹುದು ಎಂದು ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ತಂಡ ಹೇಳಿದೆ.ಇದನ್ನು ಇಂಗ್ಲಿಷ್ ಆವೃತ್ತಿಯಲ್ಲೂ ಓದಿHGSOC ಎಂಬುದು ಫಾಲೋಪಿಯನ್ ಟ್ಯೂಬ್‌ಗಳಲ್ಲಿ ಪ್ರಾರಂಭವಾಗಿ ಅಂಡಾಶಯಗಳಿಗೆ ಹರಡುವ ಒಂದು ರೀತಿಯ ಅಂಡಾಶಯ ಕ್ಯಾನ್ಸರ್ ಆಗಿದೆ. ಇದು ಅಂಡಾಶಯ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ರೂಪವಾಗಿದೆ.“ಅಂಡಾಶಯದ ಕ್ಯಾನ್ಸರ್ ಸ್ತ್ರೀರೋಗ ಕ್ಯಾನ್ಸರ್‌ನಿಂದ ಸಾವಿಗೆ ಪ್ರಮುಖ ಕಾರಣವಾಗಬಲ್ಲದು. ಆದರೆ ಅದನ್ನು ಮೊದಲೇ ಪತ್ತೆಹಚ್ಚಲು ಯಾವುದೇ ಮಾರ್ಗವಿಲ್ಲ ಮತ್ತು ಶಸ್ತ್ರಚಿಕಿತ್ಸೆಯ ಕ್ಯಾಸ್ಟ್ರೇಶನ್ ಹೊರತುಪಡಿಸಿ ಯಾವುದೇ ತಡೆಗಟ್ಟುವ ತಂತ್ರಗಳಿಲ್ಲ. ಇದನ್ನು ಹ...
ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯವೇ ಎರಡು ವರ್ಷ; ಸಂಭ್ರಮಾಚರಣೆಗೆ ತಯಾರಿ

ಸಿದ್ದರಾಮಯ್ಯ ಸರ್ಕಾರಕ್ಕೆ ಸದ್ಯವೇ ಎರಡು ವರ್ಷ; ಸಂಭ್ರಮಾಚರಣೆಗೆ ತಯಾರಿ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಗದಗ: ಸಿದ್ದರಾಮಯ್ಯ ಸರ್ಕಾರಕ್ಕೆ ಎರಡು ವರ್ಷ ಪೂರ್ಣಗೊಳ್ಳುತ್ತಿದ್ದು ಸಂಭ್ರಮಾಚರಣೆಗೆ ತಯಾರಿ ನಡೆದಿದೆ.ಗದಗದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪಕ್ಷದ‌ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಂಡ ಹಿನ್ನೆಲೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮಾಚರಣೆ ಬಗ್ಗೆ ಬೆಂಬಲಿಗರ ಒತ್ತಾಸೆಯ ಪತ್ರಕರ್ತರ ಬಗ್ಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು."ಈ ಬಗ್ಗೆ ಹಲವರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಮೊದಲು ಮಂತ್ರಿಗಳಿಗೆ ಪ್ರತಿ ವಿಧಾನಸಭಾ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಎಂದು ಸೂಚನೆ ಕೊಟ್ಟಿದ್ದು,‌ ಇದು ಮೊದಲು ನಡೆಯಲಿ. ಆ ನಂತರ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷಗಳಾಗಿದ್ದು ಈ ಸಂಭ್ರಮಾಚರಣೆಯನ್ನು ಮಾಡಲೇಬೇಕಾಗಿದೆ. ಇದನ್ನೂ ಮಾಡುತ್ತೇವೆ" ಎಂದು ಡಿಕೆಶಿ ತಿಳಿಸಿದರು....
ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿ: ನಾಯಕರ ಸ್ಮರಣೆ

ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿ: ನಾಯಕರ ಸ್ಮರಣೆ

Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಗದಗ: ಸಹಕಾರಿ ಧುರೀಣ, ಮಾಜಿ ಸಚಿವ ದಿವಂಗತ ಕೆ.ಹೆಚ್. ಪಾಟೀಲ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಗದಗದಲ್ಲಿ ಭಾನುವಾರ ನಡೆಯಿತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವರಾದ ಈಶ್ವರ್ ಖಂಡ್ರೆ, ಹೆಚ್.ಕೆ.ಪಾಟೀಲ್ ಸಹಿತ ಅನೇಕ ನಾಯಕರು, ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಹಕಾರಿ ಭೀಷ್ಮ ಎಂದೇ ಜನಜನಿತರಾಗಿರುವ ಕೆ.ಹೆಚ್. ಪಾಟೀಲ್ ಅವರನ್ನು ನಾಯಕರು ಮಹಾಮಾನವತಾವಾದಿ ಎಂದು ಬಣ್ಣಿಸಿದರು.ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ, ಕೆ.ಹೆಚ್ ಪಾಟೀಲ್ ಅವರು ಮಹಾ ಮಾನವತಾವಾದಿಯಾಗಿದ್ದರು. ಜಾತಿ, ಧರ್ಮದ ತಾರತಮ್ಯವಿಲ್ಲದೆ ಸಹಕಾರಿ ಕ್ಷೇತ್ರದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಮುನ್ನಡೆಸಿದವರು ಎಂದು ಸ್ಮರಿಸಿದರು. ಧೀಮಂತ ನಾಯಕ ಕೆ.ಹೆಚ್. ಪಾಟೀಲ್ ಅವರನ್ನು ಸ್ಮರಿಸಲು ನಾವು ಸೇರಿದ್ದೇವೆ. ಪಾಟೀಲರ ಬದುಕು, ಚಿಂತನೆ, ಆದರ್ಶ ಬೇರೆಯವರ ಬದುಕಿಗೆ ದಾರಿ ದೀಪವಾಗಲಿ. ನಾವು ಇತ್ತೀಚೆಗೆ ಮಹಾತ್ಮಾ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನಕ್ಕೆ ಶತಮಾನೋತ್ಸವ ಆಚರಣೆ ...